ಗಂಗಾವತಿ: ದನದಮಾಂಸ ಅಕ್ರಮ ಮಾರಾಟ ಅಧಿಕಾರಿಗಳ ದಾಳಿ; 70 ಕೆಜಿ ಮಾಂಸ ವಶಕ್ಕೆ
Team Udayavani, Jan 13, 2022, 5:33 PM IST
![ಗಂಗಾವತಿ: ದನದಮಾಂಸ ಅಕ್ರಮ ಮಾರಾಟ ಅಧಿಕಾರಿಗಳ ದಾಳಿ; 70 ಕೆಜಿ ಮಾಂಸ ವಶಕ್ಕೆ](https://www.udayavani.com/wp-content/uploads/2022/01/Untitled-1-220-620x372.jpg)
![ಗಂಗಾವತಿ: ದನದಮಾಂಸ ಅಕ್ರಮ ಮಾರಾಟ ಅಧಿಕಾರಿಗಳ ದಾಳಿ; 70 ಕೆಜಿ ಮಾಂಸ ವಶಕ್ಕೆ](https://www.udayavani.com/wp-content/uploads/2022/01/Untitled-1-220-620x372.jpg)
ಗಂಗಾವತಿ: ನಗರದ ಬೇರೂನಿ ಮಸೀದಿ ಹತ್ತಿರ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ 112 ನಂಬರ್ ಗೆ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ, ಪೊಲೀಸ್, ಪಶುವೈದ್ಯಕೀಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿ 70 ಕೆಜಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಬೈಪಾಸ್ ರಸ್ತೆ ಹಾಗೂ ಜಂತಗಲ್ ನಲ್ಲಿದ್ದ ದನದ ಮಾಂಸ ಅಕ್ರಮ ಮಾರಾಟ ಕೇಂದ್ರಗಳನ್ನು ತಾಲೂಕು ಆಡಳಿತ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ತೆರವುಗೊಳಿಸಿದ ನಂತರ ಅನಾಮಧೇಯ ಸ್ಥಳದಲ್ಲಿ ಗೋವುಗಳನ್ನು ಹತ್ಯೆ ಮಾಡಿ ದನದ ಮಾಂಸವನ್ನು ಬೇರೂನಿ ಮಸೀದಿ ಹತ್ತಿರ ಸುಮಾರು ಹತ್ತು ಸೆಡ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ 112 ನಂಬರ್ ಗೆ ಕರೆ ಮಾಡಿ ದೂರು ದಾಖಲು ಮತ್ತು ಸಂಘ ಪರಿವಾರದ ಮುಖಂಡ ಎಚ್.ಶ್ರೀಕಾಂತ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತರು ಮತ್ತು ನಗರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ ತಕ್ಷಣ ನಗರಸಭೆ, ಪೊಲೀಸ್, ಪಶುವೈದ್ಯಕೀಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾಂಸದ ಅಂಗಡಿಗಳ ಮಾಲೀಕರು ಅಲ್ಲಿಂದ ಓಡಿ ಹೋಗಿದ್ದಾರೆ. ದಾಳಿಯ ಸಂದರ್ಭದಲ್ಲಿ ಇದ್ದ ಸುಮಾರು 70 ಕೆಜಿ ಮಾಂಸವನ್ನು ವಶಕ್ಕೆ ಪಡೆದು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಮಾಂಸವನ್ನು ಯಾವ ಪ್ರಾಣಿಯದ್ದು ಎಂದು ಪರೀಕ್ಷೆ ಮಾಡಿದ ನಂತರ ಅಲ್ಲಿದ್ದ ಅಂಗಡಿಗಳ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಅಕ್ರಮ ಮಾಂಸ ಮಾರಾಟದ ಅಂಗಡಿಗಳ ಮೇಲಿನ ದಾಳಿಯ ಸಂದರ್ಭದಲ್ಲಿ ನಗರಸಭೆ ನೈರ್ಮಲ್ಯಾಧಿಕಾರಿ ನಾಗರಾಜ, ಪಿಐ ಟಿ.ವೆಂಕಟಸ್ವಾಮಿ, ಕಂದಾಯ ಗ್ರಾಮಲೆಕ್ಕಾಧಿಕಾರಿ ಅಭಿಷೇಕ ಸೇರಿ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…](https://www.udayavani.com/wp-content/uploads/2025/02/gangavati-150x97.jpg)
![Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…](https://www.udayavani.com/wp-content/uploads/2025/02/gangavati-150x97.jpg)
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
![Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ](https://www.udayavani.com/wp-content/uploads/2025/02/bh-150x110.jpg)
![Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ](https://www.udayavani.com/wp-content/uploads/2025/02/bh-150x110.jpg)
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
![13(1](https://www.udayavani.com/wp-content/uploads/2025/02/131-150x80.jpg)
![13(1](https://www.udayavani.com/wp-content/uploads/2025/02/131-150x80.jpg)
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
![12-](https://www.udayavani.com/wp-content/uploads/2025/02/12--150x90.jpg)
![12-](https://www.udayavani.com/wp-content/uploads/2025/02/12--150x90.jpg)
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
![Shivaraj-Tangadagi](https://www.udayavani.com/wp-content/uploads/2025/02/Shivaraj-Tangadagi-150x105.jpg)
![Shivaraj-Tangadagi](https://www.udayavani.com/wp-content/uploads/2025/02/Shivaraj-Tangadagi-150x105.jpg)
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ