ಗಂಗಾವತಿ: ಈಡಿಗ ಸಮಾಜದಿಂದ ಪ್ರತಿ ಊರಲ್ಲೂ ನಾರಾಯಣ ಗುರುಗಳ ಪೂಜೆ, ಗೌರವ
Team Udayavani, Jan 27, 2022, 12:01 PM IST
ಗಂಗಾವತಿ: ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರಂತೆ ಕೇರಳ ತಮಿಳುನಾಡು ಹಾಗೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಏಳ್ಗೆಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ಧ ಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕೇಂದ್ರ ಸರಕಾರದ ಆಯ್ಕೆ ಸಮಿತಿ ತಿರಸ್ಕರಿಸಿರುವುದನ್ನು ಖಂಡಿಸಿ ಈಡಿಗ ಸಮಾಜ ಬಾಂಧವರು ಬುಧವಾರ ರಾಜ್ಯ ವ್ಯಾಪಿಯಾಗಿ ಪ್ರತಿ ತಾಲೂಕಿನಲ್ಲಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿದರು.
ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಈಡಿಗ ಸಮಾಜದ ಯುವ ಮುಖಂಡ ನ್ಯಾಯವಾದಿ ಸಿ.ನಾಗರಾಜ ಮಾತನಾಡಿ, ನಾರಾಯಣ ಗುರುಗಳು ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆ ಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಸಾರಿದ ಸಂತ, ಮಾನವತಾವಾದಿಯಾಗಿದ್ದು ಇವರ ಜೀವನ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಾಗಬೇಕು. ಕೇರಳ ಸರಕಾರ ಕಳುಹಿಸಿದ ನಾರಾಯಣ ಗುರುಗಳ ಸ್ಥಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿದೆ. ಗುರುಗಳು ಸತ್ಕಾರ್ಯಗಳ ಮೂಲಕ ಜನಮಾನಸದಲ್ಲಿದ್ದು ಪ್ರತಿ ತಾಲೂಕು ಹೋಬಳಿಯಲ್ಲಿ ಗಣರಾಜ್ಯೋತ್ಸವದಂದು ನಾರಾಯಣ ಗುರುಗಳ ಭಾವಚಿತ್ರವಿಟ್ಟು ಪೂಜೆ ಮಾಡಿ ಗಣತಂತ್ರ ದಿನವನ್ನು ಆಚರಣೆ ಮಾಡುವ ಮೂಲಕ ಕೇಂದ್ರ ಸರಕಾರಕ್ಕೆ ಸಂದೇಶ ಕಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಎನ್.ಜಿ.ವಿ ರಾಜ್ಯ ಕಾರ್ಯಾಧ್ಯಕ್ಷ ನಾಗರಾಜ ಗುತ್ತೇದಾರ, ಈಡಿಗ ಸಮಾಜದ ಡಾ| ವಿಶ್ವನಾಥ, ಈ. ರುದ್ರೇಶ ರ‍್ಹಾಳ, ಶರಣಪ್ಪ ಮರಕುಂಬಿ, ಸಿ.ಎಚ್. ಪರಂಜ್ಯೋತಿ, ನಾಗರಾಜ ಜಂತಕಲ್, ಬಸವರಾಜ ಕಾರಟಗಿ, ಈ. ಪರಮೇಶ, ಈ. ಭಾಸ್ಕರ್, ಮದ್ದಾನೆಪ್ಪ ಬಸಾಪಟ್ಟಣ, ರಾಘವೇಂದ್ರ ಜಂತಕಲ್, ಸಂತೋಷ, ಪ್ರಕಾಶ, ನಾಗರಾಜ ಗಂಗಾವತಿ, ಮದನ್, ಸುಜಿತ್, ರಮೇಶ ಸಂತೆಬಯಲು, ಬಸವರಾಜ ವಡ್ಡರಹಟ್ಟಿ, ಸಂದೀಪ್, ಮಂಜುನಾಥ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.