ಸೋಂಕಿತರಿಗೆ ಚಪಾತಿ ಮಾಡಿದ ಗವಿಶ್ರೀ
Team Udayavani, May 23, 2021, 6:59 PM IST
ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗವಿಮಠದ ಶ್ರೀಗಳು, ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ತಾವೇ ಚಪಾತಿ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬಿ ಗಮನ ಸೆಳೆದಿದ್ದಾರೆ.
ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸರಳತೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಠದ ಯಾವ ಕೆಲಸವನ್ನೂ ಇತರರಿಗೆ ಹೇಳದೇ ತಾವೇ ಮುಂದೆ ನಿಂತು ಮಾಡುತ್ತಾ ಬಂದಿದ್ದಾರೆ. ಇದನ್ನು ನೋಡುವ ಭಕ್ತಗಣವು ಶ್ರೀಗಳೇ ಕೆಲಸಕ್ಕೆ ಸಜ್ಜಾಗಿದ್ದಾರೆ. ನಾವೇಕೆ ಸುಮ್ಮನೆ ನಿಲ್ಲಬೇಕೆಂದು ಕಾಯಕದಲ್ಲಿ ತೊಡಗುತ್ತಿದ್ದಾರೆ.
ಹೀಗೆ ಕಾಯಕಕ್ಕೆ ಇತರರಿಗೆ ಪ್ರೇರಣೆಯಾಗುವ ಶ್ರೀಗಳು ಈಚೆಗೆ ಗವಿಮಠದ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಮಠದಿಂದಲೇ ಅಡುಗೆ ಸಿದ್ಧಪಡಿಸಿ ಪ್ಯಾಕೇಟ್ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ದಾಸೋಹ ಭವನದ ಮಹಿಳೆಯರಿಗೆ ಕೋವಿಡ್ ವೇಳೆ ಸ್ಫೂರ್ತಿ ತುಂಬಲು ತಾವೇ ಅಡುಗೆ ಕೋಣೆಗೆ ತೆರಳಿ ಅವರೊಟ್ಟಿಗೆ ಸರಳತೆಯಿಂದಲೇ ಕುಳಿತು ಚಪಾತಿ ಮಾಡಿ ಮಹಿಳೆಯರಿಗೆ ಸ್ಫೂರ್ತಿ ತುಂಬಿ ಗಮನ ಸೆಳೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.