ಗವಿಶ್ರೀಗಳಿಂದ ಸದ್ಭಾವನಾ ಕಾರ್ಯಕ್ರಮ
Team Udayavani, Nov 16, 2019, 2:13 PM IST
ಕಾರಟಗಿ: ಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದ ಶ್ರೀ ಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ನಡೆಯುವ ಕೊಪ್ಪಳ ಗವಿಮಠದ ಶ್ರೀಗಳ ಪ್ರವಚನ ಕಾರ್ಯಕ್ರಮ ಅಂಗವಾಗಿ ಶುಕ್ರವಾರ ಬೆಳಗ್ಗೆ 6:30ಕ್ಕೆ 7ನೇ ವಾರ್ಡ್‌ನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಜನಾ ತಂಡದೊಂದಿಗೆ ಗವಿಮಠದ ಶ್ರೀಗಳು ಸದ್ಭಾವನಾ ಯಾತ್ರೆ ಆರಂಭಿಸಿದರು.
ಸದ್ಭಾವನಾ ಯಾತ್ರೆ ಆಂಜನೇಯ ದೇವಸ್ಥಾನದಿಂದ ಹೊರಟು ಸುಂಕಲಮ್ಮನ ದೇವಸ್ಥಾನದ ಬಳಿಯ ಗುತ್ತೂರ ಆಂಜನೇಯ ಸ್ವಾಮಿ ದೇವಸ್ಥಾನ ಮಾರ್ಗವಾಗಿ ಹರಿಜನ ಕೇರಿಯಿಂದ ಉಪ್ಪಾರ ಓಣಿಯ ಮಾರ್ಗವಾಗಿ ಹಳೆ ನಾಡಕಚೇರಿ ರಸ್ತೆಯ ಮೂಲಕ ಸಂಗಮೇಶ್ವರ ದೇವಸ್ಥಾನದ ರಸ್ತೆಯ ಮೂಲಕ 3ನೇ ವಾರ್ಡ್‌ನ ಕಬ್ಬೇರ ಓಣಿ, ಬೂದಿಯವರ ಓಣಿ ಮುಖಾಂತರ ಸಾಲೋಣಿಯ ಕನಕಬಸವ ಭವನಕ್ಕೆ ಬಂದು ತಲುಪಿದರು. ನಂತರ ಕನಕಬಸವ ಭವನದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀಗಳು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಚಿವ ಸಾಲೋಣಿ ನಾಗಪ್ಪ ಸೇರಿದಂತೆ ಸಮಾಜ ಬಾಂಧವರು ಪುಷ್ಪ ನಮನ ಸಲ್ಲಿಸಿದರು. ನಂತರ ಹೂವಿನ ಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದ ಶ್ರೀಗಳಾದ ಹಿರೇಶಾಂತವೀರ ಮಹಾಸ್ವಾಮಿಗಳು ಮಾತನಾಡಿ, ಭಕ್ತರನ್ನು ಭಕ್ತಿಯಸರೋವರದಲ್ಲಿ ಮುಳುಗಿಸಿದವರು ಕೊಪ್ಪಳದ ಗವಿಮಠದ ಶ್ರೀಗಳು. ಮನುಷ್ಯ ಬದುಕು ನಂದನವನ ವಾಗಬೇಕಾದರೆ ಅವನಲ್ಲಿ ನೈಜತೆ, ತೃಪ್ತಿಯದಾಯಕ ಮನೋಭಾವ ಇರಬೇಕು. ಅಂದಾಗ ಮಾತ್ರ ಆ ಮನುಷ್ಯ ಎಲ್ಲರ ಕಷ್ಟ, ಸುಖಗಳನ್ನು ಅರಿತುಕೊಳ್ಳುತ್ತಾನೆ. ಎಲ್ಲರನ್ನು ಪ್ರೀತಿಸುತ್ತಾನೆ. ಹಾಗೆ ನೋಡಿ ಕಲಿಯುವಂತಹದ್ದು, ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.
ಬಳಗಾನೂರಿನ ಶಿವಶಾಂತ ಶರಣರು, ಶಿವಲಿಂಗಯ್ಯಸ್ವಾಮಿಗಳು ಹಂಚಿನಾಳಮಠ, ವೀರಭದ್ರಯ್ಯಸ್ವಾಮಿಗಳು ತಲೇಖಾನ ಮಠ, ಮರುಳ ಸಿದ್ಧಯ್ಯಸ್ವಾಮಿಗಳು ಹಿರೇಮಠ, ಶಾಸಕ ಬಸವರಾಜ ದಢೇಸುಗೂರ, ಮಾಜಿ ಸಚಿವ ನಾಗಪ್ಪ ಸಾಲೋಣಿ, ವಿರೇಶಪ್ಪ ಚಿನಿವಾಲ, ಶಿವರಡ್ಡಿ ನಾಯಕ, ಗುಂಡಪ್ಪ ಕುಳಗಿ, ಮಲ್ಲಯ್ಯಸ್ವಾಮಿ ಬೇವಿನಾಳ, ಯಂಕಾರಡ್ಡೆಪ್ಪ ಚನ್ನಳ್ಳಿ, ಅಮರೇಶ ಕುಳಗಿ, ಶರಣಪ್ಪ ಪರಕಿ, ಅಯ್ಯಪ್ಪ ಬಂಡಿ, ಖಾಜಾ ಹುಸೇನ್ ಮುಲ್ಲಾ, ಪ್ರವೀಣ ಪುರೋಹಿತ, ವಿಠಲ ಶೇಠ, ಈಶಪ್ಪ ಇಟ್ಟಂಗಿ, ಪ್ರಭು ಉಪನಾಳ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.