Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
ಫಾರಂ-3 ವಿತರಣೆಯ ಶಿಬಿರ ಯಶಸ್ವಿಯಾಗಿದ್ದ 12 ಲಕ್ಷ ರೂ.ಗಳ ತೆರಿಗೆ ಸಂಗ್ರಹ
Team Udayavani, Nov 29, 2024, 5:46 PM IST
ಗಂಗಾವತಿ: ಕಳೆದ 30 ವರ್ಷಗಳಿಂದ ಗಂಗಾವತಿ ಸೇರಿ ರಾಜ್ಯದ ಬಹುತೇಕ ನಗರ ಪ್ರದೇಶಗಳಲ್ಲಿ ಅನಧಿಕೃತ ಲೇಔಟ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸದೇ ಸಾರ್ವಜನಿಕರು ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದು ರಾಜ್ಯ ಸರಕಾರ ಕೂಡಲೇ ರಾಜ್ಯದಲ್ಲಿರುವ ಅನಧಿಕೃತ ಲೇಔಟ್‌ಗಳನ್ನು ದಂಡ ಸಮೇತ ಸಕ್ರಮಗೊಳಿಸಿ ಗ್ಯಾರಂಟಿ ಯೋಜನೆಗಳಿಂದ ಖಾಲಿಯಾಗಿರುವ ಖಜಾನೆ ತುಂಬಿಸಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಿ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಸಲಹೆ ನೀಡಿದರು.
ಅವರು ನಗರದ ರಾಣಾ ಪ್ರತಾಪಸಿಂಗ್ ವೃತ್ತದ ಬಳಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಫಾರಂ 3 ವಿತರಣೆಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಂಗಾವತಿಯಲ್ಲಿ 30 ಸಾವಿರ ಆಸ್ತಿಗಳು ನಗರಸಭೆಯಲ್ಲಿ ನೋಂದಣಿಯಾಗಿದ್ದು ಇವುಗಳಲ್ಲಿ ಅರ್ಧಕರ್ಧ ಆಸ್ತಿಗಳಿಗೆ ಫಾರಂ 3 ದಾಖಲೆ ಇಲ್ಲದೇ ಈ ಕುರಿತು ಪೌರಾಯುಕ್ತರಿಗೆ ಹಲವು ಭಾರಿ ಸೂಚನೆಯ ಹಿನ್ನೆಲೆಯಲ್ಲಿ ವಿಶೇಷ ಶಿಬಿರದ ಮೂಲಕ ಈಗಾಗಲೇ 12 ನೂರು ಫಾರಂ 3 ದಾಖಲೆಗಳನ್ನು ವಿತರಿಸಲಾಗಿದ್ದು ಇದರಿಂದ 10 ಲಕ್ಷ ಕ್ಕೂ ಹೆಚ್ಚು ತೆರಿಗೆ ಆದಾಯ ಸಂಗ್ರಹವಾಗಿದೆ.
ರಾಜ್ಯ ಸರಕಾರ ಹಣಕಾಸು ತೊಂದರೆಯಾಗಿದ್ದು ಅನಧಿಕೃತ ಲೇಔಟ್‌ಗಳನ್ನು ಅಧಿಕೃತ ಮಾಡುವ ಮೂಲಕ ದಂಡ ಸಂಗ್ರಹ ಮಾಡಿ ಖಜಾನೆ ತುಂಬಿಸಬಹುದಾಗಿದೆ. ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಅನಧಿಕೃತ ಲೇಔಟ್ ಸಕ್ರಮ ಮಾಡುವಂತಹ ಬಿಲ್ ಮಂಡನೆಯಾಗಿದ್ದು ಬಿಲ್ ಚರ್ಚೆಯಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಸರಕಾರದ ಗಮನ ಸೆಳೆಯಲಾಗುತ್ತದೆ. ಇದರಿಂದ ಮೂಲಸೌಕರ್ಯ ವಂಚಿತ ನಗರ ಪ್ರದೇಶದ ಅನಧಿಕೃತ ಲೇಔಟ್‌ಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗುತ್ತದೆ. ಗಂಗಾವತಿ ನಗರಸಭೆ ಅಧ್ಯಕ್ಷರು ಪೌರಾಯುಕ್ತರು ಅತ್ಯುತ್ತಮವಾಗಿ ಕಾರ್ಯ ಮಾಡಿದ್ದು ನ.25 ರಿಂದ ಡಿ.05 ವರೆಗೆ ಫಾರಂ 3 ವಿತರಣೆಯ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ನಗರದ ರಸ್ತೆ, ಚರಂಡಿ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಶೀಘ್ರ ಜಾರಿ ಆಗಲಿದೆ. ವಾರ್ಡುಗಳಲ್ಲಿ ರಸ್ತೆ ಹಾಗೂ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಯೂ ಶೀಘ್ರ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ರೆಡ್ಡಿಯವರ ಆಪ್ತರಾದ ಅಲಿಖಾನ್, ನಗರಸಭೆ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷೆ ಪಾರ್ವತಮ್ಮ,ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ನೀಲಕಂಠಪ್ಪ,ಉಮೇಶ, ಪರಶುರಾಮ ಮಡ್ಡೇರ್,ಉಮೇಶ ಸಿಂಗನಾಳ,ಶರಭೋಜಿ ರಾವ್,ಮಹಮದ್ ಉಸ್ಮಾನ್,ಅಬ್ದುಲ್ ಜಬ್ಬಾರ್ ಸತ್ತರಸಾಬ್,ನವೀನಕುಮಾರ ಪಾಟೀಲ್ ಮುಖಂಡರಾದ ಮನೋಹರಗೌಡ, ವಿರೂಪಾಕ್ಷಗೌಡ ನಾಯಕ. ಪಂಪಣ್ಣ ನಾಯಕ,ಡಿ.ಕೆ.ಆಗೋಲಿ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.