ಅಂತಿಮ ಹಂತದಲ್ಲಿ ಮಾಸ್ಟರ್ ಪ್ಲ್ಯಾನ್ ಮಾರ್ಪಾಡು
ಹಂಪಿ ಅಭಿವೃದ್ಧಿಪ್ರಾಧಿಕಾರದಿಂದ ಸಿದ್ಧತೆ! 15 ಹಳ್ಳಿಗಳ ಕೈಬಿಡುವಂತೆ ಮನವಿ
Team Udayavani, Feb 18, 2021, 7:32 PM IST
ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಮಾಡಿಫೈ ಮಾಡಲು ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಹೊಸಪೇಟೆ ಹೋಟೆಲ್ ಲಾಬಿಗೆ ಮಣಿಯದೇ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಆನೆಗೊಂದಿಯಲ್ಲಿ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿದ್ದು ಉಳಿದ ಹಳ್ಳಿಗಳಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಯಿಂದ ಗುರುತಿಸಲ್ಪಟ್ಟ ಸ್ಮಾರಕಗಳಿಲ್ಲ. ಆದ್ದರಿಂದ ಈ ಬಾರಿ ಪ್ರಾಧಿ ಕಾರದ ಮಾಸ್ಟರ್ ಪ್ಲಾನ್ ಮಾಡಿಫೈ ಮಾಡುವ ಸಂದರ್ಭದಲ್ಲಿ ಆನೆಗೊಂದಿ ಹಾಗೂ ಇತರೆ 15 ಹಳ್ಳಿಗಳನ್ನು ಪ್ರಾಧಿ ಕಾರದ ವ್ಯಾಪ್ತಿಯಿಂದ ಹೊರಗಿಡಲು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಹಂಪಿ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಪರಿಣಾಮ ಅಪಾಯದ ಅಂಚಿನಲ್ಲಿರುವ ಹಂಪಿಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಿದ್ದರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2002ರಲ್ಲಿ ಹಂಪಿಯ 14, ಆನೆಗೊಂದಿಯ 15 ಗ್ರಾಮ ಸೇರಿಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ 2005ರಲ್ಲಿ ಮಾರ್ಚಸೂಚಿ ಬಿಡುಗಡೆ ಮಾಡಿತ್ತು.
ನಿಯಮದ ಪ್ರಕಾರ ಪ್ರಾಧಿ ಕಾರದ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಅಕ್ರಮ ಕಟ್ಟಡ, ವ್ಯಾಪಾರ-ವಹಿವಾಟು, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ ಸೇರಿ ಹೊಸ ಯೋಜನೆ ಮಾಡುವಂತಿಲ್ಲ. ಅಗತ್ಯವಿದ್ದರೆ ಪ್ರಾ ಧಿಕಾರದ ಅನಪೇಕ್ಷಣಾ ಪತ್ರ (ಎನ್‌ಒಸಿ) ಪಡೆದು ಕಾರ್ಯ ಮಾಡಬೇಕಿದೆ. ಹೊಸ ಲೇಔಟ್ ರಚನೆ, ಬೃಹತ್ ಕಟ್ಟಡ ನಿರ್ಮಾಣ, ಮೊಬೈಲ್ ಟವರ್ ಅಳವಡಿಕೆಗೆಪೂರ್ಣ ನಿಷೇಧ ಹೇರಲಾಗಿದೆ.
ಪ್ರಾ ಧಿಕಾರದ 1988 ನಿಯಮದ ವಿರುದ್ಧ ನಿರ್ಮಿಸಲಾಗಿದ್ದ ವಿರೂಪಾಪುರಗಡ್ಡಿಯಲ್ಲಿದ್ದ ಅಕ್ರಮ ರೆಸಾರ್ಟ್‌ಗಳನ್ನು ಸುಪ್ರೀಂಕೋರ್ಟ್ ನೆರವಿನಿಂದ ತೆರವುಗೊಳಿಸಲಾಗಿದೆ. ಈ ಹಂಪಿಯಲ್ಲಿರುವ ಸ್ಮಾರಕಗಳ ವಿನ್ಯಾಸಕ್ಕೆ ಮಾರಕವಾಗಿದ್ದ ಎಲ್ಲ ಹೋಟೆಲ್ ವಹಿವಾಟನ್ನು ಈ ಪ್ರ ಕಾರ ನಿಷೇಧಿಸಿದೆ. ವಿರೂಪಾಪುರಗಡ್ಡಿ ತೆರವಿನ ನಂತರ ಇದೀಗ ಪ್ರಾ ಧಿಕಾರದ ಮಾಸ್ಟರ್ ಪ್ಲಾನ್ ಮಾಡಿಫೈ ಮಾಡಲಾಗುತ್ತಿದ್ದು ಸ್ಥಳೀಯರು ಆಕ್ಷೆಪವೆತ್ತಿದ್ದಾರೆ.
ಪ್ರಾಧಿಕಾರದ ನಿಯಮದಂತೆ ಕೇಂದ್ರ-ರಾಜ್ಯ ಪ್ರಾಚ್ಯವಸ್ತು ಪುರಾತತ್ವ ಇಲಾಖೆ ವ್ಯಾಪ್ತಿಯ ಸುತ್ತಲು ವ್ಯಾಪಾರ-ವಹಿವಾಟು ಮಾಡಲು ಅವಕಾಶವಿಲ್ಲ. ಆನೆಗೊಂದಿಯಲ್ಲಿ ಮಾತ್ರ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿದ್ದು ಹನುಮನಹಳ್ಳಿ, ಸಾಣಾಪುರ, ಚಿಕ್ಕರಾಂಪುರ ಕ್ರಾಸ್, ಸಾಣಾಪುರ ತಿರುಮಲಾಪುರ, ಜಂಗ್ಲಿ ರಂಗಾಪುರ ಭಾಗದಲ್ಲಿ ಯಾವುದೇ ಸ್ಮಾರಕಗಳಿಲ್ಲ. ಆದರೂ ಪ್ರಾಧಿಕಾರದವರು ಸ್ಥಳೀಯರನ್ನು ಅಪರಾ ಧಿಗಳಂತೆ ಕಾಣುತ್ತಿದ್ದು ಕೂಡಲೇ ಆನೆಗೊಂದಿ ಭಾಗದ 15 ಹಳ್ಳಿಗಳ ಮೇಲೆ ಹೇರಿರುವ ಅವೈಜ್ಞಾನಿಕ ನಿಯಮ ಕೂಡಲೇ ತೆರವುಗೊಳಿಸುವಂತೆ ಆನೆಗೊಂದಿ, ಸಾಣಾಪುರ, ಸಂಗಾಪುರ, ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಜನರು ಸಂಸದರು, ಶಾಸಕರು, ಸಚಿವರಿಗೆ ಮನವಿ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಋಷಿಮುಖ ಪರ್ವತ, ಆನೆಗೊಂದಿ ನವವೃಂದಾವನ ಗಡ್ಡಿ ಹಾಗೂ ಆನೆಗೊಂದಿ ದೇಗುಲ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇವರಿಗೆ ಊಟ, ವಸತಿ ಕಲ್ಪಿಸಲು ಸುತ್ತಲಿನ ಗ್ರಾಮಗಳಲ್ಲಿ ಸಣ್ಣ ಪುಟ್ಟ ಅಂಗಡಿ- ಮುಂಗಟ್ಟು ಆರಂಭಿಸಲಾಗಿದೆ. ಇವುಗಳ ಮೇಲೆ ಹೊಸಪೇಟೆ ಹೋಟೆಲ್ ಮಾಲೀಕರ ಕೆಂಗಣ್ಣು ಬಿದ್ದಿದ್ದು ಪ್ರಾಧಿ ಕಾರದ ಹೊಸ ಮಾಸ್ಟರ್ ಪ್ಲಾನ್‌ನಲ್ಲಿ ನಿಯಮ ಸರಳಗೊಳಿಸದೇ ಇನ್ನಷ್ಟು ಕಠಿಣಗೊಳಿಸಲು ಒತ್ತಡ ಹಾಕಲಾಗುತ್ತಿದ್ದು ಸ್ಥಳೀಯರ ಮನವಿಗೆ ಪ್ರಾಧಿಕಾರದ ಸ್ಪಂದನೆ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.