ಆಕ್ಸಫರ್ಡ್‌ನಂತೆ ಹಂಪಿ ವಿವಿ ಅಭಿವೃದ್ಧಿ: ಡಾ| ರಮೇಶ
ಇತ್ತೀಚೆಗೆ ಕಡಿಮೆಯಾಗುತ್ತಿದೆ ಓದುವ ಹವ್ಯಾಸ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದೆ ಹಂಪಿ ವಿವಿ
Team Udayavani, Jul 7, 2019, 4:04 PM IST
ಕೊಪ್ಪಳ: ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಠuಪ್ಪ ಗೋರಂಟ್ಲಿ ಅವರ ಕವನ ಸಂಕಲನ 'ಸೇತು ಬಂಧ'ವನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಕೊಪ್ಪಳ: ಹಂಪಿ ವಿಶ್ವವಿದ್ಯಾಲಯ ರಾಜ್ಯದಲ್ಲಿಯೇ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದೆ. ಆಕ್ಸಫರ್ಡ್ ರೀತಿಯಲ್ಲಿ ನಾವು ವಿವಿಯನ್ನು ಅಭಿವೃದ್ಧಿ ಮಾಡಲಿದ್ದೇವೆ ಎಂದು ಹಂಪಿ ವಿವಿ ಕುಲಪತಿ ಡಾ| ರಮೇಶ ಸ.ಚಿ. ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಸಾಹಿತಿ ವಿಠuಪ್ಪ ಗೋರಂಟ್ಲಿ ಅವರ ಸೇತುಬಂಧ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು. ಹಂಪಿ ವಿವಿ ವಿದ್ಯೆಯನ್ನು ನೀಡುವುದಿಲ್ಲ, ಅದು ವಿದ್ಯೆಯನ್ನು ಸೃಷ್ಠಿ ಮಾಡುತ್ತದೆ. ಇದೇ ಆಶಯದಿಂದಲೇ ಅದನ್ನು ಕಂಬಾರ ಅವರು ವಿಶೇಷ ಕಲ್ಪನೆಯ ಮೂಲಕ ಹುಟ್ಟು ಹಾಕಿದ್ದಾರೆ. ನಂತರ ಬಂದ ಕುಲಪತಿಗಳು ಅತ್ಯುತ್ತಮವಾಗಿಯೇ ಮುನ್ನಡೆಸಿಕೊಂಡು ಬಂದಿದ್ದಾರೆ. ನಾನು ಕುಲಪತಿಯಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದು, ಅದನ್ನು ಆಕ್ಸಫರ್ಡ್ ವಿವಿಯಂತೆ ಅಭಿವೃದ್ಧಿ ಮಾಡುವ ಕನಸು ಹೊತ್ತಿದ್ದೇನೆ ಎಂದರು.
ಇದುವರೆಗೂ ಸುಮಾರು 2 ಸಾವಿರ ಪುಸ್ತಕಗಳನ್ನು ಹಂಪಿ ಕನ್ನಡ ವಿವಿ ಹೊರತಂದಿದೆ. ಇದರ ಸಂಖ್ಯೆ ಇನ್ನೂ ಹೆಚ್ಚಳ ಮಾಡುವ ಸದಾಯಶಯ ಹೊಂದಿದ್ದೇನೆ. ವಿಶೇಷವಾಗಿ ಸಂಶೋಧನಾತ್ಮಕ ಕೃತಿಗಳನ್ನು ಹೊರತರುವ ಮೂಲಕ ಕನ್ನಡ ಸಂಪತ್ತನ್ನು ಶ್ರೀಮಂತ ಮಾಡುವ ಪ್ರಯತ್ನವನ್ನು ಸದಾ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಹಂಪಿ ವಿವಿ ವಿಶೇಷ ಎಂದರು.
ಕಾಲೇಜು ಶಿಕ್ಷಣವನ್ನು ಪಡೆಯದ ವಿಠuಪ್ಪ ಗೋರಂಟ್ಲಿ ಅವರಲ್ಲಿ ಸಾಹಿತ್ಯದಲ್ಲಿ ದೊಡ್ಡ ಕೃಷಿ ಮಾಡಿದ್ದಾರೆ. ಅವರು ಸತತವಾಗಿ ಅಧ್ಯಯನ ಮಾಡುತ್ತಲೇ ಪದವಿ ಓದಿದವರು ನಾಚುವಂತೆ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅವರು ಅನೇಕ ಬರಹಗಳು ಮುದ್ರಣ ಕಂಡಿಲ್ಲ ಎನ್ನುವುದು ಗೊತ್ತಾಗಿದ್ದು, ಅವುಗಳನ್ನು ಹಂಪಿ ವಿವಿಯ ಮೂಲಕ ಮುದ್ರಣ ಮಾಡಿಸಲಾಗುವುದು ಎಂದರು.
ಈಗಾಗಲೇ 6 ಕವನ ಸಂಕಲನ ತಂದಿರುವುದು ನಿಜಕ್ಕೂ ಸಾಧನೆಯೇ ಸರಿ. ನಾನು ಸಹ ಹಿಂದೆ ಕವನಗಳನ್ನು ಬರೆದದ್ದು, ನೆನಪಿಗೆ ಬಂದಿತು. ಆದರೆ ನಂತರ ಬರವಣಿಗೆ ಮುಂದುವರಿಸಲು ಆಗಲಿಲ್ಲ ಎಂದರು.
ಕವನ ಸಂಕಲನದ ಕುರಿತು ವಿದ್ವಾಂಸ ಈರಪ್ಪ ಕಂಬಳಿ ಮಾತನಾಡಿ, ವಿಠuಪ್ಪ ಅವರ ಕವನ ಸಂಕಲನ ಅತ್ಯುತ್ತಮವಾಗಿದೆ. ಆದರೆ ಇಂತಹ ಅತ್ಯುತ್ತಮ ಕಾರ್ಯಕ್ರಮಕ್ಕೆ ಯುವಕರು ಬಾರದಿರುವುದು ಬೇಸರ ತಂದಿದೆ ಎಂದರು.
ಸಾಹಿತ್ಯ ಓದುವುದರಿಂದ ವ್ಯಕ್ತಿ ದಿವ್ಯ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ನಾನು ಸಹ ಓದಿನಿಂದಲೇ ಬದುಕಿನ ಎಲ್ಲವನ್ನು ಕಂಡುಕೊಂಡಿದ್ದೇನೆ. ಆದರೂ ಇಂದಿನ ಕಾಲಘಟ್ಟದಲ್ಲಿ ಓದು ತೀರಾ ಕಡಿಮೆಯಾಗಿರುವುದು ಬೇಸರದ ಸಂಗತಿ ಎಂದರು.
ಪ್ರಾಂಶುಪಾಲ ಡಾ| ಸಿ.ಬಿ. ಚಿಲ್ಕರಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಹಿತಿ ವೆಂಕಟರಾಜು, ದೇವರ ದಾಸಿಮಯ್ಯ ಅಧ್ಯಯನ ಪೀಠದ ಡಾ| ಗೋವಿಂದ, ಡಿ.ಎಚ್. ಪೂಜಾರ, ಬಸವರಾಜ ಶೀಲವಂತರ, ಕೆ. ಕಾಳಪ್ಪ, ರಾಜಶೇಖರ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚಿನ್ಮಯಿ ಹಾಗೂ ಪ್ರಿಯಾಂಕ ಪ್ರಾರ್ಥಿಸಿದರು. ವಿಠuಪ್ಪ ಗೋರಂಟ್ಲಿ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜಿ.ಎಸ್. ಗೋನಾಳ ಅವರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.