ಗಾಳಿ- ಮಳೆಗೆ ನೆಲ ಕಚ್ಚಿದ ಅಪಾರ ಪ್ರಮಾಣದ ಬಾಳೆ: ಸಂಕಷ್ಟದಲ್ಲಿ ರೈತರು
Team Udayavani, May 9, 2021, 9:02 AM IST
ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ರವಿವಾರ ರಾತ್ರಿ ಸುರಿದ ಮಳೆ ಹಾಗೂ ಭಾರೀ ಗಾಳಿಗೆ ವಿವಿಧೆಡೆ ರೈತರ ಬೆಳೆ ನೆಲ ಕಚ್ಚಿವೆ. ಇದರಿಂದ ರೈತ ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ ಮುದ್ದಾಬಳ್ಳಿ, ಹ್ಯಾಟಿ ಸೇರಿದಂತೆ ಕೆಲವು ಗ್ರಾಮದಲ್ಲಿ ರವಿವಾರ ರಾತ್ರಿ ಬಿರುಸಿನ ಗಾಳಿ ಹಾಗೂ ಮಳೆ ಸುರಿದಿದೆ. ಕೋವಿಡ್ ಆರ್ಭಟದ ಮಧ್ಯೆ ರೈತನು ಕಷ್ಟಪಟ್ಟು ಬೆಳೆದಿದ್ದ ಬಾಳೆ, ನುಗ್ಗೆ ಸೇರಿದಂತೆ ಇತರೆ ಬೆಳೆಯು ನೆಲ ಕಚ್ಚಿವೆ.
ಒಂದೆಡೆ ಕೋವಿಡ್ ಸಂಕಷ್ಟದಲ್ಲಿ ಬಾಳೆಗೆ ಬೆಲೆ ಇಲ್ಲದ ಪರಿಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಮುಂಗಾರು ಪೂರ್ವ ಗಾಳಿ ಮಳೆಗೆ ಬಾಳೆ ಗಿಡಗಳು ನೆಲ ಕಚ್ಚಿವೆ.
ಮುದ್ದಾಬಳ್ಳಿಯ ರೈತ ಮೈಲಾರಪ್ಪ ಹಟ್ಟಿ ಅವರ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆ ಭಾಗದಲ್ಲಿ ಬಾಳೆ ನೆಲ ಕಚ್ಚಿದೆ. ಇನ್ನೇನು ಬಾಳೆ ಗೊನೆ ಕಟಾವಿಗೆ ಬಂದಿತ್ತು. ಈ ವೇಳೆ ಬಾಳೆ ನೆಲ ಕಚ್ಚಿದ್ದರಿಂದ ರೈತರಿಗೆ ದಿಕ್ಕೇ ತೋಚದಂತಹ ಸ್ಥಿತಿ ಎದುರಾಗಿದೆ.
ಹ್ಯಾಟಿ ಗ್ರಾಮದಲ್ಲೂ ಸಹ ಹಲವು ರೈತರ ಬಾಳೆಯು ಅಪಾರ ಪ್ರಮಾಣದಲ್ಲಿ ನೆಲ ಕಚ್ಚಿವೆ. ಕೆಲವರ ಮನೆಯ ತಗಡು ಹಾರಿ ಹೋಗಿವೆ. ಇದರಿಂದ ಕುಟುಂಬವು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಶಾಸಕರು, ಸಂಸದರು, ತೋಟಗಾರಿಕೆ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.