“ರಸ್ತೆಗೆ ಇಳಿದರೆ ನೇರ ಯಮಲೋಕ್ಕೆ ಕರೆದುಕೊಂಡು ಹೋಗುವೆ” ಕೊಪ್ಪಳದಲ್ಲೊಬ್ಬರು “ಹಲೋ ಯಮ”
Team Udayavani, Apr 18, 2020, 9:40 AM IST
ಕೊಪ್ಪಳ: ಲಾಕ್ ಡೌನ್ ವೇಳೆ ಯಾರಾದ್ರೂ ರಸ್ತೆಗೆ ಇಳಿದರೆ ನೀವೆಲ್ಲರನ್ನೂ ನೇರ ಯಮಲೋಕ್ಕೆ ಕರೆದುಕೊಂಡು ಹೋಗುವೆ ಎಂದು ಇಲ್ಲೊಬ್ಬ ಯಮನ ವೇಷಧಾರಿ ಕೊಪ್ಪಳದ ವಿವಿಧ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಸುತ್ತಾಡಿ ಜನರಿಗೆ ಎಚ್ಚರಿಕೆ ಮೂಡಿಸುತ್ತಿದ್ದಾನೆ.
ಹೌದು… ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಕೊಪ್ಪಳದ ಪೊಲೀಸರು ವಿಭಿನ್ನ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ವೇಷಧಾರಿ ಕುಟುಂಬದ ವ್ಯಕ್ತಿಗೆ ಯಮನ ವೇಷ ಧರಿಸಿ ರಸ್ತೆಯಲ್ಲಿ ಸುತ್ತಾಟ ನಡೆಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವೇಷಧಾರಿ ಕೈಯಲ್ಲಿ ತನ್ನ ವಾಹನ ಎಮ್ಮೆ ಹಿಡಿದುಕೊಂಡು ಯಾರೂ ರಸ್ತೆಗೆ ಇಳಿಯಬೇಡಿ, ಇಳಿದರೆ ನೇರವಾಗಿ ಯಮಲೋಕಕ್ಕೆ ಬರುತ್ತೀರಿ. ನಾನು ನಿಮ್ಮನ್ನ ಕರೆದುಕೊಂಡು ಹೋಗುತ್ತೇನೆ ಎಂದು ಎಚ್ಚರಿಕೆ ಮೂಡಿಸುತ್ತಾ ರಸ್ತೆಯಲ್ಲಿ ಸುತ್ತಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಯಮನ ವೇಷಧಾರಿಯೊಂದಿಗೆ ಕೊಪ್ಪಳ ಡಿಎಸ್ಪಿ ವೆಂಕಟಪ್ಪ ನಾಯಕ್, ಬಿಜೆಪಿ ಮುಖಂಡ ಅಮರೇಶ ಕರಡಿ ಸೇರಿದಂತೆ ಇತರೆ ಮುಖಂಡರು ಬೆಳಗ್ಗೆ ರಸ್ತೆಗಿಳಿದು ಎಲ್ಲರೂ ಕಡ್ಡಾಯ ವಾಗಿ ಲಾಕ್ ಡೌನ್ ನಿಯಮ ಪಾಲಿಸಿ ಎನ್ನುವ ಎಚ್ಚರಿಕೆ ನೀಡಿದರು.
ಕೋವಿಡ್-19 ವೈರಸ್ ಇಡೀ ಜಗತ್ತನ್ನು ಬೆಂಬಿಡದೆ ಕಾಡುತ್ತಿದೆ. ಇದನ್ನು ದೂರ ಮಾಡಲು ಎಲ್ಲರೂ ಮನೆಯಲ್ಲೆ ಇರುವಂತೆ ಜಿಲ್ಲಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.