ಲೇಬರ್ ಸರ್ಕಲ್ ಅಭಿವೃದ್ಧಿಗೆ ಹೈಟೆಕ್ ಪ್ಲ್ಯಾನ್
45 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ,ಅವಶ್ಯವಿದ್ದಲ್ಲಿ ಸರ್ಕಲ್ ವಿಸ್ತರಣೆಗೂ ಚಿಂತನೆ,ಸಿಸಿ ಕ್ಯಾಮೆರಾ ಅಳವಡಿಕೆ
Team Udayavani, Feb 10, 2021, 5:31 PM IST
ಕೊಪ್ಪಳ: ಕೊಪ್ಪಳದಲ್ಲಿ ಆಧುನಿಕತೆ ಬೆಳೆದಂತೆ ಜನದಟ್ಟಣೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ನಗರದಲ್ಲಿನ ಲೇಬರ್ ಸರ್ಕಲ್‌ನಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಈ ಸರ್ಕಲ್ ಅನ್ನು ಹೈಟೆಕ್ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರವು 40-45 ರೂ. ಅನುದಾನದಲ್ಲಿ ಹೊಸ ಯೋಜನೆ ರೂಪಿಸಿದೆ. ವೃತ್ತದಲ್ಲಿಸಿಸಿ ಕ್ಯಾಮೆರಾ, ಸಿಗ್ನಲ್ಸ್ ಸೇರಿ ಅವಶ್ಯವಿದ್ದಲ್ಲಿವೃತ್ತದ ಅಗಲೀಕರಣಕ್ಕೂ ತಯಾರು ಮಾಡಿಕೊಂಡಿದೆ.
ನಗರದಲ್ಲಿ ಕೆಲವೊಂದು ವೃತ್ತಗಳು ಜನರ ಗಮನ ಸೆಳೆಯುತ್ತಿವೆ. ಇಲ್ಲಿನ ಐತಿಹಾಸಿಕಕ್ಕೂ ತೊಂದರೆ ಬಾರದಂತೆ, ಆಧುನಿಕತೆಯನ್ನೂ ಅಳವಡಿಸಿಕೊಂಡು ಕೆಲವು ವೃತ್ತಗಳಅಭಿವೃದ್ಧಿ ಮಾಡಲಾಗಿದೆ. ಬಸವೇಶ್ವರವೃತ್ತ, ಅಶೋಕ ವೃತ್ತ ಹೊರತುಪಡಿಸಿದರೆ, ಗದಗ ರಸ್ತೆಯ ಲೇಬರ್ ಸರ್ಕಲ್‌ಗೆ ಹೊಸ ರೂಪ ಕೊಡಲು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧವಾಗಿದೆ. ಈ ಲೇಬರ್ ಸರ್ಕಲ್‌ಗೆ ಲಾಲ್ ಬಹದ್ದೂರ್‌ಶಾಸ್ತ್ರಿ ವೃತ್ತ, ಸಿಂಪಿ ಲಿಂಗಣ್ಣ ವೃತ್ತ ಎಂದೆಲ್ಲ ನಾಮಾಂಕಿತದಿಂದ ಕರೆಯುತ್ತಾರೆ. ಆದರೆ ಬಹುಪಾಲು ಕಾರ್ಮಿಕ ವರ್ಗವು ಪ್ರತಿ ದಿನ ಬೆಳಗ್ಗೆ ಗ್ರಾಮೀಣ ಭಾಗದಿಂದ ಆಗಮಿಸಿ ಈ ವೃತ್ತದ ಬಳಿಯೇ ನಿಂತು ಕೆಲಸ ಹರಸಿ ಬೇರೆಡೆ ತೆರಳುವುದರಿಂದ ಲೇಬರ್ ಸರ್ಕಲ್ ಎಂದೇ ಹೆಸರು ಪಡೆದಿದೆ. ಅಲ್ಲದೇ, ಈ ವೃತ್ತದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-63 ರಸ್ತೆ ಹಾದು ಹೋಗುವುದರಿಂದ ವಾಹನಗಳ ಸಂಚಾರವೂ ಹೆಚ್ಚಾಗುತ್ತಿದೆ.
ಇನ್ನೂ ಭಾಗ್ಯನಗರ ರೈಲ್ವೇ ಗೇಟ್ ಮೇಲ್ಸೇತುವೆಯೂ ಇದೇ ಸರ್ಕಲ್‌ಗೆ ನೇರ ಸಂಪರ್ಕ ಪಡೆದುಕೊಂಡಿದೆ. ಭಾಗ್ಯನಗರದ ಜನತೆ ಮೇಲ್ಸೇತುವೆ ಮೂಲಕ ಆಗಮಿಸಿ ಲೇಬರ್ ಸರ್ಕಲ್ ಮಾರ್ಗವಾಗಿ ಇತರೆ ರಸ್ತೆಗಳಿಗೆ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ದಿನೇ ದಿನೇ ಈ ಸರ್ಕಲ್‌ನಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವು ತಮ್ಮ ವಿಶೇಷ ಅನುದಾನದಲ್ಲಿ ಈ ಸರ್ಕಲ್ ಅಭಿವೃದ್ಧಿ ಮಾಡಿದರೆ ಜಿಲ್ಲಾ ಕೇಂದ್ರಕ್ಕೂ ಪ್ರಮುಖ ವೃತ್ತವಾಗಿ ಗಮನ ಸೆಳೆಯಲಿದೆ ಎಂಬ ಉದ್ದೇಶದಿಂದ ಈ ಸರ್ಕಲ್ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ದಮಾಡಿದೆ.
45 ಲಕ್ಷ ರೂ.ನಲ್ಲಿ ಅಭಿವೃದ್ಧಿಗೆ ಡಿಪಿಆರ್:
ನಗರಾಭಿವೃದ್ಧಿ ಪ್ರಾಧಿಕಾರವು 45 ಲಕ್ಷ ರೂ.ನಲ್ಲಿ ಈ ವೃತ್ತವನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿ ಹಲವು ತಜ್ಞರ ಅಭಿಪ್ರಾಯವನ್ನು ಪಡೆದಿದೆ. ಬೇರೆ ಬೇರೆ ವೃತ್ತಗಳ ಡಿಜೈನ್‌ಗಳನ್ನು ನೋಡಿದ್ದು, ಈಗಾಗಲೆ ಡಿಪಿಆರ್ ಸಹಿತ ಸಿದ್ಧವಾಗಿದೆ. ಉಳಿದೆಲ್ಲ ವೃತ್ತಗಳಿಗಿಂತ ಇದನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಿ ಜನರಸಂಚಾರಕ್ಕೆ, ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದೆ.
ಸಿಸಿ ಕ್ಯಾಮೆರಾ, ಸಂಚಾರಿ ಸಿಗ್ನಲ್ ಅಳವಡಿಕೆ: ಲೇಬರ್ ಸರ್ಕಲ್ ಅಭಿವೃದ್ಧಿ ಮಾಡಿದ ಬಳಿಕ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಯಾವುದೇ ಚಟುವಟಿಕೆಯ ಮೇಲೆ ನಿಗಾ ಇರಿಸುವ ಯೋಜನೆಯೂ ಇದೆ.ಜೊತೆಗೆ ಈ ವೃತ್ತದಲ್ಲಿ ಹೆಚ್ಚಿನ ಜನದಟ್ಟಣೆ ಇದ್ದರೂ ಸಿಗ್ನಲ್‌ಗಳ ಅಳವಡಿಕೆಯಾಗಿಲ್ಲ.ಹಾಗಾಗಿ ಹೊಸ ಯೋಜನೆಯಲ್ಲಿಸಿಗ್ನಲ್‌ಗಳ ಅಳವಡಿಕೆ ಮಾಡಿ ಈಗಾಗಲೆ ಬಸವೇಶ್ವರ ವೃತ್ತ, ಅಶೋಕ ವೃತ್ತದಲ್ಲಿ ಯಾವ ರೀತಿಯ ಪೊಲೀಸ್ ಬಂದೋಬಸ್ತ್ನಡಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆಯೋ ಅದೇ ಮಾದರಿಯಲ್ಲಿಯೇ ಇಲ್ಲಿ ಸಿಗ್ನಲ್ ವ್ಯವಸ್ಥೆಗೆ ಪ್ಲಾನ್ ಮಾಡಲಾಗಿದೆ.
ಅವಶ್ಯವಿದ್ದರೆ ವೃತ್ತ ಸುತ್ತ ಅಗಲೀಕರಣ: ಪ್ರಸ್ತುತ ಲೇಬರ್ ಸರ್ಕಲ್‌ನ ನಾಲ್ಕೂ ಬದಿಯಲ್ಲಿ ಕೆಲವೊಂದು ಕಡೆ ಒತ್ತುವರಿಯಾಗಿರುವ ಕುರಿತು ಮಾತು ಕೇಳಿ ಬರುತ್ತಿದ್ದು, ವೃತ್ತ ನಿರ್ಮಾಣದ ವೇಳೆ ಅವೆಲ್ಲವನ್ನೂ ತೆರವು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಗೆ ಮುಂದಿನ 20-30 ವರ್ಷಗಳ ದೂರದೃಷ್ಟಿಯಿಂದಅವಶ್ಯವಿದ್ದರೆ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ವೃತ್ತದ ನಾಲ್ಕೂ ಬದಲಿಯಲ್ಲಿಅಗಲೀಕರಣ ಮಾಡಿ ಇನ್ನಷ್ಟು ಹೈಟೆಕ್ ಮಾಡಲು ಪ್ರಾಧಿಕಾರವು ಯೋಜನೆ ಮಾಡಿಕೊಂಡಿದೆ.
ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಕೆಲವು ಪ್ರಮುಖ ವೃತ್ತಗಳ ಜೊತೆಗೆ ಲೇಬರ್ ಸರ್ಕಲ್ ವೃತ್ತಕ್ಕೂ ಡಿಜಿಟಲ್ ರೂಪ ಸಿಗಲಿದೆ. ಇದರಿಂದ ಜನ ಸಂಚಾರಕ್ಕೂತುಂಬ ಅನುಕೂಲವಾಗಲಿದೆ. ಜೊತೆಗಜಿಲ್ಲಾ ಕೇಂದ್ರದಲ್ಲಿ ಈ ವೃತ್ತಕ್ಕೂ ಹೆಚ್ಚಿನ ಮನ್ನಣೆ ದೊರೆಯಲಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಲೇಬರ್ ಸರ್ಕಲ್ ಅನ್ನು ಆಧುನಿಕತೆಗೆ ತಕ್ಕಂತೆಅಭಿವೃದ್ಧಿ ಮಾಡಲು ಡಿಪಿಆರ್ ಸಿದ್ಧಪಡಿಸಲಾಗಿದೆ. ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಸಂಚಾರಿ ಸಿಗ್ನಲ್ ವ್ಯವಸ್ಥೆ ಸೇರಿದಂತೆ ಅವಶ್ಯವಿದ್ದಲ್ಲಿಅಗಲೀಕರಣಕ್ಕೂ ಚಿಂತನೆ ನಡೆಸಿದ್ದೇವೆ. ವೃತ್ತದಲ್ಲಿ ಗಡಿಯಾರ ಅಳವಡಿಕೆಗೂ ಪ್ಲ್ಯಾನ್ ಮಾಡಿದ್ದೇವೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. -ಮಹಾಂತೇಶ ಪಾಟೀಲ್ ಮೈನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಕೊಪ್ಪಳ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.