ತೋಟಗಾರಿಕೆ ಪಾರ್ಕ್‌ನಲ್ಲಿ ಏನೆಲ್ಲಾ ಇರುತ್ತೆ?
| ತೋಟಗಾರಿಕಾ ಬೆಳೆಯ ತಳಿಗಳ ಅವಿಷ್ಕಾರ | ರೈತನಿಗೆ ಬಿತ್ತನೆಯಿಂದ ಮಾರುಕಟ್ಟೆ ವರೆಗೂ ಮಾಹಿತಿ
Team Udayavani, Mar 10, 2021, 6:25 PM IST
ಕೊಪ್ಪಳ: ದಶಕಗಳ ಹಿಂದೆ ತೋಟಗಾರಿಕೆಬೆಳೆಗಳಿಗೆ ಹೆಸರಾಗಿದ್ದ ಕೊಪ್ಪಳ ಜಿಲ್ಲೆಗೆಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಘೋಷಣೆಯಾಗಿರುವುದು ಜಿಲ್ಲೆಗೊಂದು ವರದಾನವಾಗಲಿದೆ.
ಈ ಟೆಕ್ ಪಾರ್ಕ್ ನಲ್ಲಿ ಬೆಳೆ ತಳಿಗಳಿಂದ ಹಿಡಿದು ಬಿತ್ತನೆಯ ವಿಧಾನ, ರೈತರು ಹೇಗೆಲ್ಲಾ ಮಾರುಕಟ್ಟೆ ಮಾಡಬೇಕೆಂಬ ಸಮಗ್ರ ಮಾಹಿತಿಲಭಿಸಲಿದೆ. ರೈತರಿಗೆ ತರಬೇತಿ ಜೊತೆಗೆ ಮಳೆ ನೀರು ಸಂರಕ್ಷಣೆ, ಬೆಳೆಯ ಪೋಷಣೆಯ ಮಾಹಿತಿಯನ್ನೂ ಒಳಗೊಂಡಿರಲಿದೆ.ಜಿಲ್ಲೆಯ ಕನಕಗಿರಿ ತಾಲೂಕಿನ ಸಿರವಾರಗ್ರಾಮ ವ್ಯಾಪ್ತಿಯಲ್ಲಿ ತೋಟಗಾರಿಕೆಟೆಕ್ ಪಾರ್ಕ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಹಿಂದೆಯೇ ಕನಕಗಿರಿ ಶಾಸಕ ಬಸವರಾಜದಢೇಸುಗೂರು ಅವರು ಕ್ಷೇತ್ರಕ್ಕೆತೋಟಗಾರಿಕೆ ಪಾರ್ಕ್ ಘೋಷಣೆ ಮಾಡುವಂತೆಯೂ ಸಿಎಂ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಜಿಲ್ಲಾ ತೋಟಗಾರಿಕೆ ಇಲಾಖೆ ಪಾರ್ಕ್ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.
ಈ ಬಜೆಟ್‌ನಲ್ಲಿ ತೋಟಗಾರಿಕೆ ಪಾರ್ಕ್ ಘೋಷಣೆಯಾಗಿದ್ದು, ಸ್ವಲ್ಪ ಖುಷಿಯ ವಿಚಾರವಾಗಿದೆ. ಭವಿಷ್ಯದ ದಿನಗಳಲ್ಲಿ ಬರದ ನಾಡಿನ ಕನಕಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿಉದ್ಯೋಗ ಸೃಜನೆಯ ಜೊತೆಗೆ ವಿವಿಧಅವಿಷ್ಕಾರಗಳ ತಾಣವಾಗಿಯೂ ರಾಜ್ಯ,ದೇಶಮಟ್ಟದಲ್ಲಿ ಗಮನ ಸೆಳೆಯಲಿದೆ.
ಪಾರ್ಕ್‌ಗೆ 200 ಎಕರೆಗೂ ಹೆಚ್ಚು ಭೂಮಿ: ತೋಟಗಾರಿಕೆ ಪಾರ್ಕ್ ನಿರ್ಮಾಣಕ್ಕೆ ಕನಿಷ್ಠವೆಂದರೂ 200 ಎಕರೆಗೂ ಹೆಚ್ಚುಭೂಮಿ ಬೇಕಾಗುತ್ತದೆ. ಕನಗಿರಿ ಭಾಗದ ಸ್ಥಿರವಾರ ಭಾಗದಲ್ಲಿ ಸರ್ಕಾರಿ ಜಮೀನಿದ್ದು ಆ ಜಮೀನಿನಲ್ಲೇ ಪಾರ್ಕ್ ನಿರ್ಮಿಸುವುದುಸರ್ಕಾರದ ಉದ್ದೇಶವಾಗಿದೆ. ಅಲ್ಲದೇ,ತೋಟಗಾರಿಕೆ ಇಲಾಖೆ ಈಗಾಗಲೇ 200ಎಕರೆ ಜಮೀನು ಅಗತ್ಯವಿದೆ ಎನ್ನುವಕುರಿತಂತೆ ಪ್ರಸ್ತಾವನೆಯಲ್ಲೂ ಈ ಅಂಶವನ್ನು ಸೇರಿಸಿದೆ.
200 ಕೋಟಿಗೂ ಅಧಿಕ ನೆರವು: ಪ್ರಸ್ತುತ ಸರ್ಕಾರ ತೋಟಗಾರಿಕೆ ಪಾರ್ಕ್‌ನ್ನು ಘೋಷಣೆ ಮಾಡಿದೆಯಾದರೂ ಅನುದಾನ ನೀಡಿಲ್ಲ. ಕನಿಷ್ಠವೆಂದರೂ ಈ ಟೆಕ್ ಪಾರ್ಕ್‌ಗೆ 200 ಕೋಟಿಗೂ ಅಧಿಕ ಅನುದಾನದಅಗತ್ಯವಿದೆ. ಇಲ್ಲಿ ಕಟ್ಟಡಗಳ ನಿರ್ಮಾಣಮಾಡಬೇಕಿದೆ. ರೈತರಿಗೆ ತರಬೇತಿ ಭವನ, ಆಧುನಿಕತೆಯ ತಂತ್ರಜ್ಞಾನದಕೊಠಡಿಗಳು, ಆವಿಷ್ಕಾರದ ಸಭಾಂಗಣದಜೊತೆಗೆ ಆಧುನಿಕ ಕೃಷಿಗೆ ಬೇಕಾದಯಂತ್ರೋಪಕರಣಗಳನ್ನು ಇರಿಸುವುದು,ತೋಟಗಾರಿಕೆ ತಜ್ಞರು, ವಿಜ್ಞಾನಿಗಳುವಿಚಾರ ಸಂಕಿರಣ ಹಮ್ಮಿಕೊಳ್ಳಲು ವ್ಯವಸ್ಥಿತ ಕಚೇರಿಗಳು ನಿರ್ಮಾಣವಾಗಬೇಕಿದೆ.
ಮಳೆ ನೀರು ಸಂರಕ್ಷಣೆ, ಬೆಳೆ ಪೋಷಣೆ:ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಗಳನ್ನುಹೇಗೆ ಸಂರಕ್ಷಣೆ ಮಾಡಿಕೊಳ್ಳಬಹುದು.ಕಡಿಮೆ ನೀರಿನಲ್ಲೇ ಉತ್ತಮ ಲಾಭಪಡೆಯುವಂತ ಬೆಳೆಗಳನ್ನು ಬೆಳೆಯುವ ವಿಧಾನ, ತಾಂತ್ರಿಕತೆ, ಪ್ರಾತ್ಯಕ್ಷಿತೆಯನ್ನುಒಳಗೊಂಡ ಸಮಗ್ರ ಮಾಹಿತಿಯು ಟೆಕ್ ಮೂಲಕ ನೀಡಲಾಗುವುದು. ಪ್ರಸ್ತುತ ಮಳೆಯ ಕೊರತೆಯಲ್ಲಿ ಮಳೆ ನೀರನ್ನು ಸಂಗ್ರಹಿಸುವುದು, ಇಸ್ರೇಲ್ ಮಾದರಿಯ ಜೊತೆಗೆ ದೇಶಿ ಮಾದರಿಯಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತ ಮಾಹಿತಿಯೂ ತೋಟಗಾರಿಕೆ ಪಾರ್ಕ್‌ನಲ್ಲಿ ಒಳಗೊಂಡಿರಲಿದೆ.
ತೋಟಗಾರಿಕೆ ಟೆಕ್‌ನಲ್ಲಿ ಏನೆಲ್ಲಾ ಇರುತ್ತೆ?:
ತೋಟಗಾರಿಕೆ ಪಾರ್ಕ್‌ನಿಂದ ರೈತರಿಗೆ ಉತ್ತಮ ಗುಣಮಟ್ಟದ ತರಬೇತಿ, ಆಧುನಿಕಆವಿಷ್ಕಾರಗಳ ಮೂಲಕ ರೈತ ಆರ್ಥಿಕವಾಗಿ ಸಮೃದ್ಧಿಗೆ ಸಹಕಾರಿಯಾಗಲಿದೆ. ಆಧುನಿಕತಂತ್ರಜ್ಞಾನ ಉತ್ಪಾದನೆ, ಪಾತ್ಯಕ್ಷತೆ
ಕೈಗೊಳ್ಳುವ ಜೊತೆಗೆ ವಿವಿಧ ಬೆಳೆಗಳ ಸಂಪೂರ್ಣ ಉತ್ಪಾದನೆ, ಮೌಲ್ಯವರ್ಧನೆ ಸರಪಳಿ ಅಳವಡಿಸಿಕೊಂಡು ರೈತರ ಉತ್ಪಾದನೆಗಳಿಗೆ ಅಧಿಕ ಬೆಲೆ
ಒದಗಿಸುವುದು. ಸಮಗ್ರ ಮಳೆಯಾಶ್ರಿತ, ಒಣ ಬೇಸಾಯ ತೋಟಗಾರಿಕೆ ಪ್ರಾತ್ಯಕ್ಷಿತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ ಪರಿಹಾರ ಒದಗಿಸುವುದು.ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಸಂಸ್ಕರಣೆ ತಾಂತ್ರಿಕತೆಗಳನ್ನು ನೀಡುವ ಮೂಲಕ ಫಾರ್ವರ್ಡ್,ಬ್ಯಾಕ್ವರ್ಡ್ ಲಿಂಕೇಜ್‌ಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಖಾತ್ರಿ ಪಡಿಸುವುದು.
ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು, ಔಷ ಧಿ ಸಸ್ಯಗಳು, ಸುಗಂಧಿತ ಸಸ್ಯಗಳ ಸಂರಕ್ಷಣೆಯಜೊತೆಗೆ ಮಾರುಕಟ್ಟೆ ವ್ಯವಸ್ಥೆಯ ವಿಧಾನತಿಳಿಸಿಕೊಡುವ ಮೂಲಕ ಸ್ವಾವಲಂಬಿದಾರಿ ಮಾಡಿಕೊಟ್ಟು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದು. ರೈತರಿಗೆ ಬಿತ್ತನೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಸಮಗ್ರತೆಯನ್ನು ಒದಗಿಸುವುದು, ಮಾರುಕಟ್ಟೆ ವ್ಯವಸ್ಥೆಯನ್ನು ತಿಳಿಸುವುದು.
ಜಿಲ್ಲೆಯಲ್ಲಿ ತೋಟಗಾರಿಕೆ ಪಾರ್ಕ್ ನಿರ್ಮಿಸುವ ಕುರಿತಂತೆ ಸರ್ಕಾರಕ್ಕೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವು. ಸರ್ಕಾರವು ಕನಕಗಿರಿಯ ಸಿರಾವರ ಬಳಿ ಪಾರ್ಕ್ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಪಾರ್ಕ್ ನಿರ್ಮಾಣದಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರಿಗೂ ವರದಾನವಾಗಿದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ವಿಧಾನ, ನೀರಿನ ಸಂರಕ್ಷಣೆ, ಬೆಳೆ ತಳಿಗಳ ಅವಿಷ್ಕಾರ, ಯಂತ್ರೋಪಕರಣದಬಳಕೆ ಸೇರಿದಂತೆ ರೈತರಿಗೆ ತರಬೇತಿ ಸೇರಿ ಸಮಗ್ರ ತೋಟಗಾರಿಕೆ ಬೆಳೆಯ ಕುರಿತಂತೆ ಪಾರ್ಕ್‌ನಿಂದ ರೈತರಿಗೆ ಮಾಹಿತಿ ದೊರೆಯಲಿದೆ. – ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.