ಸಿಬ್ಬಂದಿ ನಿರ್ಲಕ್ಷ್ಯ; ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ
Team Udayavani, Mar 3, 2021, 6:47 PM IST
ಕನಕಗಿರಿ: ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯದಿಂದ ಹೆರಿಗೆಗೆ ಬಂದ ತುಂಬು ಗರ್ಭಿಣಿ ಮಹಿಳೆಗೆ ಆಸ್ಪತ್ರೆಮುಖ್ಯ ದ್ವಾರದಲ್ಲೇ ಹೆರಿಗೆ ಆಗಿರುವ ಮನಕಲಕುವ ಘಟನೆ ನಡೆದಿದೆ.
ತಾಲೂಕಿನ ಗೌರಿಪುರ ಗ್ರಾಮದ ಬೃಂದಾ ಶರಣಪ್ಪ ಎಂಬ ಮಹಿಳೆಪತಿಯ ಮನೆಯಿರುವ ಯಲಬುರ್ಗಾತಾಲೂಕಿನ ಗೆದಗೇರಿ ಜಾತ್ರೆಗೆಹೋಗಿದ್ದ ಸಂದರ್ಭದಲ್ಲಿ ಹೆರಿಗೆನೋವು ಕಾಣಿಸಿಕೊಂಡಿತು. ತುರ್ತು ಚಿಕಿತ್ಸಾ ವಾಹನ ಸಿಗದ ಕಾರಣಮಂಗಳವಾರ ಬೆಳಗಿನ ಜಾವ ಆಶಾಕಾರ್ಯಕರ್ತೆಯೊಂದಿಗೆ ಖಾಸಗಿವಾಹನ ಮೂಲಕ ಕನಕಗಿರಿ ಆಸ್ಪತ್ರೆಗೆಆಗಮಿಸಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಗೆಹೆರಿಗೆ ಮಾಡಿಸುವಂತೆ ಕೇಳಿಕೊಂಡರೂಸಿಬ್ಬಂದಿ ಮಾತ್ರ ಆಸ್ಪತ್ರೆ ಬಾಗಿಲು ತೆರೆಯದೇ, ಯಾವುದೇ ತಪಾಸಣೆ ನಡಸದೆ ಇಲ್ಲಿ ಹೆರಿಗೆ ಮಾಡಿಸೋಕೆ ಆಗಲ್ಲ ಗಂಗಾವತಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಆಗ ಗರ್ಭಿಣಿಯು ಹೆರಿಗೆ ನೋವು ತಾಳದೆ ನೋವಿನಿಂದ ಬಳಲುತ್ತಿರುವುದನ್ನು ಕಂಡು ಅಕ್ಕಪಕ್ಕದ ಮಹಿಳೆಯರು ಧಾವಿಸಿ ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.
ಹೆಣ್ಣು ಮಗುವಿಗೆ ಜನ್ಮ ನೀಡಿ ಗಂಟೆ ಕಳೆದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ರಕ್ತದ ಮಡುವಿನಲ್ಲಿದ್ದ ಬಾಣಂತಿಯನ್ನುನೋಡಿಯೂ ನೋಡದಂತೆ ವರ್ತಿಸಿಅಮಾನವೀಯ ವರ್ತನೆ ತೋರಿದರು.
ವೈದ್ಯರು-ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ: ನಂತರ ಸುದ್ದಿ ತಿಳಿಯುತಿದ್ದಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಅಲ್ಕಾನಂದ ಮಳಿಗೆಯವರು ಭೇಟಿ ನೀಡಿ ಈ ಘಟನೆ ನಡೆಯಬಾರದಿತ್ತು. ಇದರಿಂದ ಇಲಾಖೆ ತಲೆತಗ್ಗಿಸುವಂತಾಗಿದೆ. ಆರೋಗ್ಯ ಇಲಾಖೆ ದಿನದ 24ಗಂಟೆ ಕಾರ್ಯನಿರ್ವಹಿಸುತ್ತಿದೆ ಆದರೆ ಸ್ಥಳಿಯ ವೈದ್ಯರುಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.ಆಸ್ಪತ್ರೆ ಅವ್ಯಸ್ಥೆಯ ಆಗರವಾಗಿದ್ದು, ಕೆಲ ಜಿಡ್ಡುಗಟ್ಟಿದ ಸಿಬ್ಬಂದಿ ವರ್ಗದವರನ್ನು ಬೇರೆಡೆ ವರ್ಗಾಯಿಸಿ ಸರಿ ಪಡಿಸಲಾಗುವುದು ಎಂದು ಹೇಳಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭೇಟಿ: ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷೆ ಭಾಗ್ಯವತಿ ಬೋಲಾಮತ್ತು ಪಪಂ ಅಧ್ಯಕ್ಷ ರವೀಂದ್ರ ಸಜ್ಜನ್ ಭೇಟಿ ನೀಡಿ ಇಂತಹ ಅಮಾನವೀಯ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದರು. ಕರ್ತವ್ಯಲೋಪ ಎಸಗಿದ ವೈದ್ಯ ಹಾಗೂ ಸಿಬ್ಬಂದಿವಿರುದ್ಧ ವಿವಿಧ ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯ, ಸಿಬ್ಬಂದಿ ಅಮಾನತು :
ಕೊಪ್ಪಳ: ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗೇಟ್‌ನಲ್ಲೇ ಮಹಿಳೆಗೆ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ವೈದ್ಯ ಹಾಗೂ ಗುತ್ತಿಗೆ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹಾಗೂ ಜಿಪಂ ಸಿಇಒ ರಘುನಂದನ್ ಮೂರ್ತಿ ಅವರು ಆದೇಶ ಮಾಡಿದ್ದಾರೆ.
ಜಿಲ್ಲೆಯ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬೆಳಗಿನ ಜಾವ 5:45ಕ್ಕೆ ಗೌರಿಪುರ ಗ್ರಾಮದ ಬೃಂದಾ ಶರಣಪ್ಪ ಎಂಬ ಮಹಿಳೆ ಹೆರಿಗಾಗಿ ಆಗಮಿಸಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಡಾ| ನಾಗರಾಜ ಪಾಟೀಲ
ಆಸ್ಪತ್ರೆಯಲ್ಲಿರಲಿಲ್ಲ. ಕಾರ್ಯನಿರತ ಶುಶ್ರೂಷಕ ಬಸನಗೌಡವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಪೋಷಕರು ಶುಶ್ರೂಷಕರನ್ನು ಕರೆದು ಹೆರಿಗೆಗಾಗಿ ಬಂದಿರುವುದಾಗಿ ತಿಳಿಸಿದರೂ ಯಾವುದೇ ರೀತಿಯ ಚಿಕಿತ್ಸೆ ನೀಡಿಲ್ಲ. ಗಂಡಾಂತರ ಹೆರಿಗೆಯಾಗಿದ್ದರೂ ಆಂಬ್ಯುಲೆನ್ಸ್ ಜೊತೆಗೆ ಮುಂದಿನ ಮೇಲ್ದರ್ಜೆಆಸ್ಪತ್ರೆಗೆ ರೆಫರ್ ಮಾಡದೇ ನಿರ್ಲಕ್ಷ ವಹಿಸಿದ್ದಾರೆ. ನಂತರ 7:05ಕ್ಕೆ ಆಸ್ಪತ್ರೆಯಮುಖ್ಯದ್ವಾರದ ಎದುರಿಗೆ ಮಹಿಳೆಗೆ ಹೆರಿಗೆಯಾಗಿದೆ. ಡಿಎಚ್‌ಒ ಕನಕಗಿರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಕರ್ತವ್ಯಲೋಪ ಎಸಗಿದವರ ಮೇಲೆ ಶಿಸ್ತು ಕ್ರಮ ಜರುಗಿಸಲು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ನಿರ್ಲಕ್ಷತೆ ಮತ್ತು ಕರ್ತವ್ಯಲೋಪ ಎಸಗಿದ ಡಾ| ನಾಗರಾಜ ಪಾಟೀಲ ಅವರನ್ನು ಅಮಾನತು ಮಾಡಿ ಆದೇಶ ಮಾಡಿದ್ದರೆ, ಗುತ್ತಿಗೆ ಸಿಬ್ಬಂದಿ ಬಸನಗೌಡ ಅವರನ್ನು ಜಿಪಂ ಸಿಇಒ ರಘುನಂದನ್ ಮೂರ್ತಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.