ಆನೆಗೊಂದಿ ಭಾಗದಲ್ಲಿ ಹೋಟೆಲ್ ಗಳಿಗೆ ನಿಷೇಧ: ಹಂಪಿ ಭಾಗದಲ್ಲಿ ಭರ್ಜರಿ ವ್ಯಾಪಾರ ವಹಿವಾಟು


Team Udayavani, Feb 28, 2022, 7:22 PM IST

ಆನೆಗೊಂದಿ ಭಾಗದಲ್ಲಿ ಹೋಟೆಲ್ ಗಳಿಗೆ ನಿಷೇಧ: ಹಂಪಿ ಭಾಗದಲ್ಲಿ ಭರ್ಜರಿ ವ್ಯಾಪಾರ ವಹಿವಾಟು

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರಗಳ ನಿಯಮಗಳನ್ನು ತೋರಿಸಿ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವುದು ಅನಧಿಕೃತ ಎಂದು ಹೋಟೆಲ್ ರೆಸಾರ್ಟ್ ಗಳಿಗೆ ಜಿಲ್ಲಾಡಳಿತ ಬೀಗ ಜಡಿದಿದ್ದು ಹಂಪಿ ಸುತ್ತಲೂ ಹಲವಾರು ಹೋಟೆಲ್ ಗಳು ನಿತ್ಯವೂ ಭರ್ಜರಿ ವ್ಯಾಪಾರ ವಹಿವಾಟು ನಡೆಸುತ್ತಿದೆ .

ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ವ್ಯಾಪಾರ ವಹಿವಾಟು ಪರವಾನಗಿ ಪಡೆದು ಮಾಡಬೇಕು ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಹೋಟೆಲ್ ಗಳನ್ನು ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕಳೆದ ಡಿಸೆಂಬರ್ 27ರಂದು ಸೀಜ್ ಮಾಡಿ ಬಂದ್ ಮಾಡಿಸಿದೆ .

ಯುನೊಸ್ಕೋ ಹಂಪಿ ವಿಶ್ವ ಪರಂಪರೆ ಪಟ್ಟಿಯ ವ್ಯಾಪ್ತಿಗೆ ಸೇರಿಸಿ ಕೊಂಡ ನಂತರ ಅದನ್ನು ಮುಂದುವರಿಸಲು ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ .ರಾಜ್ಯ ಪುರಾತತ್ವ ಮತ್ತು ಸರ್ವೇಕ್ಷಣಾ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ಸ್ಮಾರಕಗಳ ಸುತ್ತ ವಲಯವಾರು ನಿಯಮಗಳನ್ನು ರೂಪಿಸಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಿಷೇಧ ಮಾಡಲಾಗಿದೆ .ಆದರೂ ಹಂಪಿ ಕಮಲಾಪುರ ಕಡ್ಡಿರಾಂಪುರ ಸೇರಿದಂತೆ ಹೊಸಪೇಟೆ ಭಾಗದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ 14 ಗ್ರಾಮಗಳಲ್ಲಿ ಈಗಲೂ ಭರ್ಜರಿಯಾಗಿ ಹೋಟೆಲ್ ರೆಸಾರ್ಟ್ ಗಳು ವ್ಯಾಪಾರ ವಹಿವಾಟು ಮಾಡುತ್ತಿವೆ ಆನ್ ಲೈನ್ ಮುಖಾಂತರ ಪ್ರವಾಸಿಗರನ್ನ ಬುಕ್ ಮಾಡಿಕೊಂಡು ವೀಕೆಂಡ್ ಸೇರಿದಂತೆ ವಿಶೇಷ ದಿನಗಳಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುತ್ತಿವೆ .ಹೊಸಪೇಟೆ ಭಾಗದ ಜನಪ್ರತಿನಿಧಿಗಳು ತಮ್ಮ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಮತಿ ಕೊಟ್ಟು ಆನೆಗೊಂದಿ ಭಾಗದಲ್ಲಿ ರೆಸಾರ್ಟ್ ಗಳನ್ನು ಸೀಜ್ ಮಾಡಿಸುವಲ್ಲಿ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಆನೆಗೊಂದಿ ಭಾಗದ ಜನರು ಮಾಡುತ್ತಾರೆ .

ವಿರುಪಾಪುರ ಗಡ್ಡಿಯಲ್ಲಿದ್ದ 28  ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರಿಂದ 2018 ರಲ್ಲಿ ಹೋಟೆಲ್ ಗಳನ್ನು ಇನ್ನೂ ಉಳಿದಿದ್ದ ಕೆಲ ರೆಸಾರ್ಟ್ ಗಳನ್ನು 2019 ರಲ್ಲಿ ರಲ್ಲಿ ತುಂಗಭದ್ರಾ ನದಿಯಲ್ಲಿ ನೆರೆ ಉಂಟಾಗಿದ್ದರಿಂದ  ವಿರುಪಾಪುರಗಡ್ಡಿಯಲ್ಲಿ ಸಿಲುಕಿಕೊಂಡಿದ್ದ ಸುಮಾರು 500 ಕ್ಕೂ ಹೆಚ್ಚು  ಪ್ರವಾಸಿಗರನ್ನ ಎನ್ ಡಿಆರ್ ಎಫ್ ತಂಡದಿಂದ ಸಂರಕ್ಷಿಸಲಾಗಿತ್ತು .ಅಂದಿನ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ನೆರೆ ಇಳಿದ ತಕ್ಷಣ ವಿರುಪಾಪುರಗಡ್ಡಿ ಯಲ್ಲಿದ್ದ ಎಲ್ಲಾ ರೆಸಾರ್ಟ್ ಗಳನ್ನು ತೆರವುಗೊಳಿಸಿದರು .

ನಂತರ ಸಣಾಪುರ ಆನೆಗೊಂದಿ ಹನುಮನಹಳ್ಳಿ ಜಂಗ್ಲಿ ರಂಗಾಪುರ ಸೇರಿದಂತೆ ಈ ಭಾಗದಲ್ಲಿ ರೈತರು ತಮ್ಮ ಸ್ವಂತ ಗದ್ದೆಯಲ್ಲಿ ಸ್ವಲ್ಪ ಭಾಗವನ್ನು ರೆಸಾರ್ಟ್ ಗೆ ಲೀಸ್ ಕೊಟ್ಟು ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ ಗಳನ್ನು ಆರಂಭಿಸಲಾಯಿತು .ಕೆಲವರು ನದಿಪಾತ್ರದಲ್ಲಿ ಮತ್ತು ಸರ್ಕಾರಿ ಅರಣ್ಯ ಭೂಮಿಯಲ್ಲಿ ಸಹ ಹೋಟೆಲ್ ಗಳನ್ನು ನಡೆಸುತ್ತಿದ್ದರು .ಇವುಗಳಿಂದ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಜನರು ಆಗಮಿಸಿ ಈ ಹೋಟೆಲ್ ಗಳಲ್ಲಿ ಊಟ ವಸತಿ ಮಾಡಿ ವೀಕೆಂಡ್ ಕಳೆಯುತ್ತಿದ್ದರು . ಇದರಿಂದ ಆರ್ಥಿಕವಾಗಿ ಆನೆಗೊಂದಿ ಭಾಗದ ಉತ್ತಮ ರೀತಿ ನಡೆದಿತ್ತು .

ಹಂಪಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೊನೆಯಲ್ಲಿ ಆನೇಗುಂದಿ ಭಾಗದಲ್ಲಿರುವ ಹೋಟೆಲ್ ಗಳಲ್ಲಿ ತಂಗಲು ಆಗಮಿಸುತ್ತಿದ್ದರು. ಇದರಿಂದ ಹಂಪಿ ಭಾಗದ ಹೋಟೆಲ್ ಗಳ ವ್ಯಾಪಾರ ವಹಿವಾಟು ಅಷ್ಟೇನೂ ಹದಗೆಟ್ಟಿರಲಿಲ್ಲ . ಆನೆಗೊಂದಿ ಭಾಗದಲ್ಲಿ ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ ಗಳ ಬಂದ್ ಮಾಡಿಸುವ ಷಡ್ಯಂತ್ರ ದಿಂದಾಗಿ ಮತ್ತು ನಿಯಮಗಳ ಉಲ್ಲಂಘನೆ ನೆಪದಲ್ಲಿ ಡಿಸೆಂಬರ್ 27 ರಂದು ಕೊಪ್ಪಳ ಜಿಲ್ಲಾಡಳಿತ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಆನೆಗೊಂದಿ ಭಾಗದ ರೆಸಾರ್ಟ್ ಗಳನ್ನು ಸೀಜ್ ಮಾಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿದರು . ಹಂಪಿ ಭಾಗದಲ್ಲಿ ಹೋಟೆಲ್ ರೆಸಾರ್ಟ್ ಗಳು ಈಗಲೂ ನಿರಂತರವಾಗಿ ನಡೆಯುತ್ತಿದ್ದು ಪ್ರಾಧಿಕಾರದ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮಗಳು ಇಲ್ಲ 2 ಅಥವಾ  2 ಹೋಟೆಲ್ ಮಾತ್ರ ಇವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆನೆಗೊಂದಿ ಭಾಗದ ಜನರು ಆರೋಪಿಸುತ್ತಿದ್ದಾರೆ .

ಷಡ್ಯಂತ್ರ :ಆನೆಗೊಂದಿ ಭಾಗದಲ್ಲಿರುವ ಕಿಷ್ಕಿಂದಾ ಅಂಜನಾದ್ರಿ ಮತ್ತು 7ಗುಡ್ಡ ಪ್ರದೇಶ ಸಾಣಾಪುರ ಲೇಕ್ ಮತ್ತು ತುಂಗಭದ್ರ ನದಿ ಪಾತ್ರವನ್ನು ಸಣಾಪುರ ವಾಟರ್ ಫಾಲ್ಸ್ ವೀಕ್ಷಣೆ ಮಾಡಲು ಅಧಿಕ ಪ್ರವಾಸಿಗರು ಆನೆಗೊಂದಿ ಭಾಗಕ್ಕೆ ಬರುವುದರಿಂದ ಇಲ್ಲಿಯ ಹೋಟೆಲ್ ಗಳು ವೀಕೆಂಡ್ ಸೇರಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುತ್ತಿವೆ .ಇದರಿಂದ ಹಂಪಿ ಭಾಗದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೆಲ ಅಧಿಕಾರಿಗಳು ಮತ್ತು ಕೆಲ ಚುನಾಯಿತ ಜನಪ್ರತಿನಿಧಿಗಳು ಷಡ್ಯಂತ್ರ ನಡೆಸಿ ಆನೆಗೊಂದಿ ಭಾಗದಲ್ಲಿರುವ ಹೋಟೆಲ್ ಗಳನ್ನು ಪ್ರಾಧಿಕಾರದ ನಿಯಮ ಉಲ್ಲಂಘನೆ ನೆಪದಲ್ಲಿ ಬಂದ್ ಮಾಡಿಸಿದ್ದಾರೆ .

ಆನೆಗೊಂದಿ ಭಾಗದಲ್ಲಿ ಆನೆಗುಂದಿ ಮತ್ತು ವಿರುಪಾಪುರಗಡ್ಡಿ ಮಾತ್ರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಉಳಿದಂತೆ ಯಾವ ಗ್ರಾಮಗಳಲ್ಲಿ ಸಹ ಸ್ಮಾರಕಗಳಿಲ್ಲ ಆದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು ಹೇರಿ ಇಲ್ಲಿಯ ಪ್ರವಾಸೋದ್ಯಮವನ್ನು ಮೊಟಕುಗೊಳಿಸುತ್ತಿದೆ. ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮ ನಡೆಸಲು ಅಲ್ಲಿಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಬೆಂಬಲ ನೀಡಿದಂತೆ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲು ಹೋಟೆಲ್ ನಡೆಸಲು ಇಲ್ಲಿಯ ಜನಪ್ರತಿನಿಧಿಗಳು ಸಹ ಬೆಂಬಲ ನೀಡಬೇಕೆಂದು ಹೆಸರು ಹೇಳಲು ಇಚ್ಛಿಸದ ಹೋಟೆಲ್ ಮಾಲೀಕರೊಬ್ಬರು ಉದಯವಾಣಿ ಜತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

Koppala ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

2-koppala

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.