ನಿರ್ಲಕ್ಷ್ಯಕ್ಕೆ ಸಾಕ್ಷಿ ಹುಚ್ಚರಾಯನಗುಡಿ
| ಪುರಾತನ ದೇಗುಲ ಈಗಲೂ ಗಟ್ಟಿಮುಟ್ಟು | ಗೋಪುರ ಮಾತ್ರ ಶಿಥಿಲ
Team Udayavani, Feb 24, 2021, 4:51 PM IST
ಕುಷ್ಟಗಿ: ಸ್ಮಾರಕ ದೇಗುಲವನ್ನು ಛಾಯಾಗ್ರಾಹಕ ಸಂಘದವರು 2016ರಲ್ಲಿ ಸ್ವಚ್ಛಗೊಳಿಸಿದ ಸಂದರ್ಭದಲ್ಲಿ ಸ್ಥಿತಿ ಹೀಗಿತ್ತು. ದೇಗುಲದ ಸದ್ಯದ ಸ್ಥಿತಿ ಹೀಗಿದೆ.(ಬಲಚಿತ್ರ)
ಕುಷ್ಟಗಿ: ಪಟ್ಟಣದ ಹೊರವಲಯದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50, ಮೇಲ್ಸೇತುವೆ ಪಕ್ಕದಲ್ಲಿರುವ ಪ್ರಾಚೀನ ಸ್ಮಾರಕ ದೇಗುಲ “ಹುಚ್ಚರಾಯನ ಗುಡಿ’ ಸಂರಕ್ಷಣೆ ಇಲ್ಲದೇ ಮುಳ್ಳುಕಂಟಿಗಳು ಆವರಿಸಿ ನಿರ್ಲಕ್ಷ್ಯಕ್ಕೀಡಾಗಿದೆ.
17ನೇ ಶತಮಾನದ ಶೈವ ಪರಂಪರೆಯ ಸ್ಮಾರಕ ಇದೆನ್ನಲಾಗಿದ್ದು, ಇದಕ್ಕೆ ಹುಚ್ಚರಾಯನ ಗುಡಿ ಹೆಸರು ಹೇಗೆ ಬಂತೆನ್ನುವುದು ಗೊತ್ತಿಲ್ಲ. ಇದರ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ಈಗಲೂ ಗಟ್ಟಿಮುಟ್ಟಾಗಿರುವ ಈ ದೇಗುಲದ ಗೋಪುರ ಭಾಗ ಮಾತ್ರ ಕಾಲಕ್ರಮೇಣ ಶಿಥಿಲಾವಸ್ಥೆಗೀಡಾಗಿದ್ದು, ಮೂಲಸ್ವರೂಪ ಕಳೆದುಕೊಂಡಿದೆ.
ಈ ದೇಗುಲ ಪ್ರದೇಶದಲ್ಲಿ ಛಾಯಾಗ್ರಾಹಕ ಸಂಘದವರು 2016ರಲ್ಲಿ ಶ್ರಮದಾನ ಶಿಬಿರ ನಡೆಸಿ ಗಮನಾರ್ಹ ಕಾರ್ಯ ಕೈಗೊಂಡಿದ್ದರು. ನಂತರದ ದಿನಗಳಲ್ಲಿ ಈ ದೇಗುಲ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಹೀಗೊಂದು ಸ್ಮಾರಕ ದೇಗುಲ ಇತ್ತೆನ್ನುವುದು ಮರತೇ ಹೋಗಿದೆ. ಈ ಸ್ಮಾರಕ ದೇಗುಲದ ಅಕ್ಕಪಕ್ಕದಲ್ಲಿ ಚರಂಡಿ ಹರಿಯುತ್ತಿದ್ದು, ದೇಗುಲವನ್ನು ಮುಳ್ಳುಕಂಟಿಗಳು ಮರೆಯಾಗಿಸಿವೆ. ಈ ದೇಗುಲದತ್ತ ತೂರಿ ಹೋಗುವಷ್ಟು ದಾರಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಷಜಂತುಗಳ ಭೀತಿಗೆ ಯಾರೂ ಅಲ್ಲಿಗೆ ಹೋಗಲು ಧೈರ್ಯ ಮಾಡಿಲ್ಲ.
ಐತಿಹಾಸಿಕ ದೇಗುಲ ಮುಳ್ಳುಕಂಟಿಯಲ್ಲಿ ಮುಚ್ಚಿ ಹೋಗಿ ಯಾರೂ ಗಮನ ಹರಿಸುತ್ತಿಲ್ಲ. ಇದಕ್ಕಿಂತ ಬೇಸರದ ಸಂಗತಿ ಇನ್ನೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳಿಯರಾದ ಪಾಂಡುರಂಗ ಅವರು.
ಇದು ಸರ್ಕಾರದ ಆಸ್ತಿ. ಇದರ ಬಗ್ಗೆ ಪುರಾತತ್ವ ಇಲಾಖೆ ಗಮನ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ. ಇದು ಖಾಸಗಿಯವರ ಸ್ವತ್ತಲ್ಲ. ಶಾಸಕರು, ಪುರಸಭೆ ಅಧ್ಯಕ್ಷರು, ತಹಶೀಲ್ದಾರರು ಇತ್ತ ಗಮನ ಹರಿಸಿ ಸಂರಕ್ಷಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಪಾಂಡುರಂಗ ಅವರು ಒತ್ತಾಯಿಸುತ್ತಾರೆ.
ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಐತಿಹಾಸಿಕ ಸ್ಮಾರಕ ದೇಗುಲದ ಸುತ್ತಲೂ ಮುಳ್ಳು ಕಂಟಿ ಬೆಳೆದಿದ್ದು, ಬುಧವಾರ ಬೆಳಗ್ಗೆ ಜೆಸಿಬಿಯಿಂದ ತೆರವುಗೊಳಿಸಿ ಸ್ವಚ್ಛಗೊಳಿಸಲಾಗುವುದು. ಮುಂದೆ ವರಲಕ್ಷ್ಮೀ (ವರಲೆಕ್ಕವ್ವ) ಸ್ಮಾರಕ ದೇಗುಲದಂತೆ ಈ ದೇಗುಲವನ್ನೂ ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ. -ಗಂಗಾಧರಸ್ವಾಮಿ ಹಿರೇಮಠ, ಅಧ್ಯಕ್ಷರು, ಪುರಸಭೆ ಕುಷ್ಟಗಿ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.