ಕೃಷಿ ಕಾರ್ಮಿಕರ ಕೊರತೆ: ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್
Team Udayavani, Dec 15, 2021, 11:57 AM IST
ಕುಷ್ಟಗಿ: ನೀರಾವರಿ ಪ್ರದೇಶಗಳಲ್ಲಿ ಭತ್ತದ ಒಕ್ಕಣೆ ಮುಗಿಯುತ್ತಿದ್ದಂತೆ ರಾಶಿ ಯಂತ್ರಗಳು ಬರದ ನಾಡಿನತ್ತ ಮುಖ ಮಾಡಿವೆ.
ಅಕಾಲಿಕ ಮಳೆಯಿಂದ ಭಾಗಶಃ ಹಾಳಾಗಿದ್ದರೂ ಸಹ ತೊಗರಿ ಕಟಾವು ಮಾಡಲು ಕೃಷಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಯಂತ್ರದ ಮೊರೆ ಹೋಗಿದ್ದು ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ.
ಸದ್ಯದ ಮೋಡ ಕವಿದ ವಾತರಣದಲ್ಲಿ ಯಾವಾಗ ಅಕಾಲಿಕ ಮಳೆ ಬರಯತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ತೊಗರಿ ಕಟಾವು ಮಾಡುವುದು ಸೂಕ್ತವಾಗಿದೆ. ಹಿರೇಮನ್ನಾಪುರ, ನವಲಹಳ್ಳಿ, ಗುಮಗೇರಾ,ಹಂಚಿನಾಳ ಮೊದಲಾದ ಪ್ರದೇಶದಲ್ಲಿ ಈಗಾಗಲೇ ತೊಗರಿ ಒಕ್ಕಣೆ ಶುರುವಾಗಿದೆ.
ಕುಷ್ಟಗಿ ತಾಲೂಕಿನ 12,500 ಹೆಕ್ಟೇರ್ :
ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಬಂದ ತೊಗರಿಗೆ ಹೂವು, ಕಾಯಿ ಕಟ್ಟಿ ಒಣಗುವ ಸಂದರ್ಭದಲ್ಲಿ ಅಕಾಲಿಕ ಮಳೆಗೆ ತುತ್ತಾಗಿದೆ. ಅಳಿದುಳಿದ ತೊಗರಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬೆಂಬಿಡದ ಮಳೆ ಮತ್ತು ಮುಸುಕಿನ ವಾತಾವರಣದಿಂದ ತೊಗರಿ ಕಾಯಿಯೊಳಗೆ ಮೊಳಕೆಯೂಡೆದು ರೈತರು ಮತ್ತೆ ನಷ್ಟ ಅನುಭವಿಸುವ ಆತಂಕ ಮನೆ ಮಾಡಿದೆ.
ಕಳೆದ ಒಂದು ವಾರದಿಂದ ಅರೆ ಬರೆ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದೆ. ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ನಿರೀಕ್ಷೆಯಲ್ಲಿದ್ದಾರೆ.
ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ರಾಶಿ ಯಂತ್ರಗಳು ನೀರಾವರಿ ಪ್ರದೇಶದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಸದ್ಯ ಮುಗಿಯುತ್ತಿದ್ದಂತೆ ತೊಗರಿ ರಾಶಿ ಯತ್ತ ಮುಖ ಮಾಡಿವೆ. ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಬಸನಗೌಡ ಎನ್ ಪಾಟೀಲ, ಸುರೇಶ ಮಂಗಳೂರು ತಿಳಿಸಿದರು.
ತೊಗರಿ ಹೊಟ್ಟಿಗೆ ಡಿಮ್ಯಾಂಡ್:
ಈ ಯಂತ್ರಗಳ ಮೂಲಕ ಕಟಾವು ಮಾಡಿದರೆ ತೊಗರಿ ಹೊಟ್ಟು ನೆಲಕ್ಕೆ ಚಲ್ಲಾಡುತ್ತದೆ. ಇದರಿಂದ ಜಾನುವಾರುಗಳಿಗೆ ಹಲವು ವರ್ಷಗಳವರೆಗೆ ಸಂಗ್ರಹಿಸಿಡುವುದು ಅಸಾದ್ಯವೆನಿಸಿದೆ. ಬದಲಾದ ಪರಿಸ್ಥಿತಿಯಲ್ಲಿ ಮತ್ತೆ ಅಕಾಲಿಕ ಮಳೆಯ ಬಗ್ಗೆ ಹವಮಾನದ ಮುನ್ಸೂಚನೆ ನೀಡಿದ್ದು ಅಷ್ಟರೊಳಗೆ ಕಟಾವು ಮುಗಿಸುವ ದಾವಂತದಲ್ಲಿರುವ ರೈತರು ಅನಿವಾರ್ಯ ಪರಿಸ್ಥಿತಿಯಲ್ಲಿ ತೊಗರೆ ಹೊಟ್ಟಿನ ಬಗ್ಗೆ ಗಮನ ಕಡಿಮೆಯಾಗುತ್ತಿದೆ.
–ವರದಿ: ಮಂಜುನಾಥ ಮಹಾಲಿಂಗಪುರ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.