![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 5, 2023, 9:53 PM IST
ಗಂಗಾವತಿ: ಬಳ್ಳಾರಿಯಲ್ಲಿ ಜನಾರ್ದನರೆಡ್ಡಿ ಈಗಾಗಲೇ ಚುನಾವಣೆ ವಾತಾವರಣವನ್ನು ಕೆಡಿಸಿದ್ದು ಇದೀಗ ಗಂಗಾವತಿ ಸೇರಿ ಕಲ್ಯಾಣ, ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ಇಚ್ಛೆಯನ್ನು ಗಾಲಿ ಜನಾರ್ದನರೆಡ್ಡಿ ವ್ಯಕ್ತಪಡಿಸಿದ್ದು ಮಾತೆತ್ತಿದರೆ ಕೋಟ್ಯಂತರ ರೂ.ಮಾತನಾಡುವ ರೆಡ್ಡಿ ಚುನಾವಣಾ ವಾತಾವರಣ ಕೆಡಿಸುತ್ತಿದ್ದು ಮತದಾರರು ಸ್ಥಳೀಯ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ಹಿರಿಯ ಮುಖಂಡ ಹಾಗೂ ಟಿಕೆಟ್ ಆಕಾಂಕ್ಷಿ ಎಚ್.ಅರ್.ಚನ್ನಕೇಶವ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೂ ಒಂದು ಚುನಾವಣೆ ಸ್ಪರ್ಧಿಸದ ಗಾಲಿ ಜನಾರ್ದನರೆಡ್ಡಿ ಬಿಜೆಪಿಯನ್ನು ದೂಷಿಸುತ್ತಲೇ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪನೆ ಮಾಡಿದ್ದು ಗಂಗಾವತಿಯಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜತೆ ಹೋದಲ್ಲಿ ಬಂದಲ್ಲಿ ಕೋಟ್ಯಾಂತರ ರೂ.ಗಳ ದೇಣಿಗೆ ನೀಡುವ ಮಾತನಾಡುತ್ತಿದ್ದು ಇದರಿಂದಾಗಿ ಕ್ಷೇತ್ರದ ವಾತಾವರಣ ಕೆಡುವ ಸಂದರ್ಭವಿದ್ದು ಜನರು ಅಭಿವೃದ್ಧಿ ಕಾರ್ಯಗಳ ಕುರಿತು ಬೇಡಿಕೆ ಇದ್ದರೂ ಅವರನ್ನು ಯಾಮಾರಿಸುವ ತಂತ್ರ ಹೆಣೆಯಲಾಗುತ್ತಿದೆ. ಅಭಿವೃದ್ಧಿ ಬದಲು ಹಣ ಎಂಬ ವಾತಾವರಣ ರೆಡ್ಡಿ ಟೀಂ ಸೃಷ್ಟಿ ಮಾಡುತ್ತಿದೆ. ಗಂಗಾವತಿ ಜನರು ಎಚ್ಚರಿಕೆಯಿಂದ ಇರಬೇಕು. ಯಾರು ಬೇಗ ಜನರಿಗೆ ಸಿಗುತ್ತಾರೋ ಅಂತವರನ್ನು ಗೆಲ್ಲಿಸಿಕೊಂಡು ಗಂಗಾವತಿ ಸಮಗ್ರ ಅಭಿವೃದ್ಧಿ ಮಾಡಬೇಕಿದೆ ಎಂದರು.
ನಾನು ಸದ್ಯ ಬಿಜೆಪಿಯಲ್ಲಿದ್ದು ಟಿಕೆಟ್ ನೀಡುವಂತೆ ಕೋರಲಾಗಿದೆ. ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧೆಗಳಿಯುತ್ತೇನೆ.ಇಡೀ ಕ್ಷೇತ್ರದ ಪರಿಚಯ ತನಗಿದ್ದು ಈಗಾಗಲೇ ಇರಕಲ್ ಗಡಾ ಹೋಬಲಿಯಲ್ಲಿ ಗ್ರಾಮವಾಸ್ತವ್ಯ ಮನೆ ಮನೆ ಸಂಚಾರ ಮಾಡಿ ಜನರ ಮನವನ್ನು ಗೆಲ್ಲಲಾಗಿದೆ.ಈ ಭಾರಿ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗಂಗಾವತಿ ಜನರು ಜಾತಿ ಧರ್ಮ ನೋಡಿ ಮತ ಹಾಕಲ್ಲ ಅವರ ಜತೆಗಿರುವವರನ್ನು ಬೆಂಬಲಿಸುತ್ತಾರೆ. ಕ್ಷೇತ್ರದಲ್ಲಿ ಶಾಂತಿ ನೆಲೆಸಬೇಕು.ಯುವಕರಿಗೆ ಉದ್ಯೋಗ ಸಿಗಬೇಕು. ಕಿಷ್ಕಿಂಧಾ ಅಂಜನಾದ್ರಿ, ಹೇಮಗುಡ್ಡ, ಜಬ್ಬಲಗುಡ್ಡ ಸೇರಿ ಇಲ್ಲಿಯ ಪ್ರವಾಸಿವತಾಣಗಳ ಮೂಲಕ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ಯೋಜನೆಗಳ ಅನುಷ್ಠಾನ ಮಾಡಬೇಕಿದೆ ಎಂದರು.
ಕ್ಷೇತ್ರದ ಜನರು ಎಲ್ಲರಿಗೂ ಅವಕಾಶ ನೀಡಿದ್ದು ತಮಗೂ ಪ್ರೀತಿ ಗೌರವ ನೀಡಿ ಸ್ವಾಗತಿಸಿತ್ತಿರುವುದು ನಮ್ಮ ತಂದೆಯವರ ಆಶೀರ್ವಾದದ ಫಲವಾಗಿದೆ.ನಾನು ಯಾರ ಬಗ್ಗೆಯೂ ಟೀಕೆ ಟಿಪ್ಪಣಿ ಮಾಡದೇ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ವಿಷನ್ ಹೊಂದಿದ್ದು ಈಗಾಗಲೇ ಶಾಸಕರಾಗಿ ಸೇವೆ ಮಾಡಿದವರು ಹಲವು ವೈಫಲ್ಯಗಳನ್ನು ಕಂಡು ಕ್ಷೇತ್ರದ ಜನರನ್ನು ನಿರ್ಲಕ್ಷ್ಯ ಮಾಡಿದ್ದು ಕ್ಷೇತ್ರಕ್ಕೆ ಹೊಸ ಮುಖವಾಗಿದ್ದು ಸರ್ವ ಜನಾಂಗದವರನ್ನು ಕರೆದುಕೊಂಡು ಹೋಗುವ ಕನಸನ್ನು ಹೊಂದಿದ್ದೇನೆ. ಪೂರಕ ಟೀಕೆಗಳ ಮೂಲಕ ಜನರ ಕನಸು ನನಸು ಮಾಡುವುದಾಗಿ ಚನ್ನಕೇಶವ ತಿಳಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.