ಮನುಷ್ಯತ್ವಕ್ಕೆ ಬೆಲೆಯಿಲ್ಲದ್ದು ಧರ್ಮವೇ ಅಲ್ಲ
ಮನುವಾದಿಗಳ ಕೈಗೆ ಸಿಲುಕಿದೆ ಸಂವಿಧಾನ
Team Udayavani, Apr 25, 2022, 11:12 AM IST
ಕೊಪ್ಪಳ/ಕುಷ್ಟಗಿ: ಯಾವ ಧರ್ಮದಲ್ಲಿ ಮನುಷ್ಯತ್ವಕ್ಕೆ ಬೆಲೆ ಇರುವುದಿಲ್ಲವೋ? ಯಾವ ಧರ್ಮದಲ್ಲಿ ಪರಸ್ಪರ ಪ್ರೀತಿ ಇರುವುದಿಲ್ಲವೋ ಅಂತಹ ಧರ್ಮ ಧರ್ಮವೇ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಸಂವಿಧಾನ ಉಳಿಸಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಧರ್ಮದಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲವೋ? ಪರಸ್ಪರ ಪ್ರೀತಿಸುವುದಿಲ್ಲವೋ ಅಂತಹ ಧರ್ಮ ಧರ್ಮನೇ ಅಲ್ಲ. ಡಾ| ಅಂಬೇಡ್ಕರ್ ಅವರು ಹಿಂದೂ ಧರ್ಮದ ಸಂಕೋಲೆ ಅನುಭವಿಸಿ ಬೇಸರ ಪಟ್ಟು ಹಿಂದೂ ಆಗಿ ಹುಟ್ಟಿದೆ ಆದರೆ ಹಿಂದೂ ಆಗಿ ಸಾಯಲ್ಲ. ಹಿಂದೂ ಧರ್ಮದಲ್ಲಿ ಬೆಲೆಯಿಲ್ಲ ಎಂದು ಬೌದ್ಧ ಧರ್ಮ ಸ್ವೀಕರಿಸಿದರು.
65 ವರ್ಷ ಬದುಕಿದ್ದ ಡಾ| ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನ ಅಗತ್ಯತೆ, ಸಂವಿಧಾನ ರಕ್ಷಣೆ ಮಾಡುವುದು ಭಾರತದ 130 ಕೋಟಿ ಜನರ ಕರ್ತವ್ಯವಾಗಿದೆ. ಮೊದಲ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನೆ ಮಾಡಲು ನಿರ್ಧಾರ ಮಾಡಿತು. ಭಾರತವು ಅನೇಕ ಭಾಷೆ, ಸಂಸ್ಕೃತಿಗಳ ವೈವಿಧ್ಯಮಯ ದೇಶವಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಂತಹ ವೈವಿದ್ಯಮಯ ಎಲ್ಲೂ ಕಾಣಲ್ಲ. ಸಂವಿಧಾನ ರಚನೆ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಡಾ| ಅಂಬೇಡ್ಕರ್ ಅವರು ಜಗತ್ತಿನ ಅನೇಕ ಸಂವಿಧಾನ ಅಧ್ಯಯನ ಮಾಡಿ ನಮಗೆ ದೊಡ್ಡ ಸಂವಿಧಾನ ಕೊಟ್ಟಿದ್ದಾರೆ ಎಂದರು.
ನಮ್ಮದು ಲಿಖೀತ ಸಂವಿಧಾನವಾಗಿದೆ. ದೇಶಕ್ಕೆ ಪ್ರಜಾಪ್ರಭುತ್ವ ಬೇಕೆಂದು ಡಾ| ಅಂಬೇಡ್ಕರ್ ಎಲ್ಲ ಸಂವಿಧಾನ ಓದಿ ನಮ್ಮ ದೇಶಕ್ಕೆ ಉತ್ತಮ ಸಂವಿಧಾನ ಕೊಟ್ಟಿದ್ದಾರೆ. ಅವರು ಸಲ್ಲಿಸಿದ ಕರಡು ಪ್ರತಿಯನ್ನು ಡಾ| ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಿಸಿದರು. ನಮ್ಮ ಸರ್ಕಾರವು ಸಂವಿಧಾನದ ಡಿಬೇಟ್ ಗಳನ್ನು ಸಂಪುಟ ಮಾಡಿ ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇವೆ. ಯಾರಿಗೆ ದೇಶದ ಇತಿಹಾಸ ಗೊತ್ತಿಲ್ಲವೋ ಅವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಡಾ| ಅಂಬೇಡ್ಕರ್ ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇತಿಹಾಸ ತಿರುಚಿದ್ದಾರೆ. 1857 ಇದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದರು.
ಆದರೆ 16, 17, 18ನೇ ಶತಮಾನದಲ್ಲಿ ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ಧಾರ ಸೇವಾಲಾಲ್ ಸ್ವಾಮೀಜಿ, ಹಿರಿಯೂರು ಆ ಜಾಂಭವ ಮೂಲಮಠದ ರುದ್ರಾಕ್ಷಿ ಮುನಿಸ್ವಾಮೀಜಿ, ಮೌಲಾನ್ ಮುಫ್ತಿ ಖಾದ್ರಿ, ಶಿವಸಿದ್ದೇಶ್ವರ ಸ್ವಾಮೀಜಿ ಬಾದಿಮಿನಾಳ, ಸಂಸದ ಕರಡಿ ಸಂಗಣ್ಣ, ಶಾಸಕ ಬೈರತಿ ಬಸವರಾಜ್, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಬಸವರಾಜ ರಾಯಎಡ್ಡಿ, ಬಸವರಾಜ ದಡೇಸುಗೂರು, ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ, ಮಾಜಿ ಸಂಸದ ಬಿ.ವಿ. ನಾಯಕ್, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಡಾ| ಪ್ರಭಾಕಾರ ಚಿಣಿ, ಮಹಿಳಾ ಹೋರಾಟಗಾರ್ತಿ ಎಚ್.ಎಸ್. ಅನುಪಮಾ, ಟಿ. ರತ್ನಾಕರ, ಶಿವಪುತ್ರಪ್ಪ ಗುಮಗೇರಿ, ನಾಗರಾಜ ಮೇಲಿನಮನಿ ಇತರರಿದ್ದರು.
ಬ್ರಿಟಿಷ್, ಮೊಗಲರ ವಿರುದ್ಧ ಹೋರಾಡಿದ ಉದಾಹರಣೆ ಇವೆ. ಟಿಪ್ಪು ನಾಲ್ಕು ಯುದ್ಧ ಮಾಡಿದ್ದಾನೆ. 1824ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿ ಥ್ಯಾಕರೆಯನ್ನು ಕೊಂದು ಹಾಕ್ತಾರೆ. ನಾವು ಇತಿಹಾಸ ಓದಬೇಕು. ಡಾ| ಅಂಬೇಡ್ಕರ್ ದೇಶ ಕಂಡ ಮಹಾನ್ ಮೇಧಾವಿಗಳ ಸಾಲಿನಲ್ಲಿ ಮೊದಲಿಗರು. ಡಾ| ಅಂಬೇಡ್ಕರ್ ಅವರು ನಮ್ಮ ಜಾತಿ ವ್ಯವಸ್ಥೆ ಆಚರಣೆಯಲ್ಲಿದ್ದ ಹಿಂದೂ ಧರ್ಮ ಬೆಂಬಲಿತ ಅಸ್ಪೃಶ್ಯತೆಯಿಂದ ಅವಮಾನ ಅನುಭವಿಸಿದವರು. ಅವರು ಸಂವಿಧಾನ ಭಾಷಣ ಮಾಡುವ ವೇಳೆ ಸಂವಿಧಾನ ಜಾರಿ ಮಾಡುವರ ಕೈಯಲ್ಲಿದೆ. ಇಂದು ಮನುವಾದಿಗಳ ಕೈಗೆ ಸಂವಿಧಾನ ಸಿಲುಕಿದೆ. ಸಮಸಮಾಜ ನಿರ್ಮಾಣ ಉದ್ದೇಶ ಇವರಲ್ಲಿ ಇಲ್ಲ. ಎಲ್ಲರಿಗೂ ಸಮಾನ ಅವಕಾಶ ಕೊಡಬೇಕೆನ್ನುವ ಮನಸ್ಸಿಲ್ಲ. ಅವರ ಕೈಯಲ್ಲಿ ಸಂವಿಧಾನ ಸಿಲುಕಿದೆ. ಅನಂತ್ ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದಿದ್ದಾರೆ. ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಆದರೂ ಮೋದಿ ಅವರು ಅವರನ್ನು ಪಕ್ಷದಿಂದ ತೆಗೆದು ಹಾಕಲಿಲ್ಲ. ನರೇಂದ್ರ ಮೋದಿ ಅವರ ಕುಮ್ಮಕ್ಕು ಇವರಿಗೆ ಇರಬೇಕಲ್ವಾ? ನಾನು ಸತ್ಯವನ್ನು ಸತ್ಯವಾಗಿ ಹೇಳಿದ್ದೇನೆ. ಸಂವಿಧಾನ ರಕ್ಷಣೆಯಾಗಬೇಕು ಒಂದು ವೇಳೆ ಸಂವಿಧಾನ ಉಳಿಯದಿದ್ದರೆ, ಸಂವಿಧಾನದ ಜಾಗದಲ್ಲಿ ಮನುಸ್ಮೃತಿ ಬಂದರೆ ನಾನು ಮತ್ತೆ ಕುರಿ ಕಾಯಲು ಹೋಗಬೇಕು ಎಂದರು.
ಸಂವಿಧಾನದಿಂದ ನಾನು ಸಿಎಂ ಆದೆ, ಮೋದಿ ಪ್ರಧಾನಿಯಾದರು. ಬಸವಣ್ಣನ ಕಾಯಕವೇ ಕೆಲಸದಂತೆ ನಡೆಯಬೇಕು. ನಮ್ಮ ಸಮಾಜವು ಶ್ರೇಣಿಕೃತ ವ್ಯವಸ್ಥೆಯಲ್ಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆ ಹೇಳಿದ್ರು, ಯಾರು ಸಂವಿಧಾನದ ವಿರೋಧಿಗಳಿದ್ದಾರೋ ಅವರನ್ನು ಖಂಡಿಸಬೇಕು. ಸ್ವಾರ್ಥಕ್ಕಾಗಿ ಒಪ್ಪುವುದಲ್ಲ. ಬಲಾಡ್ಯರ ಕೈಯಲ್ಲಿ ಎಲ್ಲಿವರೆಗೂ ಅಧಿಕಾರ ಇರುತ್ತೋ ಅಲ್ಲಿವರೆಗೂ ಕ್ರೌರ್ಯ, ಶೋಷಣೆ, ದೌರ್ಜನ್ಯ ಇರುತ್ತದೆ. ನಾವು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
88 ಸಾವಿರ ಕೋಟಿ ಎಸ್ಸಿಪಿ, ಟಿಎಸ್ಪಿಗೆ ಖರ್ಚು ಮಾಡಿದೆ. 2008-13ರವರೆಗೂ 26 ಸಾವಿರ ಕೋಟಿ ಖರ್ಚು ಮಾಡಿದ್ರು, ಆದರೆ ಇದರಲ್ಲಿ 42 ಸಾವಿರ ಕೋಟಿ ಖೋತಾ ಆಗಿದೆ. ಧರ್ಮ ಪರಿಪಾಲನೆ ಆಗಬೇಕು. ಮನುಷ್ಯನ ಪ್ರೀತಿಸದ, ಅಸಮಾನತೆ ಇರುವ, ಎಲ್ಲಿವರೆಗೂ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿವರೆಗೂ ಮೀಸಲಾತಿ ಇರಬೇಕು. ಮೀಸಲಾತಿ ವಿರೋಧ ಮಾಡಿದ ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ಮಾಡ್ಕೊಂಡ್ರು ಆರ್ಥಿಕ, ಸಾಮಾಜಿಕವಾಗಿ ದುರ್ಬಲರಿಗೆ ಮೀಸಲಾತಿ ಕೊಡಬೇಕು. ನೀವು ಸಂವಿಧಾನ ವಿರೋಧಿಗಳನ್ನು ತಿರಸ್ಕಾರ ಮಾಡಬೇಕು. ಈ ಬಗ್ಗೆ ಜಾಗೃತಿ ಹೊಂದಬೇಕು. ಸಂವಿಧಾನ ಉಳಿಸಲು ಎಲ್ಲ ಹೋರಾಟಕ್ಕೆ ಸಿದ್ಧರಾಗೋಣ ಎಂದರು.
ಡಾ| ಬಿ.ಆರ್. ಅಂಬೇಡ್ಕರ್ ಅವರು, ಬೌದ್ಧ ಧರ್ಮ ಸೇರಿದ ಮೇಲೆ ಬಹಳ ದಿನಗಳವರೆಗೆ ಬದುಕಲಿಲ್ಲ. ಮಲಗಿರುವಾಗಲೇ ಡಿ. 5ರಂದು ರಾತ್ರಿ ಇಹಲೋಕ ತ್ಯಜಿಸಿದರು. ನೂರು ವರ್ಷ ಬದುಕಿರಬೇಕಿತ್ತು.ಇದರಿಂದ ಈ ದೇಶ ಸುಧಾರಣೆ ಸಾಧ್ಯತೆ ಇತ್ತು. ಆದರೆ ಅವರು ಕೇವಲ 65 ವರ್ಷ ಬದುಕಿದರು. -ಸಿದ್ದರಾಮಯ್ಯ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.