ನಿಲ್ಲದ ಅಕ್ರಮ ಅಕ್ರಮ ಮರಳು ಮರಳು ದಂಧೆ
Team Udayavani, Jun 14, 2019, 12:01 PM IST
ಕೊಪ್ಪಳ: ಬೂದಿಹಾಳ ಸೇತುವೆ ಬಳಿ ಅಕ್ರಮ ಮರಳು ಸಾಗಾಟ ನಡೆದ ಪರಿಣಾಮ ಕಂದಕ ನಿರ್ಮಾಣವಾಗಿದೆ.
ಕೊಪ್ಪಳ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಬರದ ಭೀಕರತೆ ಹೆಚ್ಚಾಗುತ್ತಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿದೆ. ಆದರೆ ಜಿಲ್ಲೆಯಲ್ಲಿ ಒಂದೆಡೆ ಜಲ ಕ್ರಾಂತಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅಕ್ರಮ ಮರಳು ದಂಧೆಯ ಜಾಲ ವ್ಯಾಪಕವಾಗಿದ್ದು, ಅಧಿಕಾರಿಗಳು ಸೇರಿ ಪೊಲೀಸರಿಗೂ ಕ್ಯಾರೇ ಎನ್ನದಂತ ಬೆಳೆದು ನಿಂತಿದೆ.
ಹೌದು. ಜಿಲ್ಲೆಯ ರೈತ ಸಮೂಹ ಮಳೆಗಾಗಿ ನಿತ್ಯವೂ ದೇವರಲ್ಲಿ ಮೊರೆಯಿಡುತ್ತಿದೆ. ಎಲ್ಲೆಡೆ ಜಪ, ಹೋಮ, ಹವನಗಳು ನಡೆದಿವೆ. ಪೂಜೆ, ಪುನಸ್ಕಾರ ಮಾಡಿದರೂ ಅಂತರ್ಜಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಮನುಕುಲವೇ ಆತಂಕಕ್ಕೆ ಒಳಗಾವುಂತ ಸ್ಥಿತಿ ಎದುರಾಗಿದೆ.
ಇದಕ್ಕೆ ಪ್ರಮುಖ ಕಾರಣ ಮರಳು ದಂಧೆ, ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮರಳನ್ನು ಅಕ್ರಮವಾಗಿ ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮರಳು ದಂಧೆಗೆ ಮಿತಿಯೇ ಇಲ್ಲದಂತ ಸ್ಥಿತಿ ಬಂದಿದೆ. ಹಳ್ಳ, ನದಿ ಪಾತ್ರದ ಸ್ಥಳಗಳ ಸುತ್ತಲೂ ಅವಲೋಕನ ಮಾಡಿದರೆ ಸಾಲು ಕಂದಕದಂತೆ ದೊಡ್ಡ ಗುಂಡಿ ತೋಡಿ ಮರಳು ಸಾಗಾಟ ಮಾಡುತ್ತಿರುವುದು ಗೋಚರಿಸುತ್ತಿದೆ.
ಮರಳು ನೀತಿಯ ಪ್ರಕಾರ ಭೂಮಿಯ ಹಳ್ಳದ ತಟದಲ್ಲಿ ಒಂದು ಮೀಟರ್ ಆಳದಷ್ಟು ಮಾತ್ರ ಮರಳು ತೆಗೆಯಬೇಕು. ಆದರೆ ಜಿಲ್ಲೆಯಲ್ಲಿ ಆ ನಿಯಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೊಪ್ಪಳ ತಾಲೂಕಿನ ಹಳೇ ಗೊಂಡಬಾಳ, ಹೊಸ ಗೊಂಡಬಾಳ ಸಮೀಪದ ಬೂದಿಹಾಳ ಬ್ರಿಡ್ಜ್ ಬಳಿ ಅಕ್ರಮ ಮರಳು ದಂಧೆ ನಿರಾಂತಕವಾಗಿ ನಡೆದಿದೆ. ಇಲ್ಲಿ ಯಾರ ಭಯವಿಲ್ಲ. ಹಳ್ಳದ ಪಕ್ಕದ ಜಮೀನಿನಲ್ಲೇ ಹತ್ತಾರು ಕಡೆ ಕಂದಕದಂತೆ ತಗ್ಗು ಕಾಣಿಸುತ್ತವೆ. ಮರಳಿನ ದಂಧೆ ಬಗ್ಗೆ ಸುತ್ತಲಿನ ಜನತೆ ಬೇಸತ್ತು ಹೋಗಿದ್ದಾರೆ. ಇದರಿಂದ ಹಳ್ಳದ ಸುತ್ತಲಿನ ಪಂಪ್‌ಸೆಟ್ ನೀರು ಬತ್ತಿ ಹೋಗುತ್ತಿವೆ ಎಂದು ಗೋಗರೆಯುತ್ತಿದ್ದಾರೆ.
ಹಳೇ ಗೊಂಡಬಾಳ ಹಾಗೂ ಬೂದಿಹಾಳ ಬ್ರಿಡ್ಜ್ ಬಳಿಯಂತೂ ಮರಳು ದಂಧೆ ವಿಪರೀತವಾಗಿದೆ. ಅಚ್ಚರಿ ಎಂದರೆ, ಸಾಮಾನ್ಯ ಜನತೆಗೆ ಮನೆ ನಿರ್ಮಿಸಿಕೊಳ್ಳಬೇಕೆಂದರೆ ಸರ್ಕಾರದಿಂದ ಪರ್ಮಿಟ್ ಮರಳು ಸಿಗುತ್ತಿಲ್ಲ. ಪರ್ಮಿಟ್ಗಾಗಿ ನಿತ್ಯ ಅಲೆದಾಡುವಂತ ಸ್ಥಿತಿ ಬಂದಿದೆ. ಆದರೆ ಅದೇ ಅಕ್ರಮ ಮರಳು ಎಂದರೆ ಕ್ಷಣಾರ್ಧದಲ್ಲಿ ಜನರ ಮನೆ ಮುಂದೆ ಲೋಡ್ ಗಟ್ಟಲೆ ಬಂದು ಬೀಳುತ್ತಿದೆ. ಇಲ್ಲಿ ಯಾವ ಅಧಿಕಾರಿಗಳ ಆಟವೂ ನಡೆಯುತ್ತಿಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ ಜನತೆ. ಜನಪ್ರತಿನಿಧಿಗಳ ಸಾಥ್ ಇಲ್ಲದೇ ಮರಳು ದಂಧೆ ನಡೆಯಲ್ಲ. ಅವರ ಬೆಂಬಲಿಗರದ್ದೆ ಆರ್ಭಟ ಜೋರಾಗಿದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಕೆಳ ಮಟ್ಟದಿಂದ ಮೇಲ್ಮಟ್ಟದವರೆಗೂ ಈ ಜಾಲ ವ್ಯಾಪಿಸಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಮಲಗಿದ್ದಾರೆಯೇ ಅಧಿಕಾರಿಗಳು: ಪೊಲೀಸ್ ಇಲಾಖೆಯಂತೂ ಅಕ್ರಮ ಮರಳು ದಂಧೆಯ ಮೇಲೆ ನಿಗಾ ಇಡುವುದೇ ಕಡಿಮೆ ಮಾಡುತ್ತಿದೆ. ರಸ್ತೆಗಳಲ್ಲಿ ಸಿಗುವ ವಾಹನಗಳನ್ನು ಠಾಣೆಗೆ ಕರೆ ತಂದು ವಾಪಾಸ್ ಕಳಿಸಲಾಗುತ್ತಿದೆ. ಆದರೆ ಮೂಲ ದಂಧೆ ನಡೆಯುವ ತಾಣಗಳನ್ನೊಮ್ಮೆ ಕಣ್ತೆರೆದ ನೋಡುತ್ತಿಲ್ಲ. ಇನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಂತೂ ಇನ್ನೂ ಎಚ್ಚುತ್ತುಕೊಂಡಿಲ್ಲ. ಅವರು ದಾಳಿ ಮಾಡೋದು ತುಂಬ ವಿರಳ ಎನ್ನುವ ಮಾತು ಕೇಳಿ ಬಂದಿದ್ದರೆ, ಇನ್ನು ಹಲವು ಅಧಿಕಾರಿಗಳು ಎಲ್ಲ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.