Gangavathi, ಕಡೆ ಬಾಗಿಲು, ಹೊಸಪೇಟೆ: ಅನಧಿಕೃತ ಮೈನ್ಸ್, ಅಕ್ರಮ ಮರಳು ಸಾಗಟ; ಹದಗೆಟ್ಟ ರಸ್ತೆ
ಲಾರಿ ಓಡಾಟಕ್ಕೆ ನಿಷೇಧವಿದ್ದರೂ ಕ್ಯಾರೆ ಎನ್ನದ ಲಾರಿ ಚಾಲಕರು; ಪೊಲೀಸ್ ಇಲಾಖೆ ಮೌನ
Team Udayavani, Aug 4, 2023, 10:33 AM IST
ಗಂಗಾವತಿ: ಗಂಗಾವತಿ, ಕಡೆಬಾಗಿಲು ಮತ್ತು ಹೊಸಪೇಟೆಯ 130 ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಲಾರಿಗಳ ಸಂಚಾರಕ್ಕೆ ನಿಷೇಧವಿದ್ದರೂ ಕಳೆದ ಆರು ತಿಂಗಳಿಂದ ಮೈನ್ಸ್ ಮತ್ತು ಅಕ್ರಮ ಮರಳು ತುಂಬಿದ ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟು ತೆಗ್ಗು ಗುಂಡಿ ಬಿದ್ದಿದ್ದು, ಸ್ಥಳೀಯ ವಾಹನ ಚಾಲಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿ ಮತ್ತು ಟ್ರಕ್ ಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಚಾಲಕರು ಕಳೆದ ಆರು ತಿಂಗಳಿಂದ ಹಗಲು ರಾತ್ರಿ ಇದೇ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿಗಳನ್ನು ಓಡಿಸುತ್ತಿದ್ದರೂ ತಾಲೂಕು ಆಡಳಿತ ಹಾಗೂ ಗ್ರಾಮೀಣ ಪೊಲೀಸರ ಮೌನ ಹಲವು ಅನುಮಾನ ಹುಟ್ಟಿಸಿದೆ.
70-80 ಟನ್ ಭಾರ ತುಂಬಿದ ಮೈನ್ಸ್ ಮತ್ತು ಅಕ್ರಮ ಮರಳು ಲಾರಿ ಮತ್ತು ಟ್ರಕ್ ಗಳ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ.
ಕಿಷ್ಕಿಂಧಾ ಅಂಜನಾದ್ರಿಗೆ ದೇಶ-ವಿದೇಶದ ಪ್ರವಾಸಿಗರು, ಆನೆಗುಂದಿ ಮತ್ತು ಮುನಿರಾಬಾದ್ ಹುಲಿಗಿಯ ಶ್ರೀಹುಲಿಗೆಮ್ಮ ದೇವಿಯ ಕ್ಷೇತ್ರಕ್ಕೆ ಹುಣ್ಣುಮೆ, ಅಮವಾಸ್ಯೆ, ಮಂಗಳವಾರ, ಶುಕ್ರವಾರ ಸಾವಿರಾರು ಭಕ್ತರು, ಪ್ರವಾಸಿಗರು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದು, ಪ್ರವಾಸಿಗರು ಮತ್ತು ವಾಹನಗಳ ಚಾಲಕರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದಾರೆ.
ಹೆಚ್ಚಿದ ಅಪಘಾತಗಳು: ಗಂಗಾವತಿ, ಕಡೆ ಬಾಗಿಲು ಹೊಸಪೇಟೆ, ಹುಲಿಗಿ ಕಡೆ ಹೋಗುವ ರಸ್ತೆಯಲ್ಲಿ ಲಾರಿ ಮತ್ತು ಅಕ್ರಮ ಮರಳು ಟ್ರಕ್ ಗಳ ಸಂಚಾರದಿಂದ ಕಳೆದ ಆರು ತಿಂಗಳಿಂದ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.
ಸಾವು-ನೋವುಗಳು ಸಂಭವಿಸಿದ್ದರೂ ಪೊಲೀಸ್ ಇಲಾಖೆ ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿಗಳ ಸಂಚಾರಕ್ಕೆ ತಡೆಯೊಡ್ಡು, ಹೊಸಪೇಟೆ ಮತ್ತು ರಸ್ತೆ ಅಗಲೀಕರಣ ಕುರಿತು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಶೀಘ್ರವೇ ಕಾಮಗಾರಿ ಆರಂಭ ಮಾಡಬೇಕಿದೆ.
ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ: ರಾಜ್ಯ ಸರ್ಕಾರ ಗಂಗಾವತಿ, ಆನೆಗೊಂದಿ, ಮುನಿರಾಬಾದ್ ರಸ್ತೆಯನ್ನು 130 ರಾಜ್ಯ ಹೆದ್ದಾರಿ ಎಂದು ಘೋಷಣೆ ಮಾಡಿದ್ದರೂ ರಾಜ್ಯ ಹೆದ್ದಾರಿಗೆ ಇರಬೇಕಾದ ಸೌಕರ್ಯಗಳನ್ನು ನೀಡಿಲ್ಲ. ಇದರಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿವೆ.
ಹೆಡ್ನಾಳ್ ಗಂಗಾವತಿ ಮಧ್ಯೆ ರಸ್ತೆ ಬಹಳ ಇಕ್ಕಟ್ಟಾಗಿದ್ದು, ಅಗಲೀಕರಣ ಮಾಡುವ ಕುರಿತು ಈಗಾಗಲೇ ಪ್ರಸ್ತಾವನೆಗಳು ನಡೆದಿದ್ದು, ಕಳೆದ ಎರಡು ವರ್ಷಗಳ ಹಿಂದೆ ಘೋಷಣೆ ಮಾಡಲಾಗಿದೆ.
ಲಾರಿ ಟ್ರಕ್ ಗಳ ಸಂಚಾರ ನಿಷೇಧಕ್ಕೆ ಸೂಚನೆ: ಗಂಗಾವತಿ, ಕಡೆ ಬಾಗಿಲು, ಹೊಸಪೇಟೆ, ಆನೆಗೊಂದಿ ಮಾರ್ಗದಲ್ಲಿ ಭಾರಿ ಗಾತ್ರದ ಲಾರಿ ಮತ್ತು ಅಕ್ರಮ ಮರಳು ತುಂಬಿದ ಟ್ರಕ್ ಗಳ ಓಡಾಟದಿಂದ ಸಂಚಾರ ಸಂಪೂರ್ಣ ಹದಗೆಟ್ಟಿದೆ. ನಿತ್ಯವೂ ಸಾವಿರಾರು ವಾಹನಗಳು ಮತ್ತು ಪ್ರವಾಸಿಗರು ಸಂಚರಿಸುವ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳನ್ನು ನಿಷೇಧ ಮಾಡಿದ್ದರೂ ಕೂಡಾ ವಾಹನಗಳು ಸಂಚರಿಸತ್ತಿವೆ.
ಈ ರಸ್ತೆಯಲ್ಲಿ ಹೋಗುವುದನ್ನು ಕೂಡಲೇ ತಡೆಯುವಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ರಸ್ತೆ ಅಭಿವೃದ್ಧಿ ಕುರಿತಂತೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಯಂತೆ ಈ ರಸ್ತೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.