ಕೋವಿಡ್-19 ಸ್ಕ್ರೀನಿಂಗ್ ಲ್ಯಾಬ್ ಉದ್ಘಾಟನೆ
Team Udayavani, May 27, 2020, 6:37 AM IST
ಕೊಪ್ಪಳ: ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೀವಶಾಸ್ತ್ರ ವಿಭಾಗದಲ್ಲಿ ಕೋವಿಡ್-19 ಸ್ಕ್ರೀನಿಂಗ್ ಪರೀಕ್ಷೆ ಪ್ರಯೋಗಾಲಯವನ್ನು ಸಂಸದ ಸಂಗಣ್ಣ ಕರಡಿ ಮಂಗಳವಾರ ಉದ್ಘಾಟಿಸಿದರು.
ವಿಭಾಗದ ಪ್ರಾಧ್ಯಾಪಕ ಡಾ| ಮಂಜುನಾಥ ಸಾಲಿಮನಿ ಮಾತನಾಡಿ, ಕೋವಿಡ್-19 ಸ್ಕ್ರೀನಿಂಗ್ (ಟ್ರೋನ್ಯಾಟ್) ಪರೀಕ್ಷೆ ಕೇವಲ ಕೋವಿಡ್-19 ನೆಗೆಟಿವ್ ಫಲಿತಾಂಶವನ್ನು ಮಾತ್ರ ದೃಢೀಕರಿಸುತ್ತದೆ. ಕೋವಿಡ್-19 ಪಾಸಿಟಿವ್ ಫಲಿತಾಂಶವನ್ನು ಆರ್‌ಟಿಪಿಸಿಆರ್ ಪರೀಕ್ಷೆ ಮೂಲಕ ದೃಢೀಕರಣಗೊಳಿಸಬೇಕಾಗಿರುತ್ತದೆ. ಪ್ರತಿದಿನ 40ರಿಂದ 45 ಪರೀಕ್ಷೆ ಮಾಡಬಹುದು. ಕಿಮ್ಸ್ ಸಂಸ್ಥೆಯ ಮಿಣಿ ಜೀವಶಾಸ್ತ್ರ ವಿಭಾಗದಲ್ಲಿ ವೈರಾಣು ಸಂಶೋಧನೆ ಹಾಗೂ ರೋಗನಿರ್ಣಯ ಪ್ರಯೋಲಯವು (ವಿಆರ್ ಡಿಎಲ್) ಮುಕ್ತಾಯದ ಹಂತದಲ್ಲಿದ್ದು, ಈ ಮಾಸಂತ್ಯಕ್ಕೆ ಕಾರ್ಯಾರಂಭವಾಗಲಿದೆ.
ವೈರಾಣು ಸಂಶೋಧನೆ ಹಾಗೂ ರೋಗ ನಿರ್ಣಯ ಪ್ರಾಯೋಗಾಲಯದಲ್ಲಿ ಆರ್‌ಟಿಪಿಸಿಆರ್ ವಿಧಾನ ಮೂಲಕ ಕೋವಿಡ್-19 ಪರೀಕ್ಷೆ ಮಾಡಲಾಗುತ್ತದೆ. ಆರ್‌ಟಿಪಿಸಿಆರ್ ವಿಧಾನದ ಮೂಲಕ ಕೋವಿಡ್-19 ಪಾಸಿಟಿವ್ ಮತ್ತು ನೆಗೆಟಿವ್ ಪ್ರಕರಣಗಳನ್ನು ದೃಢೀಕರಿಸಿಕೊಳ್ಳಬೇಕಾಗಿರುತ್ತದೆ. ಆರ್‌ಟಿಪಿಸಿಆರ್ ಪರೀಕ್ಷೆ ಮೂಲಕ ದೃಢೀಕರಣ ಗೊಳಿಸಬೇಕಾಗಿರುತ್ತದೆ. ಪ್ರತಿದಿನ 140-150 ಪರೀಕ್ಷೆ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ನಾಪೂರ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Gangavathi: ಸಂಕ್ರಾಂತಿ: ತುಂಗಭದ್ರಾ ನದಿಯಲ್ಲಿ ಸಾವಿರಾರು ಜನರಿಂದ ಪುಣ್ಯ ಸ್ನಾನ
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ