![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 15, 2021, 4:04 PM IST
ಗಂಗಾವತಿ: ಉನ್ನತ ಶಿಕ್ಷಣವನ್ನು ಇನ್ನಷ್ಟುವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಲುಕೇಂದ್ರ ಮತ್ತು ರಾಜ್ಯ ಸರಕಾರಗಳುವಿಶ್ವವಿದ್ಯಾಲಯ ಸ್ಥಾಪಿಸುತ್ತಿದ್ದು, ಕೊಪ್ಪಳ-ಗದಗಜಿಲ್ಲೆಗಳನ್ನೊಳಗೊಂಡು ವಿಶ್ವವಿದ್ಯಾಲಯ ಸ್ಥಾಪನೆಮಾಡಲು ಬಿ.ಎಸ್. ಯಡಿಯೂರಪ್ಪ ಸಿಎಂ ಇದ್ದಾಗಸರಕಾರ ನಿರ್ಧರಿಸಿ ಬಳ್ಳಾರಿ ಶ್ರೀಕೃಷ್ಣದೇವರಾಯವಿವಿ ಉಪಕುಲಪತಿಯವರ ನೇತೃತ್ವದಲ್ಲಿ ಉನ್ನತಅ ಧಿಕಾರಿಗಳ ಕಮಿಟಿ ರಚನೆ ಮಾಡಿ, ನೂತನ ವಿವಿಅಸ್ತಿತ್ವದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ನೀಡಲು ಸೂಚನೆ ನೀಡಿತ್ತು.
ಕಳೆದ ತಿಂಗಳು ಕಮಿಟಿ ಕೊಪ್ಪಳಯಲಬುರ್ಗಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿಮಾಹಿತಿ ಸಂಗ್ರಹಿಸಿದೆ. ಈ ಮಧ್ಯೆ ಜಿಲ್ಲೆ ಸಂಸದರು,ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಆಸಕ್ತಿಯಿಂದ ಇದೇ ವರ್ಷ ವಿವಿ ಆರಂಭವಾಗಲಿದೆಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಈಗಾಗಲೇ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿಯಸ್ನಾತಕೋತ್ತರ ಕೇಂದ್ರ ಗಂಗಾವತಿಗೆ ಮಂಜೂರಿಯಾಗಿವಿವಿ ವಿಶೇಷ ಅ ಧಿಕಾರಿಯನ್ನು ನೇಮಕ ಮಾಡಿತ್ತು.ನಂತರ ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಪ್ರಭಾವ ಬಳಸಿ ಯಲಬುರ್ಗಾಕ್ಕೆಸ್ನಾತಕೋತ್ತರ ಕೇಂದ್ರ ವರ್ಗ ಮಾಡಿಸಿಕೊಂಡಿದ್ದರು.
ಗಂಗಾವತಿ ತಾಲೂಕಿನಲ್ಲಿ 23 ಪದವಿಕಾಲೇಜುಗಳಿದ್ದು, ಇಲ್ಲಿಯೇ ಸ್ನಾತಕೋತ್ತರಕೇಂದ್ರವಾಗಬೇಕೆಂದು ವಿದ್ಯಾರ್ಥಿ ಸಂಘಟನೆಗಳು,ಜನಪ್ರತಿನಿ ಧಿಗಳು ವಿವಿಗೆ ಪತ್ರ ಬರೆದುಒತ್ತಾಯಿಸಿದರೂ ರಾಯರೆಡ್ಡಿ ಹಠಕ್ಕೆ ಬಿದ್ದುಯಲಬುರ್ಗಾಕ್ಕೆ ಪಿಜಿ ಸೆಂಟರ್ ಮಾಡಿಸಿಕೊಂಡಿದ್ದರು.ಇದೀಗ ಕೊಪ್ಪಳ, ಗದಗ ಜಿಲ್ಲೆಗಳನ್ನು ಒಳಗೊಂಡುನೂತನ ವಿವಿ ಅಸ್ತಿತ್ವಕ್ಕೆ ಬರಲಿದ್ದು, ಇದನ್ನುಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ ಯೋಗವಿವಿ ನಿರ್ಮಿಸಲು ಪರಿಶೀಲಿಸಿದ್ದ ಪ್ರದೇಶದಲ್ಲಿಆರಂಭಿಸುವಂತೆ ವಿದ್ವಾಂಸರು, ಜನಪ್ರತಿನಿ ಧಿಗಳು,ನಿವೃತ್ತ ಉಪನ್ಯಾಸಕರು, ಪ್ರಾಚಾರ್ಯರು ಶಾಸಕಸಂಸದ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡಹಾಕಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿ ಪ್ರದೇಶದಲ್ಲಿ 400 ಎಕರೆಗೂಹೆಚ್ಚು ಸರಕಾರಿ ಭೂಮಿ ಇದ್ದು, ಇಲ್ಲಿ ಯೋಗ ವಿವಿಆರಂಭಿಸಲು ಸಂಸದ ಕರಡಿ ಸಂಗಣ್ಣ ಕೇಂದ್ರ ಸರಕಾರಕ್ಕೆಎರಡು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ.ಈ ಮಧ್ಯೆ ಕೇಂದ್ರ ಸರಕಾರ ಯೋಗ ವಿವಿಯನ್ನುಮಧ್ಯಪ್ರದೇಶ ರಾಜ್ಯದಲ್ಲಿ ಸ್ಥಾಪನೆ ಮಾಡುವ ಉದ್ದೇಶಹೊಂದಿದೆ ಎನ್ನಲಾಗುತ್ತಿದೆ. ಪ್ರಸ್ತುತ ಕೊಪ್ಪಳ-ಗದಗಉದ್ದೇಶಿತ ನೂತನ ವಿವಿಯನ್ನು ಕಿಷ್ಕಿಂದಾ ಅಂಜನಾದ್ರಿಪ್ರದೇಶದಲ್ಲಿ ಸ್ಥಾಪಿಸಬೇಕು. ಇದೇ ಶೈಕ್ಷಣಿಕ ವರ್ಷದಲ್ಲಿವಡ್ಡರಹಟ್ಟಿಯಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿಹಲವಾರು ಕಟ್ಟಡಗಳಿದ್ದು, ಇಲ್ಲಿಯೇ ತಾತ್ಕಾಲಿಕವಾಗಿವಿವಿ ಆರಂಭಿಸಬಹುದಾಗಿದೆ.ನೂತನ ವಿವಿ ಆರಂಭದಿಂದ ಉನ್ನತ ಶಿಕ್ಷಣದಿಂದಹೊರಗುಳಿಯುವ ಗ್ರಾಮೀಣ ಭಾಗದವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆಅನುಕೂಲವಾಗಲಿದೆ.
ಕೆ. ನಿಂಗಜ್ಜ
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.