ಎಡದಂಡೆ ನಾಲೆ ಕಾಮಗಾರಿ ಪರಿಶೀಲನೆ
Team Udayavani, Jul 8, 2020, 4:37 PM IST
ಕಾರಟಗಿ: ಸಮೀಪದ ಸೋಮನಾಳ ಬಳಿಯ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನಡೆಯುತ್ತಿರುವ ಲೈನಿಂಗ್ ಕಾಮಗಾರಿ ಸ್ಥಳಕ್ಕೆ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕ ಬಸವರಾಜ ದಢೇಸುಗೂರ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಂಸದ ಕರಡಿ ಸಂಗಣ್ಣ, 63 ಕೋಟಿ ರೂ. ವೆಚ್ಚದಲ್ಲಿ ಎಡದಂಡೆ ಲೈನಿಂಗ್ ಮತ್ತು ಕಾಲುವೆ ಅಧುನೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಕೊರೊನಾ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಕಾಮಗಾರಿಗೆ ಕಡಿಮೆ ಸಮಯವಿದ್ದರಿಂದ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ.
ಅಲ್ಲದೆ ರೈತರು ಭತ್ತ ನಾಟಿ ಕಾರ್ಯ ಆರಂಭದ ಹಂತದಲ್ಲಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ತೊಂದರೆಯಾಗದಂತೆ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸಬೇಕು. ಅಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಹರಿಸುವ ಕಾರ್ಯವಾಗಬೇಕು. ಕಳೆದ ಬಾರಿಯಂತೆ ನೀರು ಹರಿಸುವುದು ವಿಳಂಬವಾಗಬಾರದು. ಕಾಲುವೆ ಅಧುನೀಕರಣಕ್ಕೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದದೇಸುಗೂರು ಹೆಚ್ಚಿನ ಶ್ರಮವಹಿಸಿ ಹಣ ತಂದಿದ್ದಾರೆ. ಇದರ ಜತೆಗೆ ಗಂಗಾವತಿ ಶಾಸಕರು ಕೂಡ ಪ್ರಯತ್ನಿಸಿದ್ದಾರೆ ಎಂದರು.
ನೀರಾವರಿ ಇಲಾಖೆಯ ಸೂಗಪ್ಪ, ರಮೇಶ ವಲ್ಯಾಪೂರ, ವಿರೂಪಾಕ್ಷಿ, ಮಂಜುನಾಥ, ಧನಂಜಯ ಹಾಗೂ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಎಪಿಎಂಸಿ ಸದಸ್ಯ ನಾಗರಾಜ ಅರಳಿ, ಎಪಿಎಂಸಿ ಸದಸ್ಯ ಸಣ್ಣೆಪ್ಪ, ಪ್ರಮುಖರಾದ ನಾಗರಾಜ ಬಿಲ್ಗಾರ, ಹಿರೇಬಸಪ್ಪ ಸಜ್ಜನ, ಚನ್ನಬಸವ ಸುಂಕದ, ಶಿವಶರಣೆಗೌಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.