ಜವಾರಿ ಟೊಮ್ಯಾಟೋ ತಳಿ ಸಂಸ್ಕರಣೆ
Team Udayavani, Dec 25, 2019, 2:17 PM IST
ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಸರ್ಕಾರಿ ತೋಟಗಾರಿಕಾ ಫಾರ್ಮ್ನಲ್ಲಿ ಇದೇ ಮೊದಲ ಬಾರಿಗೆ ಇಸ್ರೇಲ್ ಕೃಷಿ ಆಧಾರಿತವಾಗಿ ಚರಿ ಟೊಮ್ಯಾಟೋ ಬೆಳೆ ಪ್ರಯೋಗ ಫಲಶ್ರುತಿ ನೀಡಿದೆ.
ಮೂಲ ಜವಾರಿ ಟೊಮ್ಯಾಟೋವನ್ನು ಸಂಸ್ಕರಿಸಿ, ಅಭಿವೃದ್ಧಿ ಪಡಿಸಿದ ಈ ಟೊಮ್ಯಾಟೋಗೆ ಚರಿ ಟೊಮ್ಯಾಟೋ ಎಂದು ಹೆಸರಿಸಲಾಗಿದೆ. ಮೂಲ ಜವಾರಿ ಟೊಮ್ಯಾಟೋ ತೀರ ಹುಳಿಯಾಗಿದ್ದು, ಹೆಚ್ಚು ಬೀಜಗಳಿಂದ ಕೂಡಿರುತ್ತದೆ. ಆದರೆ ಚರಿ ಟೊಮ್ಯಾಟೋ ಸಿಹಿಯಾಗಿದ್ದು, ಬೀಜ ಕಡಿಮೆ ಇರುತ್ತದೆ. ತರಕಾರಿ ಹಾಗೂ ಹಣ್ಣಿನಂತೆಯೂ ಬಳಸಬಹುದಾಗಿದೆ. ತೋಟಗಾರಿಕಾ ಫಾರ್ಮ್ನಲ್ಲಿ ಕಳೆದ ತಿಂಗಳಿಂದೀಚೆಗೆ ತಲಾ 10 ಗುಂಟೆಯ ಪ್ರತ್ಯೇಕ ಎರಡು ಪಾಲಿಹೌಸ್‌ನಲ್ಲಿ ಪ್ರಯೋಗಾರ್ಥ ಚರಿ ಟೊಮ್ಯಾಟೋ ಬೆಳೆಯಲಾಗಿದೆ. ಪ್ರತಿ ಪಾಲಿಹೌಸ್‌ನಲ್ಲಿ 2,500 ಗಿಡಗಳಿದ್ದು, ಪ್ರಯೋಗಾರ್ಥವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ಬಂದಿದೆ. ಚರಿ ಟೊಮ್ಯಾಟೋ ಬೆಂಗಳೂರಿನ ಹುಳಿಮಾವು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪ್ರಯೋಗಾರ್ಥವಾಗಿ ಬೆಳೆಯಲಾಗಿತ್ತು. ನಂತರ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಮಾರ್ಗದರ್ಶನದಲ್ಲಿ ಕುಷ್ಟಗಿಯ ನಿಡಶೇಸಿ ತೋಟಗಾರಿಕಾ ಫಾರ್ಮ್ನಲ್ಲಿ ಬೆಳೆಯಲಾಗಿದ್ದು, ನಿರೀಕ್ಷಿಸಿದಂತೆ ಇಳುವರಿ ಬಂದಿದೆ.
ಕೆಂಪು ಹಾಗೂ ಹಳದಿ ಬಣ್ಣದ ಚರಿ ಟೊಮ್ಯಾಟೋ ಹಣ್ಣನ್ನು ನೇರವಾಗಿ ಚಟ್ನಿ, ಸಾಸ್ ತಯಾರಿಕೆಗೆ ಹಾಗೂ ದೊಡ್ಡ ಹೋಟೆಲ್‌ಗಲ್ಲಿ ಸ್ನಾ ಕ್ಸ್ ಆಗಿ ಬಳಸಲಾಗುತ್ತಿದೆ. ಐರಿ ಟೊಮ್ಯಾಟೋ ಸದ್ಯದ ಬೆಲೆ ಕೆ.ಜಿ.ಗೆ 80 ರೂ. ಇದೆ. 2,500 ಗಿಡಗಳಿಂದ ಪ್ರತಿದಿನ 80ರಿಂದ 100 ಕೆ.ಜಿ ಇಳುವರಿ ಬರುತ್ತಿದ್ದು, ಮುಂದಿನ 7-8 ತಿಂಗಳಿನಲ್ಲಿ 30 ಟನ್ ನಿರೀಕ್ಷೆಯಲ್ಲಿದ್ದು, 6ರಿಂದ 7 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ ಎಂದು ಸಹಾಯಕ ತೋಟಗಾರಿಕಾ ಅಧಿಕಾರಿ ಆಂಜನೇಯ ದಾಸರ್ ವಿವರಿಸಿದರು. ಈ ಬೆಳೆ 8 ತಿಂಗಳವರೆಗೆ ನಿರಂತರ ಇಳುವರಿ ನೀಡುತ್ತಿದ್ದು, ಹಣ್ಣಾದ ಚರಿ ಟೊಮ್ಯಾಟೋಗಳನ್ನು ನೇರವಾಗಿ ಮಾರುಕಟ್ಟೆಗೆ ಕಳಿಸಬಹುದು. ಹಣ್ಣಿನ ತೊಗಟೆ ದಪ್ಪವಾಗಿದ್ದು, 15 ದಿನ ಇಟ್ಟರೂ ಅದೇ ತಾಜಾತನ ಉಳಿಸಿಕೊಂಡಿರುತ್ತದೆ. ಹೀಗಾಗಿ ಬೇರೆಡೆ ಸಾಗಾಣಿಕೆಗೆ ಈ ಹಣ್ಣು ಉಪಯುಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.