ಊರಿಗೆ ತೆರಳಲು ಜಾರ್ಖಾಂಡ್ ರಾಜ್ಯದ ಕಾರ್ಮಿಕರ ಪರದಾಟ
Team Udayavani, May 4, 2020, 8:50 AM IST
ಗಂಗಾವತಿ: ಗಿಣಿಗೇರಿ ಮಹೆಬೂಬನಗರ ರೈಲ್ವೆ ಮಾರ್ಗದ ಕಾಮಗಾರಿ ಮಾಡಲು ಆಗಮಿಸಿ ಕೋವಿಡ್-19 ಕರ್ಪ್ಯೂ ನಲ್ಲಿ ಸಿಲುಕಿರುವ ಜಾರ್ಖಾಂಡ್ ರಾಜ್ಯದ ಕೂಲಿಕಾರ್ಮಿಕರು ತಮ್ಮ ಊರಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.
ಕೋವಿಡ್-19 ವೈರಸ್ ಹರಡದಂತೆ ವಿಧಿಸಲಾಗಿರುವ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೂಲಿ ಕೆಲಸಕ್ಕಾಗಿ ಹೋಗಿರುವ ಕೂಲಿಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ತೆರಳಲು ಕೇಂದ್ರಹಾಗೂ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ.
ಕಾರಟಗಿ ತಾಲ್ಲೂಕಿನಲ್ಲಿ ನಡೆದಿರುವ ರೈಲ್ವೆಮಾರ್ಗದ ಕಾಮಗಾರಿಯಲ್ಲಿ ಕೂಲಿಕೆಲಸ ಮಾಡುವ ಮತ್ತು ಟಿಪ್ಪರ್ ಲಾರಿ ಚಾಲನೆ ಮಾಡುವ 10ಕ್ಕೂ ಹೆಚ್ಚು ಜಾರ್ಖಾಂಡ್ ರಾಜ್ಯದ ಕೊಡರಾಂ ಜಿಲ್ಲೆಯ ಮದನಗುಂಡಿ ಗ್ರಾಮದ ಕೂಲಿಕಾರ್ಮಿಕರು ತಮ್ಮ ಊರಿಗೆ ತೆರಳಲು ಪರದಾಡುತ್ತಿದ್ದಾರೆ.
“ಇಲ್ಲಿ ಮಾಡಲು ಕೆಲಸವಿಲ್ಲ ಊರಿಗೆ ಹೋಗಲು ಹಣವಿಲ್ಲ ಸರಕಾರ ನಮಗೆ ಸಹಾಯ ಮಾಡಬೇಕು. ಸ್ವಂತ ಊರಿಗೆ ಹೋಗಲು ಎರಡು ದಿನಗಳ ಹಿಂದೆ ಕೇಂದ್ರ ಅವಕಾಶ ಕಲ್ಪಿಸಿದ್ದು ಆನ್ ಲೈನ್ ಆಪ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಮೆಸೇಜ್ ಬಂದಿಲ್ಲ. ಗಂಗಾವತಿ ತಹಸೀಲ್ದಾರ್ ಕಚೇರಿಗೆ ತೆರಳಿ ಊರಿಗೆ ಹೋಗಲು ಸಹಾಯ ಕೋರಲಾಗುತ್ತದೆ. ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಜಾರ್ಖಂಡ್ ರಾಜ್ಯದ ಕೂಲಿಕಾರ್ಮಿಕ ರಾಮಪ್ರಸಾದ ಪಾಸ್ವಾನ್ ಉದಯವಾಣಿ ಗೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.