ಸತೀಶ್ ಜಾರಕಿಹೊಳಿಯದ್ದು ನೀತಿಗೆಟ್ಟ ಹೇಳಿಕೆ: ಕೆ.ಎಸ್. ಈಶ್ವರಪ್ಪ
Team Udayavani, Jun 23, 2023, 12:03 PM IST
ಕೊಪ್ಪಳ: ಗೃಹ ಜ್ಯೋತಿ ಅರ್ಜಿ ಸರ್ವರ್ ಹ್ಯಾಕ್ ಆಗಿದೆ ಎಂದು ಮಂತ್ರಿ ಸತೀಶ ಜಾರಕಿಹೊಳಿ ಅವರು ಹೇಳಿಕೆ ನೀಡಿ, ಈಗ ಅದು ರಾಜಕೀಯ ಹೇಳಿಕೆ ಎಂದೆನ್ನುತ್ತಿದ್ದಾರೆ ಇವರದ್ದು ನೀತಿಗೆಟ್ಟವರ ಹೇಳಿಕೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸರ್ಕಾರದ ವಿರುದ್ದ ಗುಡುಗಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಅವರು ಅಕ್ಕಿ ನೀಡುವಲ್ಲಿ ಟೀಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ಚುನಾವಣೆ ಕೆಟ್ಟ ಕನಸು ಎಂದು ತಿಳಿದು ಲೋಕಸಭೆಯಲ್ಲಿ ಮೋದಿ ಗೆಲ್ಲಿಸಲೇಬೇಕು. ಬಿಜೆಪಿ ಸಂಘಟನಾ ಶಕ್ತಿ ಕುಂದಿಲ್ಲ. ಕೇಂದ್ರ ಸರಕಾರ ಸಾಧನೆ, ಇಡೀ ದೇಶ ಮೆಚ್ಚಿ ಪ್ರಶಂಸೆ ಮಾಡುತ್ತಿದೆ. ಖಂಡಿತವಾಗಿ ಅತೀ ಹೆಚ್ಚು ಸ್ಥಾನಗಳನ್ನು ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣೆಯಲ್ಲಿ ಸೋತಿದ್ದು ಮರೆತು ಮೋದಿ ಗೆಲ್ಲಿಸಲಿದ್ದಾರೆ ಎಂದರು.
ಇದನ್ನೂ ಓದಿ:ಒಂದು ಕ್ಷಣವೂ ವೇಸ್ಟ್ ಮಾಡುತ್ತಿಲ್ಲ, ಆದಷ್ಟು ಬೇಗ ಬರುತ್ತೇನೆ: ಹೊಸ ಚಿತ್ರದ ಬಗ್ಗೆ ಯಶ್
ಹೊಂದಾಣಿಕೆ ರಾಜಕಾರಣದ ವಿಷಯದಲ್ಲಿ ಪ್ರತಿಪಕ್ಷಗಳು ಒಂದೇ ಕಡೆ ಒಂದಾಗುತ್ತಿವೆ. ಪಾಂಡವರು ಐದೇ ಜನ. ಪ್ರತಿಪಕ್ಷಗಳು ಮೊದಲೂ ಆರೋಪ ಮಾಡಿದ್ದಾರೆ. ಅವೆಲ್ಲ ವಿಫಲ ಆಗಿವೆ. ಇದು ಹೊಸದಲ್ಲ ಎಂದರು.
ಚುನಾವಣೆ ಕೆಟ್ಟ ಕನಸು, ಅದನ್ನು ಮರೆತು ಹೋಗಬೇಕು. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಹೈಕಮಾಂಡ ನಿರ್ಧಾರ ಮಾಡಲಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ನೀಡದ ಕುರಿತು ಮಾಧ್ಯಮಗಳ ಸೃಷ್ಟಿಯಷ್ಟೆ. ಪಕ್ಷದಲ್ಲಿ ಈ ಕುರಿತು ಪಕ್ಷದಲ್ಲಿ ನಿರ್ಧಾರವಾಗಿಲ್ಲ ಎಂದರು.
ಗ್ಯಾರಂಟಿಗಳನ್ನು ಮೊದಲನೇ ಕ್ಯಾಬಿನೆಟ್ನಲ್ಲಿ ಜಾರಿಗೊಳಿಸಬೇಕು. ಅವರ ಹನಿಮೂನ್ ಅವಧಿ ಮುಗಿದಿದೆ. ರಾಜ್ಯದಲ್ಲಿ ಬರದಿಂದ ಜನ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರಕಾರ ಕಾಳಜಿ ಇಲ್ಲ ಎಂದರು.
ಗ್ಯಾರಂಟಿ ಘೋಷಣೆ ಮಾಡುವಾಗ ಮೋದಿ ಕೇಳಿದ್ದರಾ ಎಂದರಲ್ಲದೆ ವಿದ್ಯುತ್ ದರ ಏರಿಕೆ ಮಾಡಿ ದುಡ್ಡು ಬೇಕೆಂದು ಕೇಳುತ್ತಿದ್ದಾರೆ ಎಂದರು.
ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ. ಎಂಎಲ್ ಸಿ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಂಜುಳಾ ಕರಡಿ, ಅಪ್ಪಣ್ಣ ಪದಕಿ, ನವೀನ ಗುಳಗಣ್ಣನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.