ಬೆಳೆ ಹಾನಿ ವೀಕ್ಷಣೆಗೆ ಸಿಎಂ ಭೇಟಿ: ದಢೇಸುಗೂರ
Team Udayavani, Apr 12, 2020, 3:35 PM IST
ಕನಕಗಿರಿ: ಶಾಸಕ ಬಸವರಾಜ ದಢೇಸುಗೂರು ಹಾಗೂ ಅಧಿಕಾರಿಗಳು ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ ವೀಕ್ಷಣೆ ಮಾಡಿದರು.
ಕನಕಗಿರಿ: ಅಕಾಲಿಕ ಮಳೆಯಿಂದ ಬೆಳೆಹಾನಿ ವೀಕ್ಷಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳೆಹಾನಿ ವೀಕ್ಷಣೆಗಾಗಿ ಆಗಮಿಸಲಿದ್ದು, ಇದಕ್ಕಾಗಿ ಏ. 13ರಂದು ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಅವರು ಕನಕಗಿರಿ, ಜೀರಾಳ, ಕಲಿಕೇರಿ, ಕಾಟಾಪುರ, ಮಲ್ಲಿಗೆವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಬೆಳೆಹಾನಿ ವೀಕ್ಷಿಸಿ ಮಾತನಾಡಿದರು. ರೈತರು ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಇರಬೇಕು. ರೈತರೊಂದಿಗೆ ಸರ್ಕಾರವಿದ್ದು, ಎಲ್ಲ ರೀತಿಯ ನೆರವು ನೀಡಲು ಸಿದ್ಧರಿದ್ದೇವೆ. ಜಿಲ್ಲೆಯ ಶಾಸಕರು, ಸಂಸದರು ಜೊತೆಗೂಡಿ ಸೋಮವಾರ ಮುಖ್ಯಮಂತ್ರಿ ಭೇಟಿ ಮಾಡಿ ರೈತರ ಸಂಕಷ್ಟ ಮನವರಿಕೆ ಮಾಡಲಾಗುವುದು. ಏ. 12ರಂದು ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಹಾನಿಯಾದ ರೈತರ ಬೆಳೆ ಬಗ್ಗೆ ಜಿಲ್ಲಾಧಿ ಕಾರಿಗಳು ಸಮಗ್ರ ವರದಿ ಸರ್ಕಾರಕ್ಕೆ ಕಳುಹಿಸಲಿದ್ದಾರೆ. ರೈತರು ಧೃತಿಗೇಡದೆ ಆತ್ಮಸ್ಥೈರ್ಯದಿಂದ ಇರಬೇಕು. ಶೀಘ್ರವೇ ಪರಿಹಾರ ನೀಡಲಾ ಗುವುದೆಂದರು.
ತಹಶೀಲ್ದಾರ್ ರವಿ ಅಂಗಡಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಿವಯೋಗಿ, ನವಲಿ ಹೋಬಳಿ ಕೃಷಿ ಅಧಿಕಾರಿ ನಾಗವೇಣಿ, ತೋಟಗಾರಿಕಾ ಹೋಬಳಿ
ಅಧಿಕಾರಿಗಳಾದ ಶಿವಕುಮಾರ, ಚಂದಾನಿಂಗಾ, ಕನಕಗಿರಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ಅಮರೇಶ ಕುಳಗಿ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.