ಹೆತ್ತವರೇ ನಿಜವಾದ ಹೀರೋಗಳು
Team Udayavani, Jan 21, 2019, 10:24 AM IST
ಕನಕಗಿರಿ: ಸಿನಿಮಾ ರಂಗದ ಹೀರೋಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬಾರದು. ನಮಗೆ ಜನ್ಮ ನೀಡಿ, ಜೀವನ ರೂಪಿಸಿದ ನಮ್ಮ ತಂದೆ-ತಾಯಿಗಳೇ ನಮ್ಮಗೆ ನಿಜವಾದ ಹೀರೋಗಳು ಮತ್ತು ಆದರ್ಶ ವ್ಯಕ್ತಿಗಳು ಎಂದು ಹಿರೇಹಡಗಲಿ ಹಾಲಸ್ವಾಮೀಜಿ ಸಂಸ್ಥಾನಮಠ ಪೀಠಾಧಿಪತಿ ಅಭಿವನ ಹಾಲವೀರಾಪ್ಪಜ್ಜ ಸ್ವಾಮಿ ಹೇಳಿದರು.
ಪಟ್ಟಣದ ಕಲ್ಮಠದ ಹತ್ತಿರ ಯುವಕರು ರವಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಬರೀ ಭಾಷಣವನ್ನು ಮತ್ತು ಉಪದೇಶವನ್ನು ಮಾಡಲಿಲ್ಲ. ಅದರ ಜೊತೆ ರಾಷ್ಟ್ರದ ಸೇವೆಯನ್ನು ಮಾಡಿದರು. ರಾಷ್ಟ್ರದ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಸ್ವಾಮಿ ವಿವೇಕಾನಂದರ ಒಳಗೆ ಸಂತ ಜೊತೆಗೆ ಅವರೊಳಗೆ ಒಬ್ಬ ವಿಜ್ಞಾನಿ ಇದ್ದನು. ಯುವ ಮನಸ್ಸುಗಳಿಗೆ ಇಡೀ ಜಗತ್ತನೇ ಗೆಲ್ಲುವ ಸಾಮರ್ಥ್ಯವಿದೆ. ದೇಶ ಕಾಯುವ ಸೈನಿಕರು ದೇಶ ಅಭಿಮಾನವಿದೆ. ಅವರನ್ನು ನಾವು ಮಾದರಿಯಾಗಿ ನೋಡಬೇಕು. ದೇಶಕ್ಕಾಗಿ ಪ್ರಾಣವನ್ನೇ ಬಿಟ್ಟ ಹನುಮಂತಪ್ಪ ಕೊಪ್ಪದ್ ಉತ್ತರ ಕರ್ನಾಟಕದವರು ಎಂಬುವುದು ನಮ್ಮ ಹೆಮ್ಮೆ. ವಿವೇಕಾನಂದ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಒಂದು ವೇದಿಕೆಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರತಿ ಮನೆಯಲ್ಲಿ ಅವರ ಜಯಂತಿಯನ್ನು ಆಚರಿಸಬೇಕು. ಯುವಕರಿಗೆ ಸೇವಾ ಮನೋಭಾವನೆ ಇರಬೇಕು. ನಾವು ಇರುವಷ್ಟು ದಿನ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು. ಇದರಿಂದ ಜೀವನ ಸಾರ್ಥಕವಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಗವಿಸಿದ್ದಯ್ಯಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಶಾಸಕ ಬಸವರಾಜ ದಢೇಸುಗೂರು ಉದ್ಘಾಟಿಸಿದ್ದರು. ಪ್ರಾಸ್ತಾವಿಕವಾಗಿ ಸೋಮನಾಥಸ್ವಾಮಿ ಹಣವಾಣ ಮಾತನಾಡಿದರು. ಪಟ್ಟಣದ ಕಲ್ಮಠದಿಂದ ಪ್ರಾರಂಭವಾದ ಶೋಭಾಯಾತ್ರೆ ರಾಜಬೀದಿಯ ಮೂಲಕ ವಾಲ್ಮೀಕಿ ವೃತ್ತ ತಲುಪಿತು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರವಿ ಸಜ್ಜನ್, ರವಿ ಭಜಂತ್ರಿ, ಪ್ರಮುಖರಾದ ಡಾ| ದೊಡ್ಡಯ್ಯ ಅರವಟಗಿಮಠ, ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ಸಣ್ಣ ಕನಕಪ್ಪ, ಅಶ್ವಿನಿ ದೇಸಾಯಿ, ಬಿ.ವಿ. ಜೋಶಿ, ರಂಗಪ್ಪ ಕೊರಗಟಗಿ, ಮಂಜುನಾಥರೆಡ್ಡಿ ಸಿಂಧುವಾಳ, ರುದ್ರಪ್ಪ ದೇವರೆಡ್ಡಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.