ಶ್ರೀರಾಮನಿಗೆ ವಿಶ್ವಾಸ ನೀಡಿದ ಅಂಜನಾದ್ರಿ ಜಗತ್ತಿಗೆ ಪರಿಚಯವಾಗಬೇಕು: ಕಂಚಿ ಶ್ರೀ
Team Udayavani, Apr 13, 2022, 7:19 PM IST
ಗಂಗಾವತಿ: ಐತಿಹಾಸಿಕ ಪ್ರಸಿದ್ಧಿ ಪಡೆದ ಕಿಷ್ಕಿಂದಾ ಅಂಜನಾದ್ರಿ ಸೀತಾಮಾತೆ ಮತ್ತು ಶ್ರೀರಾಮಚಂದ್ರನಿಗೆ ಆಂಜನೇಯನ ಮೂಲಕ ವಿಶ್ವಾಸ ಮೂಡಿಸಿದ ಪ್ರದೇಶವಾಗಿದ್ದು ಇದನ್ನು ಇಡೀ ಜಗತ್ತಿಗೆ ಪರಿಚಯಿಸುವ ಕಾರ್ಯ ತ್ವರಿತವಾಗಿ ಆಗಬೇಕಿದೆ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಅವರು ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಂಚಿಪೀಠ ಡಾ|ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರಿಗೆ ಕಿಷ್ಕಿಂದಾ ಅಂಜನಾದ್ರಿ, ಚಿಂತಾಮಣಿ, ಹಂಪಿ ಪ್ರದೇಶದ ಬಗ್ಗೆ ಪ್ರೀತಿ ಗೌರವವನ್ನು ಇಟ್ಟುಕೊಂಡಿದ್ದರು. ಹಲವು ಭಾರಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರ ಅಯೋಧ್ಯೆಯಂತೆ ಬೆಳೆಯಬೇಕು.ಆದ್ದರಿಂದ ಕೇಂದ್ರ ರಾಜ್ಯ ಸರಕಾರ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಅಂಜನಾದ್ರಿಗೆ ಐತಿಹಾಸಿಕ ಇತಿಹಾಸವಿದ್ದು ಮೊದಲಿಗೆ ಶ್ರೀರಾಮ, ಲಕ್ಷ್ಮಣ ಋಷಿಮುಖ ಪರ್ವತ ಪ್ರದೇಶದಲ್ಲಿ ಆಂಜನೇಯನಿಗೆ ಭೇಟಿಯಾಗಿ ಕಿಷ್ಕಿಂದಾ ರಾಜ ಸುಗ್ರೀವನಿಂದ ನೆರವು ಪಡೆದು ಲಂಕಾ ಪ್ರದೇಶಕ್ಕೆ ಹನುಮಂತ ತೆರಳಿದ್ದು ಇಲ್ಲಿಂದ ಆದ್ದರಿಂದ ಕಿಷ್ಕಿಂದಾ ಅಂಜನಾದ್ರಿಯ ಇತಿಹಾಸ ಬಹಳಷ್ಟಿದೆ. ಈ ಪ್ರದೇಶವನ್ನು ಎಲ್ಲಾ ಹಿಂದೂಗಳು ನೋಡುವಂತಾಗಬೇಕು. ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ಸರಕಾರ ಅಭಿವೃದ್ಧಿ ಕಾರ್ಯ ಮಾಡಲಿ.ಯುವಜನರಿಗೆ ಧರ್ಮ ದೇವರ ಕುರಿತು ಆಸಕ್ತಿ ಮೂಡುವಂತೆ ಪಾಲಕರು ಕ್ರಮ ಶಿಕ್ಷಣ ಕಲಿಸಬೇಕು. ದೇಶದ ಧಾರ್ಮಿಕ ಕೇಂದ್ರಗಳ ಜವಾಬ್ದಾರಿಯನ್ನು ಸರಕಾರ ಜನತೆಗೆ ಬಿಡಬೇಕು. ಕಂಚಿಕಾಮಕೋಟಿ ಪೀಠದಿಂದ ಸರ್ಕ್ಯೂಟ್ ಯೋಜನೆ ರೂಪಿಸಿ ಪೂಜ್ಯ ಡಾ|ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿದ್ದ ಸ್ಥಳಗಳನ್ನು ಭಕ್ತರು ವೀಕ್ಷಣೆ ಮಾಡಲು ಯೋಜನೆ ರೂಪಿಸಲಾಗುತ್ತದೆ.
ಹೊಸಪೇಟೆಯಲ್ಲಿ ಕಂಚಿಕಾಮಕೋಟಿ ಮಠದ ವತಿಯಿಂದ ವೇದ ಸಂಸ್ಕೃತಿ ಪಾಠಶಾಲೆ ಆರಂಭ ಮಾಡಲಾಗುತ್ತದೆ. ಹಂಪಿ ಮತ್ತು ಆನೆಗೊಂದಿ ಚಿಂತಾಮಣಿ ಮಠಗಳನ್ನು ಸಹ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತದೆ. ಗಂಗಾವತಿಯಲ್ಲಿ ಮಾಜಿ ಸಂಸದ ಎಚ್.ಜಿ.ರಾಮುಲು ಆಹ್ವಾನದ ಮೇರೆಗೆ ಆಗಮಿಸಿ ಲೋಕಕಲ್ಯಾಣಕ್ಕಾಗಿ ಶ್ರೀಚಂದ್ರಮೌಳೇಶ್ವರ ತ್ರಿಕಾಲ ಪೂಜೆ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್.ಜಿ.ರಾಮುಲು, ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿಗಳಾದ ಎಚ್.ಆರ್.ಶ್ರೀನಾಥ, ಕರಿಯಣ್ಣ, ಬಿಜೆಪಿ ಮುಖಂಡ ಎಚ್.ಆರ್.ಚನ್ನಕೇಶವ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.