![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 3, 2023, 2:42 PM IST
ಕುಷ್ಟಗಿ: ಜ.6 ರಿಂದ ಜರಗುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಇಲಕಲ್ ಬೈಕ್ ಸಾಹಸಿ ವೀರಣ್ಣ ಕುಂದರಗಿಮಠ ಅವರು, ಕನ್ನಡ ನಾಡು ನುಡಿ ಜಾಗೃತಿಗಾಗಿ ಮತ್ತೊಮ್ಮೆ ಬೈಕ್ ಸಾಹಸಕ್ಕೆ ಮುಂದಾಗಿದ್ದಾರೆ.
ಹ್ಯಾಂಡಲ್ ಇಲ್ಲದ ಬೈಕಿನಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನನದಿಂದ ಹಾವೇರಿಗೆ 360 ಕಿ.ಮೀ. ಬೈಕ್ ಸಾಹಸ ಹಮ್ಮಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 7-30 ಕ್ಕೆ ಬೈಕ್ ಸಾಹಸ ಆರಂಭಿಸಿರುವ ಅವರು, ಭಾಗಲಕೋಟೆ, ಶಿರೂರು, ಕಮತಗಿ, ಅಮೀನಗಡ, ರಕ್ಕಸಗಿ, ಹುನಗುಂದ ತನ್ನ ತವರು ಇಲಕಲ್, ಕೊಡಗಲಿ, ಕ್ಯಾದಿಗುಪ್ಪ, ಕುಷ್ಟಗಿ, ಬಂಡಿಕ್ರಾಸ್, ಗಜೇಂದ್ರಗಡ, ನೆರೆಗಲ್ ಬೆಟಗೇರಿ, ಗದಗ, ಹುಬ್ಬಳ್ಳಿ, (ಚನ್ನಮ್ಮ ಸರ್ಕಲ್, ಬಂಕಾಪುರ ಚೌಕ್, ಗಬ್ಬೂರ ಬೈಪಾಸ್ ಬಸವೇಶ್ವರ ಸರ್ಕಲ್ ಪಿ ಬಿ, ರೋಡ್ ಹೈವೇ ಮುಖಾಂತರ ) ಶಿಗ್ಗಾವಿ, ಹಾನಗಲ್, ಹಾವೇರಿ ವರೆಗೆ ಬಸ್ ಸ್ಟ್ಯಾಂಡ್ ರೋಡ್ ಆರ್, ಟಿ,ಓ ಕಚೇರಿ ಮುಖಾಂತರ ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ಜನೆವರಿ 6,7,8 ರಂದು ನೆಡೆಯುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳದವರೆಗೂ ಸಂಚರಿಸುವರು.
ಮಂಗಳವಾರ ಇಲಕಲ್ ಮೂಲಕ 12ಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬೈಕ್ ಸಾಹಸ ಕುಷ್ಟಗಿ ಕಸಾಪದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಈ ಹಿಂದೆ ವೀರಣ್ಣ ಕುಂದರಗಿಮಠ ಅವರು, 2014ರಲ್ಲಿ ಕೈ ಕಾಲು ಕಟ್ಟಿಕೊಂಡು ಕಾರ ಓಡಿಸಿದ್ದರು. ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಬೆಂಗಳೂರು -ವಿದಾನಸೌಧ – ದೆಹಲಿ ವರೆಗೆ ಒಟ್ಟು 1365 ಕಿ.ಮೀ 48 ಗಂಟೆಗಲ್ಲಿ ಕ್ರಮಿಸಿದ್ದರು. 2015ರಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಬೆಂಗಳೂರು ವಿಧಾನಸೌದವರೆಗೆ ಹ್ಯಾಂಡಲ್ ಇಲ್ಲದ ಬೈಕ್ 500 ಕಿ.ಮಿ ಓಡಿಸಿದ್ದರು.
ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ದಾರವಾಡವರೆಗೆ ಇದೀಗ ಏಲಕ್ಕಿ ನಾಡು ಹಾವೇರಿಯ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿ ಜಾಗೃತಿಗಾಗಿ ಈ ಸಾಹಸಕ್ಕೆ ವೀರಣ್ಣ ಕುಂದರಗಿಮಠ ಮುಂದಾಗಿದ್ದಾರೆ.
ಈ ಬೈಕನ್ನು ತಾಳ್ಮೆ, ತಾಂತ್ರಿಕ, ಬ್ಯಾಲೆನ್ಸ್ ಮೂಲಕ ಚಲಾಯಿಸುತ್ತಿರುವೆ ಎಂದ ಅವರು, ವಿಜಯಪುರ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲವಾಗಿರುವುದು ದುಃಖಕರ ಸಂಗತಿಯಾಗಿದ್ದು ಅವರ ಸ್ಮರಣೆಗಾಗಿ ನಿರಹಾರವಾಗಿ ಬೈಕ್ಚಲಾಯಿಸುತ್ತಿರುವೆ ಎಂದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.