ಕನ್ನಡ ರಾಜ್ಯೋತ್ಸವ: ಗಮನ ಸೆಳೆದ ಲಂಬಾಣಿ ನೃತ್ಯ
Team Udayavani, Nov 1, 2022, 2:57 PM IST
ಕನಕಗಿರಿ: ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು, ಕನ್ನಡ ಉಳಿಸಿ ಬೆಳೆಸಲು ಕನ್ನಡ ಮನಸ್ಸುಗಳ ಅವಶ್ಯಕತೆ ಇದೆ. ರಾಜ್ಯೋತ್ಸವಕ್ಕೆ ಮಾತ್ರ ಸಿಮೀತವಾಗದ ಕನ್ನಡ ಭಾಷೆ. ಸದಾ ನಮ್ಮ ಜೀವನದುದ್ದಕ್ಕೂ ಬಳಸಿ ಬೆಳೆಸುವ ಭಾಷೆಯಾಗಬೇಕು. ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆಯಿರಲಿ. ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯನ್ನು ಎಂದೆದಿಂಗೂ ಮರೆಯದಿರೋಣ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ತಾಪ ಇಒ ಚಂದ್ರಶೇಖರ ಕಂದಕೂರು ಮಾತನಾಡಿ, ಸಂಸ್ಕೃತ ಭಾಷೆ ಹೊರತುಪಡಿಸಿದರೆ ಪ್ರಾಚೀನ ಕಾಲದ ಅತಿ ಶ್ರೀಮಂತ ಭಾಷೆ ಎಂದರೆ ಅದು ಕನ್ನಡ. ಇತರೆ ಭಾಷೆಗಳಿಗೆ ಗೌರವ ನೀಡೋಣ ಕನ್ನಡ ಭಾಷೆಗೆ ಅಭಿಮಾನ ವ್ಯಕ್ತಪಡಿಸೋಣ ಎಂದು ಹೇಳಿದರು.
ಸ್ತಭ್ದ ಚಿತ್ರ ಮೆರವಣಿಗೆ : ಇಲ್ಲಿನ ಶ್ರೀಚನ್ನಮಲ್ಲ ರುದ್ರ ಸ್ವಾಮಿ ಮುಂಬಾಗದಿಂದ ಆರಂಭವಾದ ಸ್ತಭ್ದ ಚಿತ್ರ ಮೆರವಣಿಗೆ ರಾಜಾಬೀದಿ ಮುಖಾಂತರ ಶ್ರೀ ಕನಕಾವಲ ಪತಿ ದೇವಸ್ಥಾನ ಬಂದು ತಲುಪಿತು. ಮೆರವಣಿಗೆಯಲ್ಲಿ ವಿವಿಧ ಶಾಲೆಗಳಾದ ಆದರ್ಶ ವಿದ್ಯಾಲಯ, ದ್ಯಾಮವ್ವನಗುಡಿ, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಶಿವರುದ್ರಮುನಿ ಪ್ರೌಡ ಶಾಲಾ ವಿಧ್ಯಾರ್ಥಿಗಳಿಂದ ದೇಶದ ಸ್ವಾತಂತ್ರ್ಯ ಹೋರಾಟಗಾರರ, ಭುವನೇಶ್ವರಿ ದೇವಿ, ಓನಕೆ ಒಬ್ಬವ್ವ ಸೇರಿದಂತೆ ವಿವಿಧ ವೇಷಗಳನ್ನು ಧರಿಸಿ ಅಭಿಮಾನವನ್ನು ವ್ಯಕ್ತಪಡಿಸಿದರು.
ಗಮನ ಸೆಳೆದ ಲಂಬಾಣಿ ನೃತ್ಯ :
ಸ್ತಭ್ದ ಚಿತ್ರ ಮೆರವಣಿಗೆಯಲ್ಲಿ ಇಲ್ಲಿನ ಸರ್ಕಾರಿ ಪ್ರೌಡ ಶಾಲಾ ವಿದ್ಯಾರ್ಥಿನಿಯರು ಲಂಬಾಣಿ ವೇಷ ಧರಿಸಿ ಲಂಬಾಣಿ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು. ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ಕಸಾಪ ತಾಲೂಕು ಅಧ್ಯಕ್ಷ ಮೆಹಬೂಬ ಹುಸೇನ, ಕರವೆ ಪದಾಧಿಕಾರಿ ಅನಿಲ್ ಬಿಜ್ಜಳ, ಶರಣಪ್ಪ ಪಲ್ಲವಿ, ಪ.ಪಂ. ಸದಸ್ಯರಾದ ಶೇಷಪ್ಪ ಪೂಜಾರ, ರಾಜಾಸಾಬ ನಂದಾಪುರ ಸೇರಿದಂತೆ ಹಲವಾರು ಯುವಕರು ಹೆಜ್ಜೆ ಹಾಕಿದರು.
ಈ ವೇಳೆಯಲ್ಲಿ ಸಿಪಿಐ ವಿ.ನಾರಾಯಣ, ಪ.ಪಂ. ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಕ್ಷಣ ಸಂಯೋಜಕ ಆಂಜನೇಯ, ಪ.ಪಂ. ಸದಸ್ಯರಾದ ಸಂಗಪ್ಪ ಸಜ್ಜನ, ಕಂಠೀನಾಯಕ, ಕರವೆ ಪದಾಧಿಕಾರಿಗಳಾದ ಹರೀಶ ಪೂಜಾರ, ವೀರೇಶ ಮಿಟ್ಲಕೋಡ, ಶರಣಪ್ಪ ಸಜ್ಜನ ಸೇರಿದಂತೆ ಶಾಲಾ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.