ಕಾರಟಗಿ: ತಾಮ್ರ ಶಾಸನ ಪತ್ತೆ
Team Udayavani, May 9, 2020, 7:07 AM IST
ಕಾರಟಗಿ: ಪಟ್ಟಣದ ಕಟ್ಟಿಗೆಹಳ್ಳಿ ಹಿರೇಮಠದಲ್ಲಿ ಪುರಾತನ ತಾಮ್ರದ ಶಾಸನ ಪತ್ತೆಯಾಗಿದೆ ಎಂದು ಸಾಹಿತಿ ಹಾಗೂ ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ವಿರೂ ಪಾಕ್ಷೇಶ್ವರಸ್ವಾಮಿ ತಲೇಖಾನ ಮಠ ತಿಳಿಸಿದ್ದಾರೆ.
ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ತಾಮ್ರ ಶಾಸನ ವಿಜಯನಗರ ಅರಸರ ಕಾಲದ್ದಾಗಿದೆ. ವಿಜಯನಗರ ಅರಸರು ಕಟ್ಟಿಗೆಹಳ್ಳಿ ಮಠಕ್ಕೆ ದಾನ ನೀಡಿದ ಬಗ್ಗೆ ಈ ಶಾಸನದಲ್ಲಿ ಉಲ್ಲೇಖವಿದೆ. ಈ ತಾಮ್ರ ಶಾಸನವು ಮೂರು ತಾಮ್ರ ಫಲಕಗಳನ್ನು ಒಳಗೊಂಡಿದ್ದು ಒಂದೊಂದು ಫಲಕವು 11.4 ಇಂಚು ಉದ್ದ ಹಾಗೂ 4.6 ಇಂಚು ಅಗಲ ಇವೆ. ಈ ತಾಮ್ರ ಶಾಸನ ಮೂರು ಫಲಕಗಳ ಗುಚ್ಚವನ್ನು 4 ಇಂಚು ಉದ್ದ ಹಾಗೂ 3 ಇಂಚು ಅಗಲದ ಮುದ್ರೆ ಉಂಗುರದಿಂದ ಕಟ್ಟಲಾಗಿದೆ. ಈ ತಾಮ್ರ ಶಾಸನದ ಮುದ್ರೆ ಉಂಗುರದಲ್ಲಿ ವಿಜಯ ನಗರ ಅರಸರ ರಾಜಮುದ್ರೆ ವರಹದ ಚಿತ್ರವಿದೆ. ತಾಮ್ರ ಶಾಸನ ಒಟ್ಟು 1.535 ಗ್ರಾಮ ಇದೆ. ಸಂಸ್ಕೃತ ಹಾಗೂ ದೇವನಾಗರಿ ಲಿಪಿಯನ್ನು ಬಳಸಲಾಗಿದೆ. ಒಟ್ಟು ನಾಲ್ಕು ಪುಟಗಳನ್ನು ಈ ತಾಮ್ರ ಶಾಸನವೂ ಒಳಗೊಂಡಿದ್ದು, ಒಟ್ಟು 42 ಸಾಲುಗಳ ಶಾಸನ ಇದಾಗಿದೆ. ಈ ತಾಮ್ರದ ಶಾಸನಗಳು ಪಟ್ಟಣದ ಕಟ್ಟಿಗೆಹಳ್ಳಿ ಹಿರೇಮಠದ ಸಿದ್ಧಲಿಂಗಯ್ಯ ಸ್ವಾಮಿಗಳ ಒಡೆತನದಲ್ಲಿದೆ. ಇದರ ಕುರಿತು ಹೆಚ್ಚಿನ ಅಧ್ಯನ ನಡೆಸಲಾಗುತ್ತಿದೆ ಎಂದು ಯುವ ಸಂಶೋಧಕರು ತಿಳಿಸಿದರು.
ಕಟ್ಟಿಗೆಹಳ್ಳಿ ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ, ವೀರಭದ್ರಯ್ಯಸ್ವಾಮಿ ತಲೇಖಾನಮಠ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.