ಕಾರಟಗಿ: ಸಂವಿಧಾನ ನೀಡಿದ ಕರ್ತವ್ಯ ನಿರ್ವಹಿಸೋಣ
ಮಕ್ಕಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
Team Udayavani, Aug 16, 2023, 3:37 PM IST
ಕಾರಟಗಿ: ಪಟ್ಟಣದಲ್ಲಿ ಪಪೂ ಕಾಲೇಜು ಆವರಣದ ಸಿದ್ದೇಶ್ವರ ಬಯಲು ರಂಗ ಮಂದಿರದಲ್ಲಿ ತಾಲೂಕಾಡಳಿತ, ತಾಪಂ ಮತ್ತು ಪುರಸಭೆ ಆಶ್ರಯದಲ್ಲಿ ನಡೆದ 77ನೇ ಸ್ವಾತಂತ್ರ್ಯೋ ತ್ಸವ ಅಂಗವಾಗಿ ತಹಶೀಲ್ದಾರ್ ಎಂ. ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ನಂತರ ಸ್ವಾತಂತ್ರೋತ್ಸವದ ಶುಭಾಶಯ ತಿಳಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ನೀಡಿರುವ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸೋಣ. ಹಾಗೇಯೆ ದೇಶದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಿ ದೇಶವನ್ನು ವಿಶ್ವದ ಅತ್ಯುನ್ನತ ಮಟ್ಟದಲ್ಲಿ ನಿಲ್ಲುವಂತೆ ಮಾಡಬೇಕು ಎಂದರು.
ತಾಪಂ ಇಒ ಎನ್. ನರಸಪ್ಪ ಪ್ರಾಸ್ತಾವಿಕ ಮಾತನಾಡಿ, ಸ್ವಾತಂತ್ರ್ಯೋ ತ್ಸವ ಎಂಬುವುದು ನಮ್ಮ ಹೆಮ್ಮೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಮಾಡುವುದು ನಮ್ಮ ಜವಾಬ್ದಾರಿ. ಸ್ವಾತಂತ್ರ್ಯದ ಹಾದಿ ಹೂವಿನ ಮೆತ್ತೆಯಾಗಿರಲಿಲ್ಲ. ಅದೆಷ್ಟೋ ಜನ ಮಹನೀಯರ ತ್ಯಾಗ, ಬಲಿದಾನ ಫಲವಾಗಿ ಲಭಿಸಿದ ಬಿಡುಗಡೆ ಇದು. ದೇಶವನ್ನು ಸ್ವತಂತ್ರಗೊಳಿಸಲು ಅದೆಷ್ಟೋ ಮಹನೀಯರು ತಮ್ಮ ಬದುಕನ್ನೇ ಗಂಧದಂತೆ ತೇಯಿದಿದ್ದಾರೆ. ರಕ್ತವನ್ನು ಬೆವರಿನಂತೆ ಬಸಿದಿದ್ದಾರೆ. ದೇಶಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಪ್ರಾಣವನ್ನೇ ಭಾರತ ಮಾತೆಗೆ ಅರ್ಪಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಒಂದೊಂದು ಕ್ಷಣ ನೆನಪಿಸಿಕೊಳ್ಳುವಾಗಲು ದೇಶಪ್ರೇಮದ ಕಿಚ್ಚು ನಮ್ಮಲ್ಲಿ ಅಧಿಕವಾಗುತ್ತಲೇ ಸಾಗುತ್ತದೆ. ತಮ್ಮ ಉಸಿರು ಉಸಿರಿನಲ್ಲೂ ಸ್ವಾತಂತ್ರ್ಯದ ಕಿಚ್ಚಿನೊಂದಿಗೆ ಮುನ್ನುಗಿದ ಇಂತಹ ಸಾಹಸಿಗಳ ಫಲವಾಗಿಯೇ ನಾವಿಂದು ಸ್ವಾತಂತ್ರ್ಯದ ಸವಿ ಅನುಭವಿಸುತ್ತಿದ್ದೇವೆ ಎಂದರು.
ಪ್ರಮುಖರಾದ ನ್ಯಾಯವಾದಿ ಶಿವರೆಡ್ಡಿ ನಾಯಕ, ಮುಖಂಡ ಶರಣಪ್ಪ ಪರಕಿ ಮಾತನಾಡಿದರು. ಇದಕ್ಕೂ ಮುಂಚೆ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿಪಿ.ಐ. ಸಿದ್ಧರಾಮಯ್ಯ ಬಿ.ಎಂ., ಪುರಸಭೆ ಮುಖ್ಯಾಧಿಕಾರಿ ಷಣ್ಮುಖಪ್ಪ, ಪ್ರಮುಖರಾದ ಪುರಸಭೆ ಸದಸ್ಯ ಸಂಗನಗೌಡ, ಸರಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಸರ್ದಾರ ಅಲಿ, ರೈತ ಮುಖಂಡ ಮರಿಯಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ನಾರಾಯಣ ಇಡಿಗೇರ, ಖಾಜಾಹುಸೇನ್ ಮುಲ್ಲಾ, ಜಮದಗ್ನಿ ಚೌಡ್ಗಿ, ಅಯ್ಯಪ್ಪ ಸಂಗಟಿ, ಶರಣಪ್ಪ ದಿವಟರ್, ತಾಯಪ್ಪ ಕೊಟ್ಯಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಸಾರ್ವಜನಿಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.