ಕಾತರಕಿ-ಗುಡ್ಲಾನೂರು ಹೊಸ ಜಿಪಂ ಕ್ಷೇತ್ರ
Team Udayavani, Mar 25, 2021, 8:44 PM IST
ಕೊಪ್ಪಳ: ರಾಜ್ಯ ಚುನಾವಣಾ ಆಯೋಗವು ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದೆ. ಕೊಪ್ಪಳ ತಾಲೂಕಿನಲ್ಲಿ ಹೊಸದಾಗಿ ಕಾತರಕಿ-ಗುಡ್ಲಾನೂರು ಜಿಪಂ ಕ್ಷೇತ್ರ ಉದಯವಾಗಿದ್ದರೆ, ಐದು ತಾಪಂ ಕ್ಷೇತ್ರಗಳು ರದ್ದಾಗಿವೆ.
ಸಂಸದ ಸಂಗಣ್ಣ ಕರಡಿ ಅವರ ಸ್ವಂತ ಗ್ರಾಮ ಕೂಕನಪಳ್ಳಿಯೇ ತಾಪಂ ಕ್ಷೇತ್ರವನ್ನು ಕಳೆದುಕೊಂಡಿದೆ. ಇನ್ನೇನು ಜಿಪಂ ಹಾಗೂ ತಾಪಂ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾಗಿದೆ.
ಇದಕ್ಕೂ ಮುನ್ನ ನಿಯಮಾವಳಿಯಂತೆ ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮರು ವಿಂಗಡಣೆಗೆ ಮುಂದಾಗಿದ್ದು, ಕೊಪ್ಪಳ ತಾಲೂಕಿನಲ್ಲಿ ಹಲವು ಬದಲಾವಣೆ ನಡೆದಿವೆ. ಈ ಮೊದಲು ಕೊಪ್ಪಳ ತಾಲೂಕಿನಲ್ಲಿ 8 ಜಿಪಂ ಕ್ಷೇತ್ರ, 29 ತಾಪಂ ಕ್ಷೇತ್ರಗಳಿದ್ದವು. ಆದರೆ ಮರು ವಿಂಗಡಣೆ ವೇಳೆ ತಾಲೂಕಿನ ತುಂಗಭದ್ರಾ ನದಿ ತಟದಲ್ಲಿರುವ ಕಾತರಕಿ-ಗುಡ್ಲಾನೂರು ಜಿಪಂ ಕ್ಷೇತ್ರವಾಗಿ ರಚನೆಯಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ಆದರೆ ಬೆಟಗೇರಿ ಗ್ರಾಮದ ಜನತೆಯು ನಮ್ಮ ಗ್ರಾಮವು ಮೊದಲು ಬೆಟಗೇರಿ ತಾಪಂ ಕ್ಷೇತ್ರವಾಗಿತ್ತು. ನಾವು ಹೊಸ ಜಿಪಂ ಕ್ಷೇತ್ರವಾಗಿ ಮೇಲ್ದರ್ಜೆಗೇರಲಿದೆ ಎಂಬ ನಿರೀಕ್ಷೆ ಹೊಂದಿದ್ದೆವು. ಹೆಚ್ಚಿನ ಜನಸಂಖ್ಯೆಯನ್ನು ಒಳಗೊಂಡಿದೆ.
ಹೊಸ ಜಿಪಂ ಕ್ಷೇತ್ರದ ಎಲ್ಲ ಅರ್ಹತೆ ಹೊಂದಿದೆ. ಎಲ್ಲ ಹಳ್ಳಿಗಳಿಗೂ ಮಧ್ಯದಲ್ಲಿ ಬೆಟಗೇರಿ ಗ್ರಾಮವಿದೆ. ಅದನ್ನು ಹೊಸ ಜಿಪಂ ಕ್ಷೇತ್ರ ಮಾಡಿ ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಕಾತರಕಿ-ಗುಡ್ಲಾನೂರು ಗ್ರಾಮದ ಜನತೆ ತಮ್ಮೂರು ಹೊಸದಾಗಿ ಜಿಪಂ ಕ್ಷೇತ್ರವಾಗಿದೆ ಎನ್ನುವ ಮಾಹಿತಿ ಆಧಾರದಲ್ಲಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಕಾತರಕಿ-ಗುಡ್ಲಾನೂರು ಜಿಪಂ ಕ್ಷೇತ್ರವನ್ನು ಘೋಷಣೆ ಮಾಡಬಹುದು. ಇಲ್ಲವೇ ಬೇರೆ ಗ್ರಾಮ ಆಯ್ಕೆ ಮಾಡಿ ಹೊಸ ಜಿಪಂ ಕ್ಷೇತ್ರವಾಗಿ ಬದಲಾವಣೆ ಮಾಡಬಹುದು. ಆಯೋಗಕ್ಕೆ ಈ ಅಧಿ ಕಾರವಿದೆ. ತಾಪಂ ಕ್ಷೇತ್ರ: ಕೊಪ್ಪಳ ತಾಲೂಕಿನಲ್ಲಿ ಈ ಮೊದಲು 29 ತಾಪಂ ಕ್ಷೇತ್ರಗಳಿದ್ದವು. ಆದರೆ ಕ್ಷೇತ್ರ ಮರು ವಿಂಗಡಣೆ ವೇಳೆ 24ಕ್ಕೆ ತಾಪಂ ಕ್ಷೇತ್ರ ಕುಸಿತ ಕಂಡಿವೆ.
ಈ ಪೈಕಿ ಬೆಟಗೇರಿ, ಕಾತರಕಿ-ಗುಡ್ಲಾನೂರು, ಹುಲಿಗಿ, ಕೂಕನಪಳ್ಳಿ, ಬಹದ್ದೂರಬಂಡಿ ಗ್ರಾಮಗಳು ಮೊದಲಿದ್ದ ತಾಪಂ ಕ್ಷೇತ್ರವನ್ನು ಕಳೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಹುಲಿಗಿ ಗ್ರಾಮವು ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿಯೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಆದರೆ ಈ ಬಾರಿ ಹುಲಿಗಿ ಗ್ರಾಮವು ತಾಪಂ ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ರದ್ದಾದ ತಾಪಂ ಕ್ಷೇತ್ರಗಳ ಹಳ್ಳಿಗಳನ್ನು ಅಕ್ಕಪಕ್ಕದ ತಾಪಂ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದೆ. ಸಂಸದರ ಸ್ವ ಗ್ರಾಮ ಕೂಕನಪಳ್ಳಿ ಕ್ಷೇತ್ರ ರದ್ದು: ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ಕ್ಷೇತ್ರದಲ್ಲಿ 30 ವರ್ಷದಿಂದ ರಾಜಕೀಯದಲ್ಲಿದ್ದಾರೆ. ತಾಲೂಕಿನ ಕೂಕನಪಳ್ಳಿಯೇ ಅವರ ಸ್ವಂತ ಗ್ರಾಮವಾಗಿದ್ದು, ಆ ಗ್ರಾಮವೇ ಇಂದು ತಾಪಂ ಕ್ಷೇತ್ರ ಕಳೆದುಕೊಂಡಿದೆ. ಇನ್ನೂ ಹೋರಾಟಕ್ಕೆ ಹೆಸರಾದ ತಾಲೂಕಿನ ಬೆಟಗೇರಿ ಗ್ರಾಮ ತಾಪಂ ಕ್ಷೇತ್ರವನ್ನು ಕಳೆದುಕೊಂಡಿದೆ.
ಸಂಸದರಿಗೆ ಬೆಟಗೇರಿ ಭಾಗ ಹಲವು ಬಾರಿ ಕೈ ಹಿಡಿದಿದೆ. ಆದರೆ ಅದೂ ಈ ಬಾರಿ ಕ್ಷೇತ್ರ ಕಳೆದುಕೊಂಡಿದ್ದು, ಹಲವು ಚರ್ಚೆಗಳಿಗೆ ಎಡೆಮಾಡಿ ಕೊಟ್ಟಿದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿದ್ದು, ತಾಪಂ ಕ್ಷೇತ್ರಗಳ ಸಂಖ್ಯೆಯು ಇಳಿಕೆಯಾಗಿದೆ. ಏರಿಳಿತದ ಅಂಕಿ-ಅಂಶದಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ ಕ್ಷೇತ್ರಗಳ ಹೆಸರು ಬದಲಾದರೂ ಅಚ್ಚರಿಪಡಬೇಕಿಲ್ಲ. ಹೆಸರು ಬದಲಾವಣೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪರಮಾಧಿ ಕಾರ ಇರುವ ಹಿನ್ನೆಲೆಯಲ್ಲಿ ಜನಸಂಖ್ಯೆ ಸೇರಿ ವಿವಿಧ ಆಯಾಮದಲ್ಲಿ ಲೆಕ್ಕಾಚಾರ ಹಾಕಿ ಕ್ಷೇತ್ರಗಳ ಹೆಸರು ಬದಲು ಮಾಡಿದರೂ ಅಚ್ಚರಿಪಡಬೇಕಿಲ್ಲ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.