ಕೊಪ್ಪಳ: ಸಾಹಿತ್ಯ ಕ್ಷೇತ್ರಕ್ಕೆ ಡಾ|ಪಂಚಾಕ್ಷರಿ ಕೊಡುಗೆ ಅಪಾರ
Team Udayavani, Jan 8, 2024, 5:23 PM IST
ಉದಯವಾಣಿ ಸಮಾಚಾರ
ಕೊಪ್ಪಳ: ಡಾ| ಪಂಚಾಕ್ಷರಿ ಹಿರೇಮಠ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಅನೇಕ ಕೃತಿ ನೀಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಪ್ಪಳ ತಹಶೀಲ್ದಾರ್ ವಿಠಲ್ ಚೌಗಲೆ ಹೇಳಿದರು.
ಬಿಸರಹಳ್ಳಿ ಗ್ರಾಮದ ನೃಪತುಂಗ ಪ್ರೌಢಶಾಲೆಯಲ್ಲಿ ನಡೆದ ಡಾ| ಪಂಚಾಕ್ಷರಿ ಹಿರೇಮಠ ಅವರ 91ನೇ ಜನ್ಮ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದ ಇತಿಹಾಸ ತಿಳಿಯಲು ಅನೇಕ ಆಧಾರಗಳಿಗೆ ಸಾಹಿತ್ಯವೇ ಮೂಲವಾಗಿದೆ. ಇಂತಹ ಸಾಹಿತ್ಯ ಆಧಾರದ ವೃದ್ಧಿಗಾಗಿ ಅನೇಕ ಕವಿಗಳು, ಸಾಹಿತಿಗಳು ತಮ್ಮದೇಯಾದ ಕೊಡುಗೆ ನೀಡುವ ಮೂಲಕ ಅದರ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಹಿರಿಯ ಸಾಹಿತಿ ಡಿ.ಎಂ. ಬಡಿಗೇರ ಮಾತನಾಡಿ, ಬಿಸರಹಳ್ಳಿ ಗ್ರಾಮ ನಾಡಿನಲ್ಲಿ ಅತ್ಯಂತ ವಿಭಿನ್ನ ಗ್ರಾಮ. ರಾಜ್ಯದಲ್ಲೇ ಅತೀ
ಹೆಚ್ಚು ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಳ್ಳಿ. ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಈ ಹಳ್ಳಿ ಹೆಸರು ಮಾಡದೇ ಹೋರಾಟದಲ್ಲಿಯೂ ಕೊಡುಗೆ ನೀಡಿದೆ. ಡಾ| ಪಂಚಾಕ್ಷರಿ ಹಿರೇಮಠ ಹಳ್ಳಿಯಲ್ಲಿ ಜನಿಸಿ ಇಡೀ ಪ್ರಪಂಚಕ್ಕೆ ಈ ಹಳ್ಳಿಯ
ಹಿರಿಮೆ ಪರಿಚಯ ಮಾಡಿಕೊಟ್ಟಿದ್ದಾರೆ. ಅವರು ಯಾವುದೇ ಪ್ರಚಾರಪ್ರಿಯರಾಗಿರಲಿಲ್ಲ.
ತಮ್ಮ ಕಾರ್ಯ ಶ್ರದ್ಧೆಯಿಂದ ನಿರ್ವಹಿಸಿದ್ದ ಪರಿಣಾಮವಾಗಿ ಅವರನ್ನು ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಇವರ ಸಾಹಿತ್ಯದ ಬರಹ ಬದುಕಿಗೆ ಸಂಬಂಧಿಸಿದ್ದಾಗಿತ್ತು. ಅನೇಕ ಕೃತಿ ರಚಿಸಿದರೂ ಅವರಿಗೆ ಯಾವುದೇ ಅಹಂ ಇರಲಿಲ್ಲ. ಅತ್ಯಂತ ಸರಳ ಜೀವನ ನಡೆಸುವ ಮೂಲಕ ಇಂದಿನ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಡಾ| ಪಂಚಾಕ್ಷರಿ ಹಿರೇಮಠ ಸಾಹಿತ್ಯ ಬರವಣಿಗೆ ಬಹಳ ಸರಳ ಹಾಗೂ ಎಲ್ಲರಿಗೂ ಬಹು ಬೇಗನೆ ಅರ್ಥವಾಗುವ ರೀತಿಯಲ್ಲಿರುತ್ತವೆ. ಪ್ರಸ್ತುತ ದಿನಗಳಲ್ಲಿ ಆದ ಬದಲಾವಣೆಗಳಿಂದ ಸಾಹಿತ್ಯ
ಪುಸ್ತಕ ಅಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಯಾರು ಹೆಚ್ಚು ಪುಸ್ತಕ ಅಧ್ಯಯನ ಮಾಡುತ್ತಾರೆಯೋ ಅವರು ಹೆಚ್ಚು
ಜ್ಞಾನವಂತರಾಗುತ್ತಾರೆ ಎಂದರು.
ಮೃತ್ಯುಂಜಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಬಿಸರಹಳ್ಳಿ ಗ್ರಾಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ ಅಧ್ಯಕ್ಷತೆ
ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಾನಪದ ವಿದ್ವಾಂಸ ಮಲ್ಲಯ್ಯ ತೋಟಗಂಟಿ, ಗ್ರಾಪಂ ಉಪಾಧ್ಯಕ್ಷ ಸುಶೀಲವ್ವ ಕೊಪ್ಪಳ, ಶಾಲೆ ಮುಖ್ಯೋಪಾಧ್ಯಾಯ ಬಸವರಾಜ ಸಂಶಿ, ಪಾರ್ವತಮ್ಮ ಹಿರೇಮಠ, ಅಂದಯ್ಯ ಬೃಹನ್ಮಠ, ಶಾಂತವೀರಯ್ಯ ಹಿರೇಮಠ ಸೇರಿದಂತೆ ಇತರರಿದ್ದರು. ನಿವೃತ್ತ ಶಿಕ್ಷಕ ಲಿಂಗಯ್ನಾ ಹಿರೇಮಠ ನಿರೂಪಿಸಿದರು. ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರು. ಹನುಮಂತಪ್ಪ ಚಲವಾದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.