ಹೂವಿನ ದರ ಕುಸಿತ; ತೋಟಕ್ಕೆ ಕುರಿ ಬಿಟ್ಟ ರೈತ
| ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟ | ಒಂದು ಎಕರೆಯಲ್ಲಿ ಗಲಾಟೆ ಹೂವು ಬೆಳೆದಿದ್ದ ಬಹದ್ದೂಬಂಡಿ ಪಾಯಣ್ಣ
Team Udayavani, Apr 20, 2021, 8:30 PM IST
ಕೊಪ್ಪಳ: ಕೋವಿಡ್ ಆರ್ಭಟ, ನೀರಿನ ಕೊರತೆಯ ಮಧ್ಯೆಯೂ ಬೇಸಿಗೆಯಲ್ಲಿ ಕಷ್ಟಪಟ್ಟು ಹೂವು ಬೆಳೆದಿದ್ದ ರೈತನೋರ್ವ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕುರಿ ಹಿಂಡು ಬಿಟ್ಟು ಹೂವು ಮೇಯಿಸಿದ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಬಹದ್ದೂಬಂಡಿಯ ಪಾಯಣ್ಣ ಎಂಬ ರೈತನೇ ವೇದನೆಯಿಂದಲೇ ಹುಲುಸಾಗಿ ಬೆಳೆದ ಹೂವಿನ ಹೊಲಕ್ಕೆ ಕುರಿ ಬಿಟ್ಟು ಮೇಯಿಸಿದ ವ್ಯಕ್ತಿ. ಹಲವು ಸಂಕಷ್ಟಗಳ ಮಧ್ಯೆಯೂ ರೈತನು ಹೂವು ಬೆಳೆದಿದ್ದಾನೆ. ಒಂದೆಡೆ ನೀರಿನ ಕೊರತೆಯಾದರೆ, ಇನ್ನೊಂದೆಡೆ ರೋಗ ಬಾಧೆಯು ರೈತರನ್ನು ಕಾಡುತ್ತಿರುತ್ತವೆ. ಈ ಮಧ್ಯೆಯೂ ರೈತರು ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಹದ್ದೂರಬಂಡಿ ಗ್ರಾಮದ ರೈತ ಪಾಯಣ್ಣ ಒಂದು ಎಕರೆಯಲ್ಲಿ ಗಲಾಟೆ ಹೂವಿನ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಮಾರುಕಟ್ಟೆಯಲ್ಲಿ ಹೂವಿಗೆ ಕೆಜಿಗೆ 20 ರೂ. ಮಾತ್ರ ಇದೆ. ಈ ದರಕ್ಕೆ ಮಾರಾಟ ಮಾಡಿದರೆ ಹೂವು ಕಟಾವು ಮಾಡಿದ ಕೂಲಿಯು ಕೊಡಲು ಕಷ್ಟವಾಗುತ್ತಿದೆ. ಪಾಯಣ್ಣ ಅವರು 40 ಸಾವಿರ ರೂ. ವ್ಯಯಿಸಿದ್ದು ಹೂ ಕಟಾವು ಮಾಡಿದಷ್ಟು ಸಹ ಆದಾಯ ಬರುತ್ತಿಲ್ಲ. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಗಲಾಟೆ ಹೂವಿನದರ ಕುಸಿತವಾಗಿದೆ. ಇದರಿಂದಾಗಿ ನಾವು ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.
ಇದು ಕೇವಲ ಹೂವಿನ ರೈತನದ್ದಷ್ಟೆ ಸಮಸ್ಯೆಯಲ್ಲ. ಟೊಮ್ಯಾಟೊ, ಬಾಳೆ ಸೇರಿದಂತೆ ಹಲವು ತರಕಾರಿ ಬೆಳೆಗಳ ಬೆಲೆಯೂ ಕುಸಿತ ಕಂಡಿದೆ. ಈಗ ಕೋವಿಡ್ ಆರ್ಭಟಕ್ಕೆ ಸಭೆ, ಸಮಾರಂಭಗಳಿಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಹೂವುಗಳ ಮಾರಾಟ ಸಂಪೂರ್ಣ ನೆಲಕಚ್ಚಿ ರೈತ ಸಂಕಷ್ಟ ಎದುರಿಸುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.