ಕೊಪ್ಪಳ ಜಿಲ್ಲಾಸ್ಪತ್ರೆಗೆ ರಾಜ್ಯದಲ್ಲಿ 2ನೇ ರ್‍ಯಾಂಕ್
ಕೇಂದ್ರ ಸರ್ಕಾರದ ಸರ್ವೇಯಲ್ಲಿ ಜಿಲ್ಲೆಗೆ ಅಗ್ರಸ್ಥಾನ,ರೋಗಿಗಳ ಚಿಕಿತ್ಸೆ, ಯೋಗ ಕ್ಷೇಮದ ಸರ್ವೇ ಕಾರ್ಯ
Team Udayavani, Feb 28, 2021, 4:48 PM IST
ಕೊಪ್ಪಳ: ಕೇಂದ್ರ ಸರ್ಕಾರದ ಮೇರಾ ಆಸ್ಪತಾಲ್‌ನಡಿ ಪ್ರತಿ ತಿಂಗಳು ವಿವಿಧ ರಾಜ್ಯಗಳಜಿಲ್ಲೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರೋಗಿಗಳಯೋಗಕ್ಷೇಮ, ಚಿಕಿತ್ಸೆಯ ವಿಧಾನದ ಕುರಿತುನಡೆಸುವ ಸರ್ವೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯುಜನವರಿ ತಿಂಗಳಲ್ಲಿ ಶೇ. 94ರಷ್ಟು ಅಂಕಪಡೆಯುವ ಮೂಲಕ ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದು ಗಮನ ಸೆಳೆದಿದೆ.
ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆದೊರೆಯಬೇಕು. ವೈದ್ಯರು ಹಾಗೂ ಆಸ್ಪತ್ರೆಯಸಿಬ್ಬಂದಿ ರೋಗಿಗಳಿಗೆ ಹೇಗೆಲ್ಲಾ ಚಿಕಿತ್ಸೆನೀಡಲಿದ್ದಾರೆ, ಔಷಧ ನೀಡಲಿದ್ದಾರೆ. ಊಟಹಾಗೂ ಉಪಚಾರ ಮಾಡುವ ಕುರಿತಂತೆನಿಗಾ ಇರಿಸಲು ಕೇಂದ್ರ ಸರ್ಕಾರವು ಮೇರಾಆಸ್ಪತಾಲ್‌ನಡಿ ಪ್ರತಿ ತಿಂಗಳು ದೇಶಾದ್ಯಂತ ಎಲ್ಲರಾಜ್ಯಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಕಾರ್ಯ ವೈಖರಿ ಸಮೀಕ್ಷೆ ಮಾಡುತ್ತದೆ. ಈ ಸಮೀಕ್ಷೆಯಲ್ಲಿಕೊಪ್ಪಳ ಜಿಲ್ಲಾಸ್ಪತ್ರೆಯು ಗಮನ ಸೆಳೆದಿದೆ.ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆಪಡೆಯಲು ಆಗಮಿಸಿದಾಗ ಆಸ್ಪತ್ರೆಯ ಒಪಿಡಿ ವಿಭಾಗದಲ್ಲಿ ನೋಂದಣಿ ಮಾಡುವ ಪ್ರಕ್ರಿಯೆಯಿದೆ.
ನೋಂದಣಿಯಲ್ಲಿ ರೋಗಿಗಳು ಮೊಬೈಲ್ ನಂಬರ್ ನೀಡಿರುತ್ತಾರೆ. ಆ ಆಧಾರದಲ್ಲಿ ದೆಹಲಿಯ ಮೇರಾ ಆಸ್ಪತಾಲ್‌ನಡಿ ಸಹಾಯವಾಣಿಯ ಮೂಲಕ ಆಯ್ದ ರೋಗಿಗಳಿಗೆ ಕರೆ ಮಾಡಿ ಸಹಾಯವಾಣಿ ಸಿಬ್ಬಂದಿ ತಂಡವು ರೋಗಿಗಳಿಂದ ಆಸ್ಪತ್ರೆಯಲ್ಲಿ ನಿಮಗೆ ಸಿಕ್ಕ ಚಿಕಿತ್ಸೆ ಹೇಗಿದೆ? ಅಲ್ಲಿ ಏನಾದರೂ ತೊಂದರೆ ಅನುಭವಿಸಿದ್ದೀರಾ? ವೈದ್ಯರ ಚಿಕಿತ್ಸಾ ವಿಧಾನ ಹೇಗಿತ್ತು? ಆಸ್ಪತ್ರೆಯಲ್ಲಿ ಊಟ,ಉಪಚಾರವು ಹೇಗಿತ್ತು? ನಿಮಗೆ ಚಿಕಿತ್ಸೆತೃಪ್ತಿ ತಂದಿದೆಯೇ? ಎನ್ನುವ ವಿಷಯದಕುರಿತು ರೋಗಿಗಳಿಂದಲೇ ಮಾಹಿತಿ ಪಡೆದು ಅದಕ್ಕೆ ಆಸ್ಪತ್ರೆಗೆ ರ್‍ಯಾಂಕಿಗ್ ನೀಡುತ್ತಾರೆ. ಈ ಆಧಾರದಲ್ಲಿಯೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ಈ ಬಾರಿ ಶೇ. 100ಕ್ಕೆ 94 ಅಂಕ ಬಂದು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯು ಶೇ. 100ರಷ್ಟು ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಯಾದಗಿರಿ 90 ಅಂಕ ಪಡೆದು 3ನೇ ಸ್ಥಾನದಲ್ಲಿದೆ.
ಕೊಪ್ಪಳ ಜಿಲ್ಲಾಸ್ಪತ್ರೆಯು ರೋಗಿಗಳಿಗೆ ನೀಡಿದ ಚಿಕಿತ್ಸಾ ವಿಧಾನ, ಉಪಚಾರ ಸೇರಿದಂತೆ ಔಷಧ ಗಳ ವಿತರಣೆಯ ಕುರಿತಂತೆ ದೆಹಲಿಯ ಮೇರಾ ಆಸ್ಪತಾಲ್ ನಡೆಸಿದ ಸರ್ವೇಯಲ್ಲಿ ನಮ್ಮ ಆಸ್ಪತ್ರೆಯು ಜನವರಿ ತಿಂಗಳಲ್ಲಿ 94 ಅಂಕ ಪಡೆದು ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಇದು ಖುಷಿಯ ವಿಚಾರ.-ಡಾ| ಎಸ್.ಬಿ. ದಾನರಡ್ಡಿ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.