ಕೊಪ್ಪಳ: ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ- ಮಾರುತಿ
Team Udayavani, Feb 2, 2024, 3:46 PM IST
ಉದಯವಾಣಿ ಸಮಾಚಾರ
ಕೊಪ್ಪಳ: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಅಂತಹ ಮಹತ್ತರ ಪಾತ್ರ ನಿರ್ವಹಿಸಿದ ಮುದ್ದಪ್ಪ ಬೇವಿನಹಳ್ಳಿ ಅವರಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ
ಎಂದು ಎಸ್‌ಡಿಎಂಸಿ ಮಾರುತಿ ಸಿಂದೋಗಿ ಹೇಳಿದರು.
ಬೇವಿನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು. ಬೇವಿನಹಳ್ಳಿ ಸರಕಾರಿ ಶಾಲೆಯಲ್ಲಿ 2005-2022ರ ವರಗೆ 17 ವರ್ಷ ಕಿರ್ಲೊಸ್ಕರ ಕಂಪನಿ ವತಿಯಿಂದ ಶಿಕ್ಷಕನಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಇತ್ತೀಚೆಗೆ ಸ್ವಯಂ ನಿವೃತ್ತಿ ಘೋಷಿಸಿದ ಶಿಕ್ಷಕ ಮುದ್ದಪ್ಪ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸುವ ಹಳೆ ವಿದ್ಯಾರ್ಥಿಗಳ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಶಿಕ್ಷಕ ಮುದ್ದಪ್ಪ ಬೇವಿನಹಳ್ಳಿ ಮಾತನಾಡಿ, ನನ್ನ ಜೀವನದಲ್ಲಿ ನೂರಕ್ಕೂ ಅಧಿಕ ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಆದರೆ
ಸುತ್ತೂರ ಹತ್ತಾರು ಸನ್ಮಾನಕ್ಕಿಂತ ಹೆತ್ತೂರ ಈ ಸನ್ಮಾನ ನಿಜಕ್ಕೂ ನನ್ನ ಜೀವನದ ಸ್ಮರಣೀಯ ಗಳಿಗೆ. 17 ವರ್ಷ ಈ ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಿಕೊಟ್ಟ ಗ್ರಾಮದ ಎಲ್ಲ ಗಣ್ಯರಿಗೆ ಹಾಗೂ ಕಾರ್ಖಾನೆ ಆಡಳಿತ ಮಂಡಳಿಗೆ ಧನ್ಯವಾದ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ, ಶಿಕ್ಷಕರಾದ ಬೆಟದಪ್ಪ ಸಾಹುಕಾರ್, ಅರುಣ್‌ಕುಮಾರ್, ರೇಖಾ ಬೆದವಟ್ಟಿ, ಕವಿತಾ ಪೂಜಾರ್, ಹಳೆ ವಿದ್ಯಾರ್ಥಿಗಳಾದ ಗುಡುದಪ್ಪ ರಾಂಪುರ, ಸಂತೋಷ ಕುರಿ, ದೇವೇಂದ್ರ ಜಿ, ನಿಂಗಜ್ಜ ಕರೆಕುರಿ, ಹಾಲೇಶ್ ಬೆಟಗೇರಿ, ಪ್ರಕಾಶ್ ಲಿಂಗದಳ್ಳಿ, ಯಮನೂರ ಮಡಿವಾಳ, ಮಂಜುನಾಥ್ ಬಂಗಾಳಿ, ಶಶಿ ಕೊರಗಲ್, ಯಶೋದಾ ಬೂದಗುಂಪ,
ಮಂಜುಳಾ ಮೂಲಿಮನಿ, ರಂಜಿತಾಗೌಡರ, ಹುಲಿಗೆಮ್ಮ ಜಕಾತಿ, ಚನ್ನಯ್ಯ, ಗವಿಸಿದ್ದಯ್ಯ ಸೇರಿ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.