ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ


Team Udayavani, Nov 12, 2024, 6:04 PM IST

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಉದಯವಾಣಿ ಸಮಾಚಾರ
ಕೊಪ್ಪಳ: ತಾಲೂಕಿನಲ್ಲಿ ಕಳೆದ ತಿಂಗಳ ಹಿಂದಷ್ಟೇ ಸುರಿದ ಮಳೆಯಿಂದ ನಗರ ಸೇರಿ ಗ್ರಾಮೀಣ ಭಾಗದ ಬಹುಪಾಲು ರಸ್ತೆಗಳು ಹಾಳಾಗಿ ಹೋಗಿವೆ. ಜನತೆ ಜೀವದ ಹಂಗು ತೊರೆದು ನಿತ್ಯ ಪ್ರಯಾಣಿಸುವಂತಹ ಪರಿಸ್ಥಿತಿ ಎದುರಾಗಿದೆ. ಜನರ ಕಣ್ಣಲ್ಲಿ ರಸ್ತೆಗಳಲ್ಲಿ ನಿತ್ಯ ನರಕ ದರ್ಶನವೇ ಕಾಣಿಸುತ್ತಿದೆ.

ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ-ಅಳವಂಡಿ ರಸ್ತೆ, ಹಲಗೇರಿ-ಹಿರೇ ಸಿಂದೋಗಿ ರಸ್ತೆ, ಕೊಪ್ಪಳ-ಕಿನ್ನಾಳ ರಸ್ತೆ,
ಗಿಣಗೇರಿ-ಬಗನಾಳ ರಸ್ತೆ ಹೀಗೆ ಹಲವಾರು ರಸ್ತೆಗಳು ಹದಗೆಟ್ಟು ಹಳ್ಳ ಹಿಡಿದಿವೆ. ರಸ್ತೆಗಳ ಅದ್ವಾನ ಸ್ಥಿತಿ ನೋಡಿದ ಜನತೆ ಏನಪ್ಪಾ ಇದು ಎಂಥಾ ಪರಿಸ್ಥಿತಿ ಬಂತು ನಮಗೆ ಎಂದು ವೇದನೆ ಪಡುವಂತಾಗಿದೆ.

ಕೊಪ್ಪಳ ಯಲಬುರ್ಗಾ ತಾಲೂಕಿನಲ್ಲಿ ರಸ್ತೆಗಳು ಅಷ್ಟೊಂದು ಸುಂದರ, ಗುಣಮಟ್ಟದಿಂದ ಕೂಡಿವೆ. ಸಣ್ಣ ಸಣ್ಣ ಹಳ್ಳಿಗಳಿಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಕೊಪ್ಪಳ ತಾಲೂಕಿಗೆ ಎಂಥಾ ದುರ್ಗತಿ ಬಂದಿದೆ ಎಂದು ಜನತೆ ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ-ಅಳವಂಡಿ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮುಂಡರಗಿ ಭಾಗಕ್ಕೆ ತೆರಳುವ ಬಸ್‌ಗಳು ಇದೇ ರಸ್ತೆ ಮೂಲಕವೇ ಸಂಚರಿಸಬೇಕಿದೆ ಅಲ್ಲದೇ, ರೈತರು ಬೆಳೆದ ಕಬ್ಬಿನ ಟ್ರಾಕ್ಟರ್‌ ಸೇರಿ ಲಾರಿಗಳು ಈ ಮಾರ್ಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದರೆ ಅಧೋಗತಿ ಎನ್ನುವ ಸ್ಥಿತಿಗೆ ತಲುಪಿವೆ.

ಇನ್ನು ಹಿರೇ ಸಿಂದೋಗಿ-ವಾಯಾ-ಹಂದ್ರಾಳ- ಹಲಗೇರಿ ಮಾರ್ಗದ ರಸ್ತೆಯಂತೂ ಹೇಳ ತೀರದಾಗಿದೆ. ಹಿರೇ ಸಿಂದೋಗಿ-ಕೋಳೂರು ರಸ್ತೆ ಪರಿಸ್ಥಿತಿ ಗಂಭೀರವಾಗಿದೆ. ಕೊಪ್ಪಳ-ಕಿನ್ನಾಳ ರಸ್ತೆಯ ಅದ್ವಾನದ ಸ್ಥಿತಿ ನೋಡಿದ ಗ್ರಾಮದ ಯುವಕರು ಈ ಹಿಂದೆ ಗಣಪತಿ ಹಬ್ಬದ ವೇಳೆ ಡಿಜೆಗೆ ಬಳಕೆ ಮಾಡುವ ಹಣದಲ್ಲಿಯೇ ರಸ್ತೆಗೆ ಮರಂ ಹಾಕಿ ಸಮತಟ್ಟು ಮಾಡಿ ಜನಸಂಚಾರಕ್ಕೆ ಅವಕಾಶ ಮಾಡಿದ್ದರು. ಇದನ್ನು ಗಮನಿಸಿದ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಅವರು ಗ್ರಾಮದ ಯುವಕರನ್ನು ಸನ್ಮಾನಿಸಿದ್ದರಲ್ಲದೇ ಕಿನ್ನಾಳ ಗ್ರಾಮ ದತ್ತು ಪಡೆವ ಸಂಕಲ್ಪ ಮಾಡಿದ್ದರು. ಇಷ್ಟಾದರೂ ಜನಪ್ರತಿನಿ  ಧಿಗಳು ಎಚ್ಚೆತ್ತುಕೊಂಡಿಲ್ಲ.

ಕೇವಲ ಈ ರಸ್ತೆಗಳು ಮಾತ್ರವಲ್ಲ ಗ್ರಾಮೀಣ ಭಾಗದ ಬಹುಪಾಲು ರಸ್ತೆಗಳು ಹಾಳಾಗಿ ಹೋಗಿವೆ. ಹಲವು ಪ್ರಯಾಣಿಕರು ನಿತ್ಯವೂ ತಗ್ಗು ದಿನ್ನೆಗಳು ಇರುವ ರಸ್ತೆಗಳಲ್ಲಿ ಜೀವಭಯದಲ್ಲೇ ಸಂಚರಿಸುವ ಸ್ಥಿತಿ ಬಂದೊದಗಿದೆ. ಅದೆಷ್ಟೋ ಜನರು ಹದಗೆಟ್ಟ ರಸ್ತೆಗಳಲ್ಲಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ನಿದರ್ಶನಗಳು ನಡೆದಿವೆ.

ಹೊದ್ದು ಮಲಗಿದ ಪಿಡಬ್ಯ್ಲೂಡಿ: ತಾಲೂಕಿನ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳ ನಿರ್ಮಾಣದ ಹೊಣೆ ಪಿಡಬ್ಯ್ಲೂಡಿ ಅವರದ್ದಾಗಿದೆ. ಪಿಆರ್‌ಇಡಿ ಅವರು ಕೇವಲ ದುರಸ್ತಿ ಕಾರ್ಯ ಮಾತ್ರ ನಡೆಸುತ್ತಾರೆ. ಆದರೆ ಈ ಎಲ್ಲ ಅಧಿಕಾರಿಗಳು ರಸ್ತೆಗಳ ಜವಬ್ದಾರಿ ಹೊತ್ತಿದ್ದರೂ ಹೊದ್ದು ಮಲಗಿದ್ದಾರೆ. ಇವರಿಗೆ ಗ್ರಾಮಗಳ ರಸ್ತೆಗಳ ಬಗ್ಗೆ ಕಿಂಚಿತ್‌ ಕಾಳಜಿ ಇಲ್ಲ. ಇಲ್ಲಿ ಯಾರಿಗೆ ಯಾರ ಭಯವೂ ಇಲ್ಲದಂತಾದ ಪರಿಣಾಮ ಕೊಪ್ಪಳದ ರಸ್ತೆಗಳು ನರಕಕ್ಕೆ ದಾರಿಗಳು ಎಂದೆನ್ನುವ ಸ್ಥಿತಿಗೆ ಬಂದೊದಗಿದೆ.

ರಸ್ತೆಗಳ ಬಗ್ಗೆ ಸಿಎಂಗೂ ಪ್ರಶ್ನೆ: ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರೂ ಅವರು ಬರಿ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲಿದ್ದೇವೆ ಎಂದೆನ್ನುವ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಆದರೆ ಮಾತಿಗೆ ತಕ್ಕಂತೆ ಕೃತಿ ಕೆಲಸ ಮಾಡುತ್ತಿಲ್ಲ. ಈಚೆಗೆ ಕವಲೂರು ಗ್ರಾಮದ ಜನರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಜನ ಸಂಚಾರಕ್ಕೆ ರಸ್ತೆ ಹದಗೆಟ್ಟಿದೆ ದುರಸ್ತಿ
ಮಾಡಿ ಕೊಡಿ ಎಂದು ಪ್ರತಿಭಟನೆ ನಡೆಸಿದರೆ, ಅಲ್ಲಿನ 14 ಜನರ ಮೇಲೆ ಪ್ರಕರಣ ದಾಖಲಾದ ನಿದರ್ಶನವೂ ಇದೆ. ಕೊಪ್ಪಳದ ಪರಿಸ್ಥಿತಿ ಎಲ್ಲಿಗೆ ಬಂತು ಎಂದು ಜನರೇ ಜನಪ್ರತಿನಿಧಿಗಳು, ಅಧಿಕಾರಿಗಳ ವೈಖರಿ ಬಗ್ಗೆ ಆಕ್ರೋಶದ ಮಾತು ವ್ಯಕ್ತಪಡಿಸುವ ಸಂದರ್ಭ ಎದುರಾಗಿವೆ.

ತಾಲೂಕಿನ ಅಳವಂಡಿ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ಈ ರಸ್ತೆ ನಿರ್ಮಿಸುವೆವು ಎಂದು ಭಾಷಣ ಮಾಡುತ್ತಾರೆ. ಆದರೆ ಕಾಮಗಾರಿ ಆರಂಭ ಮಾಡುತ್ತಿಲ್ಲ. ನಾವೇ ಜೀವ ಕೈಯಲ್ಲಿಡಿದು ಸಂಚರಿಸುವ ಸ್ಥಿತಿ ಬಂದಿದೆ. ಯಾರೂ ಹೇಳೋರಿಲ್ಲ.. ಕೇಳೋರಿಲ್ಲ ಎನ್ನುವ ಪರಿಸ್ಥಿತಿ ಬಂದಿದೆ.
*ಸಂಗಮೇಶ ಅಳವಂಡಿ, ಗ್ರಾಮಸ್ಥ

ಕೊಪ್ಪಳ-ಕಿನ್ನಾಳ ರಸ್ತೆ ಬಗ್ಗೆ ಹಲವು ಬಾರಿ ಹೋರಾಟ ಮಾಡಿದೆ. ನಾವೇ ರಸ್ತೆಗೆ ಮರಂ ಹಾಕಿ ದುರಸ್ತಿ ಮಾಡಿದ್ದೇವೆ. ಆದರೂ
ನಮ್ಮೂರು ರಸ್ತೆಯ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ರಸ್ತೆ ನಿರ್ಮಿಸುವೆವು ಎಂದು ಕುಂಟು ನೆಪ ಹೇಳುತ್ತಲೇ ಇದ್ದಾರೆ. ಆದರೆ ರಸ್ತೆ ನಿರ್ಮಾಣ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಮೌನೇಶ ಕಿನ್ನಾಳ, ಗ್ರಾಮದ ಯುವಕ

*ದತ್ತು ಕಮ್ಮಾರ

ಟಾಪ್ ನ್ಯೂಸ್

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Mandya-VC

Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ

1-budget

Stupid self-confidence: ಲೋಕಸಭೆ ಭಾಷಣದ ಬಗ್ಗೆ ರಾಹುಲ್ ವಿರುದ್ಧ ನಿರ್ಮಲಾ ವಾಗ್ದಾಳಿ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Udupi: ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

Gudibande-Suside

Gudibande: ಮೈಕ್ರೋ ಫೈನಾನ್ಸ್ ಹಾವಳಿ; ಸಾಲದ ಸುಳಿಗೆ ಸಿಲುಕಿ ಕೂಲಿ ಕಾರ್ಮಿಕ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

de

Gangavathi: ಅಂಜನಾದ್ರಿ ಬೆಟ್ಟ ಏರುವಾಗ ಯುವಕನಿಗೆ ಹೃದಯಾಘಾತ!

Koppala: ಮಾಜಿ ಶಾಸಕ ಬಸವರಾಜ ದಡೆಸಗೂರಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ

Koppala: ಮಾಜಿ ಶಾಸಕ ಬಸವರಾಜ ದಡೆಸಗೂರಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ

1-wewqewq

Congress ತೋರಿಸಿ ರೆಡ್ಡಿ ಮತ್ತು ಶ್ರೀರಾಮುಲು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ: ಸಚಿವ ಜಮೀರ್

ಪದ್ಮಶ್ರೀ ಪ್ರಶಸ್ತಿಗೆ ಬಾಜನರಾದ ಭೀಮಮ್ಮ ಶಿಳ್ಳಿಕ್ಯಾತರವರಿಗೆ ಜಿಲ್ಲಾಡಳಿತದಿಂದ ಸನ್ಮಾನ

ಪದ್ಮಶ್ರೀ ಪ್ರಶಸ್ತಿಗೆ ಬಾಜನರಾದ ಭೀಮಮ್ಮ ಶಿಳ್ಳಿಕ್ಯಾತರವರಿಗೆ ಜಿಲ್ಲಾಡಳಿತದಿಂದ ಸನ್ಮಾನ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

1-naga

Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು

office- bank

Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ

ARMY (2)

Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ

Mandya-VC

Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.