ಮಂಗಳಮುಖೀಯರಿಂದ ರಾಕಿ ಕಟ್ಟಿ ಜಾಗೃತಿ
Team Udayavani, Apr 7, 2020, 6:11 PM IST
ಕೊಪ್ಪಳ: ನಗರದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಮಂಗಳಮುಖೀಯರು ಹಣೆಗೆ ಕುಂಕುಮ ಹಚ್ಚಿ, ರಕ್ಷಾ ಬಂಧನ ಕಟ್ಟುವ ಮೂಲಕ ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್ ಹೊಡೆದೋಡಿಸಿ ಅಣ್ಣಂದಿರಾ ಎಂದು ಜಾಗೃತಿ ಮೂಡಿಸಿದರು.
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಜನರು ಬೈಕ್‌ಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಪೊಲೀಸರು ಹಲವು ಬಾರಿ ಎಚ್ಚರಿಸಿ ಬೇಸತ್ತಿದ್ದಾರೆ. ಕೆಲವು ಬಾರಿ
ಲಾಠಿ ರುಚಿ ತೋರಿಸಿದ್ದಾರೆ. ಇಷ್ಟಾದರೂ ಜನರು ಸಂಚಾರ ಮಾಡುವುದನ್ನು ಬಿಡುತ್ತಿಲ್ಲ. ಕೆಲವು ದಿನಗಳ ಹಿಂದೆ ಪೊಲೀಸರೇ ಜನರಿಗೆ ಕುಂಕುಮ ಹಚ್ಚಿ, ಮಂಗಳಾರತಿ ಮಾಡಿದ್ದರು. ಇನ್ನು ಜನರಿಗೆ ಈಡುಗಾಯಿ ದೃಷ್ಟಿ ತೆಗೆದು ಮನೆಯಲ್ಲಿಯೇ ಇರಿ, ರಸ್ತೆಗೆ ಇಳಿಯಬೇಡಿ ಎಂದು ಮನವಿ ಮಾಡಿದ್ದರು.
ಇಷ್ಟಾದರೂ ಜನರ ಸಂಚಾರ ಮಾತ್ರ ನಿಂತಿಲ್ಲ. ಸೋಮವಾರ ಇದನ್ನರಿತ ಮಂಗಳ ಮುಖೀಯರು
ಕೆಲ ಸ್ವಯಂಸೇವಕರ ಜೊತೆಗೆ ರಸ್ತೆಗಿಳಿದು ಬೈಕ್ ಸವಾರರನ್ನು ತಡೆದು ರಕ್ಷಾ ಬಂಧನ ಕಟ್ಟಿ ದಯವಿಟ್ಟು ಮನೆಯಲ್ಲಿಯೇ ಇರಿ ಅಣ್ಣಂದಿರಾ..ಕೊರೊನಾ ಸೋಂಕು ದೂರ ಮಾಡಬೇಕೆಂದರೆ
ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿದರು. ಇದರಿಂದ ಮುಜುಗುರಕ್ಕೊಳಗಾದ ಬೈಕ್ ಸವಾರರು ರಸ್ತೆಗಿಳಿಯುವುದಿಲ್ಲ ಎಂದು ಹೇಳಿ ಮುಂದೆ ಸಾಗಿದರು. ಇನ್ನೂ ಡಿಸಿ ಸುನೀಲ್ ಕುಮಾರ ಅವರೇ ಸೋಮವಾರ ರಸ್ತೆಗಳಿದು ವಿವಿಧೆಡೆ ಚೆಕ್‌ಪೋಸ್ಟ್ ತಪಾಸಣೆ ನಡೆಸಿದರಲ್ಲದೇ, ರಸ್ತೆಯಲ್ಲಿ ಅನಗತ್ಯ ಸುತ್ತಾಟ ನಡೆಸುವವರನ್ನು ತರಾಟೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.