ಸೋಂಕು ತಡೆಗೆ ಅವಿರತ ಶ್ರಮ: ಕೊಪ್ಪಳ ಡಿಸಿ ಸುನೀಲ ಕುಮಾರ್ ಕೆಲಸಕ್ಕೆ ಪಕ್ಷಾತೀತ ಪ್ರಶಂಸೆ
Team Udayavani, Apr 12, 2020, 10:42 AM IST
ಗಂಗಾವತಿ: ಕೋವಿಡ್-19 ವೈರಸ್ ತಡೆಗೆ ಕೊಪ್ಪಳ ಜಿಲ್ಲೆಯಲ್ಲಿ ತನ್ನ ಅಧಿಕಾರಿ ವರ್ಗದೊಂದಿಗೆ ಯಶಸ್ವಿಯಾಗಿ ಕೆಲಸ ಮಾಡಿದ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಶ್ಲಾಘನೆ ವ್ಯಕ್ತವಾಗಿದೆ.
ಸಾವಿರಾರು ವಾಟ್ಸಪ್ ಫೇಸ್ ಬುಕ್ ಬಳಕೆದಾರರು ತಮ್ಮ ಖಾತೆಗೆ ಸುನೀಲಕುಮಾರ ಅವರ ಫೋಟೊ ಡಿಪಿ ಇಟ್ಟುಕೊಂಡು ಜಿಲ್ಲಾಡಳಿತದ ಕಾರ್ಯವನ್ನು ಮನತುಂಬಿ ಹೊಗಳುತ್ತಿದ್ದಾರೆ.
ದೇಶದಲ್ಲಿ ಕೋವಿಡ್-19 ರೋಗ ಹರಡುತ್ತಿದ್ದು ಇದನ್ನು ತಡೆಯಲು ಜಿಲ್ಲಾಡಳಿತ ಹಗಲುರಾತ್ರಿ ಕಾರ್ಯ ಮಾಡುತ್ತಿದೆ. ದೇಶ ವಿದೇಶಗಳಿಂದ ಆಗಮಿಸಿದ ಜನರನ್ನು ಆಶಾ ಅಂಗನವಾಡಿ, ಆರೋಗ್ಯ ಇಲಾಖೆ ಮತ್ತು ನಗರಸಭೆ ಗ್ರಾ.ಪಂ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಪತ್ತೆಹಚ್ಚಿ ಮನೆ ಮತ್ತು ಆಸ್ಪತ್ರೆಗಳಲ್ಲಿ ನಿಗಾದಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಕರ್ಪ್ಯೂ ಜಾರಿಯಾದಾಗಿನಿಂದ ಬಡವರು ಕೂಲಿಕಾರ್ಮಿಕರಿಗೆ ದಸವ ಧಾನ್ಯ ಶೇ.80 ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ದೂರವಾಣಿ ಮತ್ತು ವಾಟ್ಸಪ್ ಫೇಸ್ಬುಕ್ ನಲ್ಲಿ ಜನರು ತಮ್ಮ ಸಮಸ್ಯೆ ಹೇಳಿದ ತಕ್ಷಣ ಜಿಲ್ಲಾಧಿಕಾರಿ ಸುನೀಲಕುಮಾರ ನೆರವಿಗೆ ಬರುತ್ತಾರೆ. ಪತ್ರಿಕೆ ಟಿವಿ ಮಾಧ್ಯಮದಲ್ಲಿ ಕೋವಿಡ್-19 ಮತ್ತು ಇದರಿಂದಾಗಿರುವ ಸಮಸ್ಯೆ ಕುರಿತ ವರದಿಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಈ ಎಲ್ಲಾ ಕಾರಣಕ್ಕಾಗಿ ಜಿಲ್ಲೆಯ ಜನರು ಪಕ್ಷಾತೀತ ಜಾತ್ಯಾತೀತವಾಗಿ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಜಿಲ್ಲಾಧಿಕಾರಿಗಳನ್ನು ವಿನಾಕಾರಣ ತರಾಟೆಗೆ ತೆಗೆದುಕೊಂಡಿದ್ದಾಗ, ಬಿಜೆಪಿ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ಜರುಗಿದೆ.
ಕೋವಿಡ್-19 ಸೋಂಕು ಜಿಲ್ಲೆಗೆ ಬಾರದಂತೆ ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದ್ದು ಈಗಾಗಲೇ ಜಿಲ್ಲಾಧಿಕಾರಿಗಳ ಪೊಟೊ ಬಳಸಿ ವಿಡಿಯೋ ಕೂಡಾ ವೈರಲ್ ಅಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.