ಕೋರ್ಸ್ ಪುನಃ ಆರಂಭಿಸಲು ಒತ್ತಾಯ
Team Udayavani, Oct 14, 2021, 3:44 PM IST
ಕೊಪ್ಪಳ: ನಗರದ ಸ್ನಾತಕೋತ್ತರಕೇಂದ್ರದಲ್ಲಿ ಎಂ.ಎ. ಪತ್ರಿಕೋದ್ಯಮ,ಎಂ.ಎ. ಕನ್ನಡ, ಎಂಎಸ್‌ಡಬ್ಲೂ ಕೋರ್ಸ್‌ಗಳನ್ನು ಮುಂದುವರಿಸಬೇಕುಎಂದು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾಸಮಿತಿಯು ನಗರದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರ ಮೂಲಕ ವಿವಿಉಪಕುಪತಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ 2021-22ರ ಶೈಕ್ಷಣಿಕ ಅವ ಧಿಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆಅರ್ಜಿಗಳನ್ನು ಆಹ್ವಾನ ಮಾಡಿದ್ದು,ವಿಶ್ವವಿದ್ಯಾಲಯ ವ್ಯಾಪ್ತಿಯ ನಗರದಸ್ನಾತಕೋತ್ತರ ಕೇಂದ್ರದಲ್ಲಿ ಈವರೆಗೂಇದ್ದ ಎಂಎ, ಪತ್ರಿಕೋದ್ಯಮ, ಎಂಎಕನ್ನಡ, ಎಂಎಸ್‌ಡಬ್ಲೂ, ಕೋರ್ಸ್ ಈಶೈಕ್ಷಣಿಕ ವರ್ಷದಿಂದ ಪ್ರವೇಶಾತಿಯಲ್ಲಿಕೈ ಬಿಟ್ಟಿದೆ.
ಈ ಭಾಗದ ಅನೇಕವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆತೊಂದರೆಯಾಗುತ್ತದೆ. ಕೊಪ್ಪಳ ಕೇಂದ್ರಬಿಟ್ಟು ಬೇರೆ ಕಡೆ ಹೋಗಿ ಕಲಿಯಲುವಿದ್ಯಾರ್ಥಿಗಳಿಗೆ ಊಟ, ವಸತಿ, ಆರ್ಥಿಕ ತೊಂದರೆಯಾಗುತ್ತದೆ.
ಆದ್ದರಿಂದಕೈ ಬಿಟ್ಟ ಕೋರ್ಸ್ ಪುನಃ ಸೇರ್ಪಡೆಮಾಡಿ ಮುಂದುವರಿಸಬೇಕೆಂದುಭಾರತ ವಿದ್ಯಾರ್ಥಿ ಫೆಡರೇಷನ್‌ಮನವಿ ಸಲ್ಲಿಸಿದೆ. ಎಸ್‌ಎಫ್‌ಐರಾಜ್ಯಾಧ್ಯಕ್ಷ ಅಮರೇಶ ಕಡಗದ, ಜಿಲ್ಲಾಕಾರ್ಯದರ್ಶಿ ಸಿದ್ದಪ್ಪ, ಪ್ರಮುಖರಾದರವಿಚಂದ್ರ, ಮಾರುತಿ, ಹುಸೇನ್‌ಸಾಬ್,ಗಂಗಣ್ಣ, ಅಮರೇಶ ಚಳ್ಳಾರಿ, ರವಿಚಂದ್ರದದೆಗಲ್, ಮಲ್ಲಯ್ಯ, ಶರಣಪ್ಪ,ಯಮನೂರಪ್ಪ, ಹೊನ್ನೇಶ, ಅಂಬಣ್ಣ,ಬಸವರಾಜ, ಶಿವಮ್ಮ, ಶಾವಂತ್ರಿ, ಗೀತಾಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.