ಪ್ರವಾಸೋದ್ಯಮ ಪ್ರೋತ್ಸಾಹಿಸುವಲ್ಲಿ ಜಿಲ್ಲಾಡಳಿತ ವಿಫಲ!
Team Udayavani, Feb 8, 2021, 7:45 PM IST
ಗಂಗಾವತಿ: ಇತಿಹಾಸ ಪ್ರಸಿದ್ಧ ಆನೆಗೊಂದಿ, ಕಿಷ್ಕಿಂದಾ, ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಪ್ರವಾಸೋದ್ಯಮ ಇಲಾಖೆ ರಾಜ್ಯ ಮತ್ತು ಅಂತರಾಜ್ಯದ ಜನರಿಗೆ ಇಲ್ಲಿಯ ಪ್ರದೇಶವನ್ನು ಪರಿಚಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಂಪಿ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿರೂಪಾಪೂರಗಡ್ಡಿಯಲ್ಲಿದ್ದ ರೆಸಾರ್ಟ್‌ಗಳನ್ನು ತೆರವುಗೊಳಿಸಿದ ನಂತರ ಇಲ್ಲಿಯ ಜನರಿಗೆ ಮತ್ತು ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ಆನೆಗೊಂದಿ ಹಳೆ ಮಂಡಲ ಪ್ರದೇಶದ ಗ್ರಾಮಗಳ ಯುವಕರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರಿಗೆ ಕೆಲಸವಿಲ್ಲದೇ ಪರಿತಪಿಸುವಂತಹ ಸ್ಥಿತಿಯುಂಟಾಗಿದೆ. ಕೆಲವರು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ನಿರ್ಮಿಸಿಕೊಂಡಿರುವ ರೆಸಾರ್ಟ್ ಮತ್ತು ಹೋಟೆಲ್‌ಗಳನ್ನು ಪುನಃ ನೆಲಸಮಗೊಳಿಸಲು ಸಿದ್ಧತೆ ನಡೆಯುತ್ತಿದೆ. ಪುನಃ ಆಶ್ರಯ ಕಲ್ಪಿಸಿಕೊಂಡವರನ್ನು ಒಕ್ಕಲೆಬ್ಬಿಸಲು ಹೊಸಪೇಟೆಯ ಹೋಟೆಲ್ ಲಾಬಿ ಕಾಣದಂತೆ ಕಾರ್ಯ ಮಾಡುತ್ತಿರುವ ಕುರಿತು ಸ್ಥಳೀಯರಿಂದ ಆರೋಪಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ :ಗದ್ದಲದ ನಡುವೆಯೂ ವಿಧಾನಪರಿಷತ್ ನಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ
ಪ್ರಮುಖ ತಾಣಗಳು: ವಿರೂಪಾಪೂರ ಗಡ್ಡಿಯಲ್ಲಿ ರೆಸಾರ್ಟ್ ಗಳು ಇದ್ದ ಸಂದರ್ಭದಲ್ಲಿ ದೇಶ, ವಿದೇಶದ ಪ್ರವಾಸಿಗರು ಇಲ್ಲಿಯ ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು ಎಂಬ ಆರೋಪ ವ್ಯಾಪಕ ವಾಗಿತ್ತು. ಪೊಲೀಸ್, ಕಂದಾಯ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾ ಧಿಕಾರದವರು ಹಲವು ಬಾರಿ ದಾಳಿ ನಡೆಸಿ ಅಕ್ರಮ ಮದ್ಯ, ಗಾಂಜಾ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇಲ್ಲಿ ರೆಸಾರ್ಟ್ ತೆರವು ಮಾಡಿದ ನಂತರ ಒಂದು ವರ್ಷಗಳ ಕಾಲ ಸ್ಥಳೀಯರು ಯಾವುದೇ ಕೆಲಸವಿಲ್ಲದೇ ಸಂಕಷ್ಟ ಅನುಭವಿಸಿದ್ದರು. ಇದೀಗ ಆನೆಗೊಂದಿ, ಹನುಮನಹಳ್ಳಿ, ಸಾಣಾಪೂರ ಸೇರಿ ತುಂಗಭದ್ರಾ ನದಿ ಪಾತ್ರದ ಗದ್ದೆಗಳನ್ನು ಲೀಜ್‌ಗೆ ಪಡೆದು ನೈಸರ್ಗಿಕವಾಗಿ ಸಣ್ಣ ಸಣ್ಣ ಹೋಟೆಲ್ ನಿರ್ಮಿಸಿಕೊಂಡು ಆನ್‌ಲೈನ್ ಮೂಲಕ ಪ್ರವಾಸಿಗರು ಬುಕ್ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಈ ಮಧ್ಯೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಹೋಟೆಲ್ ಮಾಲೀಕರನ್ನು ಪುನಃ ಒಕ್ಕಲೆಬ್ಬಿಸಲು ಪ್ರಯತ್ನ ನಡೆದಿದೆ.
ಸಂಕಷ್ಟದಲ್ಲಿ ಸ್ಥಳೀಯರು: ಇಲ್ಲಿಯ ಹೋಟೆಲ್, ರೆಸಾಟ್ ìಗಳಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ತಮ್ಮ ಅಗತ್ಯಗಳಿಗೆ ಮಂಜುನಾಥ ಗುಂಪು, ಮಹಿಳಾ ಸ್ವಸಹಾಯ ಗುಂಪು ಮತ್ತು ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡು ನಿತ್ಯ ಹಣ ಪಾವತಿ ಮಾಡುತ್ತಿದ್ದಾರೆ. ಈಗ ಏಕಾಏಕಿ ಹೋಟೆಲ್ ತೆರವು ಮಾಡಿದರೆ ಇಲ್ಲಿ ಕೆಲಸ ಮಾಡುವವರು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೀಡಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.