ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೆರಗು
Team Udayavani, Jan 27, 2019, 11:40 AM IST
ಕೊಪ್ಪಳ: ಜಿಲ್ಲಾದ್ಯಂತ ವಿವಿಧ ಶಾಲಾ ಹಾಗೂ ಕಾಲೇಜು ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ಸಂಭ್ರಮದಿಂದ 70ನೇ ಗಣರಾಜ್ಯೊತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆದವು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರಗು ತಂದವು. ಗಣ್ಯರು ಗಣರಾಜ್ಯೋತ್ಸವದ ಮೆಲುಕು ಹಾಕಿದರು.
ಜಿಲ್ಲಾಧಿಕಾರಿ ಕಚೇರಿ: ಗಣರಾಜ್ಯೋತ್ಸವ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಡಿಸಿ ಪಿ. ಸುನೀಲಕುಮಾರ ಅವರು ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿದರು. ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ, ಎಡಿಸಿ ಸಿ.ಡಿ. ಗೀತಾ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗವಿಸಿದ್ದೇಶ್ವರ ಕಾಲೇಜು: ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಸಂಸ್ಥೆ ಪ್ರಾಚಾರ್ಯ ವಿಜಯಕುಮಾರ ಪಲ್ಲೇದ ಮಾತನಾಡಿದರು. ಆನಂದರಾವ್ ದೇಸಾಯಿ, ಆರ್.ಎಂ. ಅಂಗಡಿ, ವೀರೇಶ ವಿ., ಗಂಗಾಧರ ಸೊಪ್ಪಿಮಠ, ಶೈಲಜಾ ಅರಳಲೇಮಠ, ಶರಣಯ್ಯ, ದೇವೇಂದ್ರ, ದೇವರಾಜ ಪಾಲ್ಗೊಂಡಿದ್ದರು.
ಮಹಿಳಾ ಪದವಿ ಕಾಲೇಜು: ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗಣರಾಜ್ಯೋತ್ಸ ಆಚರಿಸಲಾಯಿತು. ಪ್ರಾಂಶುಪಾಲ ಡಾ| ಗಣಪತಿ ಕೆ. ಲಮಾಣಿ ಧ್ವಜಾರೋಹಣ ನೆರವೇರಿಸಿದರು. ದೈಹಿಕ ಶಿಕ್ಷಣ ಬೋಧಕ ಪ್ರದೀಪಕುಮಾರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದ ಶಾಲೆ: ನಗರದ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹತ್ತಿ ಧ್ವಜಾರೋಹಣ ನೆರವೇರಿಸಿದರು. ಶ್ರೀನಿವಾಸ ಗುಪ್ತಾ, ಮಾರುತಿರಾವ್ ಭೋಸ್ಲೆ, ಬಸವರಾಜ ಬಳ್ಳೊಳ್ಳಿ, ಮಲ್ಲಿಕಾರ್ಜುನ ಬಳ್ಳೊಳ್ಳಿ, ಮಹೇಶ ಮಿಟ್ಟಲಕೋಡ, ಸುರೇಶ ಸಂಚೇಟಿ, ಶಾಂತಣ್ಣ ಮುದಗಲ್, ಪರಮೇಶ್ವರಪ್ಪ ಕೊಪ್ಪಳ, ವೆಂಕಟೇಶ ಶಾನಬಾಗ್, ನಂದಕಿಶೋರ ಸುರಾಣಾ ಪಾಲ್ಗೊಂಡಿದ್ದರು.
ಕಿಮ್ಸ್: ನಗರದ ಮೆಡಿಕಲ್ ಕಾಲೇಜಿನಲ್ಲಿ ಗಣರಾಜ್ಯೊತ್ಸವ ಆಚರಿಸಲಾಯಿತು. ಕಿಮ್ಸ್ ನಿರ್ದೇಶಕ ಡಾ| ಡಿ.ಡಿ. ಬಂಟ್ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಡಾ| ವಿಜಯನಾಥ ಇಟಗಿ, ಕಿಮ್ಸ್ ಆಡಳಿತಾಧಿಕಾರಿ ಸಂತೋಷಕುಮಾರ ಎಸ್., ಪ್ರಾಧ್ಯಾಪಕ ಡಾ| ಉಮೆಶ ರಾಜೂರ, ಡಾ| ವೇಣುಗೋಪಾಲ, ಡಾ| ಗುರುರಾಜ, ಡಾ| ಮಲ್ಲಿಕಾರ್ಜುನ ಸ್ವಾಮಿ ಪಾಲ್ಗೊಂಡಿದ್ದರು.
ಜ್ಞಾನ ಬಂಧು ಶಾಲೆ: ಭಾಗ್ಯನಗರದ ಜ್ಞಾನ ಬಂಧು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ದಾನಪ್ಪ ಕವಲೂರ, ಪ್ರಾಂಶುಪಾಲ ಕೆ. ರೋಜ್ ಮೇರಿ, ಮುಖ್ಯೋಪಾಧ್ಯಾಯಿನಿ ಜ್ಯೋತಿ ಎಸ್.ಎಸ್., ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಶಿವರಾಜ ಏಣಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.
ಪದವಿ ಕಾಲೇಜು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜೋತ್ಸವ ದಿನ ಆಚರಿಲಾಯಿತು. ಪ್ರಾಂಶುಪಾಲ ಡಾ| ಸಿ.ಬಿ. ಚಿಲ್ಕರಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ| ಪ್ರಭುರಾಜ ನಾಯಕ, ದೈಹಿಕ ನಿದೇರ್ಶಕ ಶೋಭಾ ಕೆ.ಎಸ್., ಪ್ರಾಧ್ಯಾಪಕ ಡಾ| ಭಾಗ್ಯಜ್ಯೋತಿ, ನಂದಾ, ಸಂತೋಷಿಕುಮಾರಿ, ವ್ಯವಸ್ಥಾಪಕ ರಾಜಶೇಖರ, ಬಸವರಾಜ ಬೇವಿನಕಟ್ಟಿ ಪಾಲ್ಗೊಂಡಿದ್ದರು.
ಎಸ್‌ಎಫ್‌ಎಸ್: ಕೊಪ್ಪಳದ ಎಸ್.ಎಫ್.ಎಸ್ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಲೆ ಪ್ರಾಂಶುಪಾಲ ಬಿನೊಯ್ ಕುರಾಕಲಾಯಿಲ್, ಕೃಷಿ ವಿಸ್ತರಣಾ ಕೇಂದ್ರದ ಕೀಟ ತಜ್ಞ ಡಾ| ಬದರಿಪ್ರಸಾದ, ಉದ್ಯಮಿಗಳಾದ ವಿ.ಎಸ್. ಶೆಟ್ಟರ ಭಾಗವಹಿಸಿದ್ದರು.
ಗೃಹರಕ್ಷಕ ದಳ: ನಗರದ ಜಿಲ್ಲಾ ಹೋಮ್ ಗಾರ್ಡ್ಸ್ ಸಮಾದೇಷ್ಟರ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಮಂಜುನಾಥ ಗೊಂಡಬಾಳ ಮಾತನಾಡಿದರು. ಜಿಲ್ಲಾ ಹೋಮ್ ಗಾರ್ಡ್ಸ್ ಸಮಾದೇಷ್ಟ ಎಂ. ಎ. ಹನುಮಂತರಾವ್, ಘಟಕಾಧಿಕಾರಿ ರುದ್ರಪ್ಪ ಪತ್ತಾರ, ನರಸಣ್ಣನವರ, ಅಸ್ಲಾಂ, ಸಂಜೀವ್, ಶರಣಪ್ಪ, ಗೃಹ ರಕ್ಷಕರು ಇದ್ದರು.
ಕಾಂಗ್ರೆಸ್ ಕಚೇರಿ: ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ರಹೀಂಖಾನ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಂತಣ್ಣ ಮುದಗಲ್, ಜಿಲ್ಲಾ ಮಹಿಳಾ ಕಾಂಗ್ರೆಸ್
ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಮುಖಂಡರಾದ ಅಕ್ಬರ್ ಪಾಶಾ, ರತ್ನಮ್ಮ ಭರಮಪ್ಪ ನಗರ, ಭರಮಪ್ಪ ನಗರ, ಕಾಟನ್ ಪಾಶಾ, ಹನುಮರಡ್ಡಿ ಹಂಗನಕಟ್ಟಿ, ರವಿ ಕುರಗೋಡ, ಗವಿಸಿದಪ್ಪ ಚಿನ್ನೂರ, ಗವಿಸಿದ್ದಪ್ಪ ಮುದಗಲ್, ಕೃಷ್ಣಾ ಇಟ್ಟಂಗಿ, ಮಂಜುನಾಥ ಜಿ. ಗೊಂಡಬಾಳ, ರಮೇಶ ಹೂಗಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.