ಹಳ್ಳಕ್ಕೆ ಹರಿಯುತ್ತಿದೆ ಕೃಷ್ಣೆ ನೀರು
Team Udayavani, Jan 19, 2020, 2:57 PM IST
ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಪಟ್ಟಣದ ಸಂಪಿನವರೆಗೂ ಸರಬರಾಜಾಗುತ್ತಿರುವ ಕೃಷ್ಣಾ ನದಿ ನೀರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ವ್ಯರ್ಥವಾಗಿ ಹಳ್ಳಕ್ಕೆ ಹರಿಯುತ್ತಿದೆ. ಈ ರೀತಿಯಾಗಿ ನೀರು ಪೋಲಾಗುವುದನ್ನು ತಪ್ಪಿಸಲು 10 ಲಕ್ಷ ಲೀಟರ್ ಸಾಮಾರ್ಥ್ಯದ ನೆಲಮಟ್ಟದ ಜಲಾಗಾರದ ಅಗತ್ಯವಿದೆ.
ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಪಟ್ಟಣಕ್ಕೆ ಕೃಷ್ಣಾ ನದಿ ನೀರು ಪೂರೈಕೆಗೆ ಮೇಲ್ದರ್ಜೆಯ ಕಾಯಕಲ್ಪ ಕಲ್ಪಿಸಲಾಗಿದೆ. ಇದರಿಂದ ಪೂರೈಸಿದ ನೀರು, ಸಂಗ್ರಹಿಸಿಟ್ಟುಕೊಳ್ಳುವುದು ಅಸಾಧ್ಯವಾಗುತ್ತಿರುವುದು ಹೊಸ ಸಮಸ್ಯೆಯಾಗಿಸೃಷ್ಟಿಯಾಗಿದೆ. ಬದಲಾದ ನೀರು ಪೂರೈಕೆ ವ್ಯವಸ್ಥೆಯಲ್ಲಿ ಪಟ್ಟಣದಲ್ಲಿರುವ ಈಗಿರುವ ನೀರು ಸಂಗ್ರಹ ಟ್ಯಾಂಕ್‌ಗೆ ಅಧಿಕ ನೀರು ಪೂರೈಕೆಯಾಗುತ್ತಿದೆ. ಪಟ್ಟಣಕ್ಕೆ ಇನ್ನೂ ಓವರ್ ಹೆಡ್ ಟ್ಯಾಂಕ್, ನೆಲಮಟ್ಟದ ಜಲ ಸಂಗ್ರಹಗಾರ ಅವಶ್ಯಕವೆನಿಸುತ್ತಿದೆ. ಒಂದೆರೆಡು ಓವರ್ ಹೆಡ್ ಟ್ಯಾಂಕ್, ಎಕ್ಸಪ್ರಸ್ ಲೈನ್ ವ್ಯವಸ್ಥೆ ಕಲ್ಪಿಸಿದರೆ 10 ವರ್ಷಗಳವರೆಗೆ ಪಟ್ಟಣಕ್ಕೆ ನೀರಿನ ಸಮಸ್ಯೆ ಇಲ್ಲದೇ, ನಿಯಮಿತವಾಗಿ ದಿನದ 24 ತಾಸು ನೀರು ಪೂರೈಸಲು ಸಾಧ್ಯವಿದೆ.
ಕುಷ್ಟಗಿ, ಇಲಕಲ್, ಹುನಗುಂದ, ಆಲಮಟ್ಟಿವರೆಗೂ ವಿದ್ಯುತ್ ಪೂರೈಕೆ ನಾಲ್ಕು ಸ್ಟೇಷನ್ ವ್ಯಾಪ್ತಿಯಲ್ಲಿದೆ. ಆಲಮಟ್ಟಿ, ಹುನಗುಂದ ಎಕ್ಸಪ್ರಸ್ ಲೈನ್ ಇದ್ದು, ಇಲ್ಲಿ ಸಮಸ್ಯೆ ಇಲ್ಲ. ಸದ್ಯ ಸಮಸ್ಯೆಯಾಗಿರುವುದು ಇಲಕಲ್ ಹಾಗೂ ಕುಷ್ಟಗಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಎಕ್ಸಪ್ರಸ್ ಲೈನ್ ವ್ಯವಸ್ಥೆ ಇಲ್ಲ. ಆಲಮಟ್ಟಿಯಿಂದ ಪೂರೈಸಿದ ನೀರು ಕುಷ್ಟಗಿ ಪಟ್ಟಣದವರೆಗೂ ಹರಿದರೂ, ಇಲಕಲ್ ಇಲ್ಲವೇ ಕುಷ್ಟಗಿಯಲ್ಲಿ ವಿದ್ಯುತ್ ಸ್ಥಗಿತಗೊಂಡರೂ ನಿರಂತರವಾಗಿ ಪೈಪ್‌ಲೈನ್ ಗುರುತ್ವ ಆಧಾರಿತವಾಗಿರುವ ಹಿನ್ನೆಲೆಯಲ್ಲಿ ಒಂದು ತಾಸಿಗೂ ಅಧಿಕ ನೀರು ಹರಿಯುತ್ತಿದ್ದು, ಕುಷ್ಟಗಿಯಲ್ಲಿ ಸಂಗ್ರಹಸಮಸ್ಯೆಯಿಂದ ನೀರು ಹಳ್ಳಕ್ಕೆ ಹರಿಯುತ್ತಿದೆ.
ಕೆಲ ತಿಂಗಳಿಂದೀಚೆಗೆ ಮೋಟಾರ್ ಸಾಮಾರ್ಥ್ಯ 40 ಎಚ್.ಪಿ. ಬದಲಿಗೆ 86 ಎಲ್‌ಪಿಎಸ್ (ಲೀಟರ್ ಪರ್ ಸೆಕೆಂಡ್) ಮೇಲ್ದರ್ಜೆಯ ವ್ಯವಸ್ಥೆಯಾಗಿದ್ದು, ದಿನದ 12 ಗಂಟೆ ವಿದ್ಯುತ್ ಪೂರೈಕೆ ನಿರಂತರವಾಗಿದ್ದರೆ, 12 ತಾಸುಗಳಲ್ಲಿ ಪಟ್ಟಣಕ್ಕೆ ಸಾಕಾಗುವಷ್ಟು ನೀರು ಪೂರೈಸಬಹುದಾಗಿದೆ. ಈ ಹಿಂದೆ ಕಡಿಮೆ ಸಾಮಾರ್ಥ್ಯದ ವ್ಯವಸ್ಥೆಯಲ್ಲಿ ದಿನದ 24 ಗಂಟೆ ನೀರು ಪೂರೈಸಿದರೂ, ಪಟ್ಟಣಕ್ಕೆ ನೀರು ಸಾಲುತ್ತಿಲ್ಲ. ಇದೀಗ ಕೇವಲ 12 ಗಂಟೆಗಳಲ್ಲಿ ಇಡೀ ಪಟ್ಟಣಕ್ಕೆ ನೀರು ಪೂರೈಸಲು ಸಾಧ್ಯವಿದೆ.
ಜಮೀನು ಖರೀದಿ ವಿಳಂಬ: ಈ ನೀರನ್ನು ಶೇಖರಿಸಿಟ್ಟುಕೊಳ್ಳಲು ಪಟ್ಟಣದ ಹೊರವಲಯದ ಸಂಪಿನ ಪಕ್ಕದ ಒಂದು ಎಕರೆ ಜಮೀನು ಖರೀ ದಿಗಾಗಿ 25 ಲಕ್ಷ ರೂ. ಕಾಯ್ದಿರಿಸಲಾಗಿದ್ದು, ಜಿಲ್ಲಾಧಿ ಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸದರಿ ಜಮೀನು ಖರೀಸುವುದು ವಿಳಂಬವಾಗಿತ್ತಿದೆ. ಪಟ್ಟಣದಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ-50ಕ್ಕೆ ಹೊಂದಿ ಕೊಂಡಿರುವ ಜಮೀನು, ಸರ್ಕಾರ ನಿಗದಿ ಪಡಿಸಿದ ಮೌಲ್ಯಕ್ಕಿಂತ ಜಮೀನು ಮೌಲ್ಯ ಹೆಚ್ಚಿದೆ. ಸರ್ಕಾರದ ನಿಗದಿ ಬೆಲೆಯ ಬದಲಿಗೆ ಹೆಚ್ಚಿನ ಮೌಲ್ಯಕ್ಕೆ ಖರೀ ದಿಸಬೇಕಾದರೆ ಸರ್ಕಾರದಿಂದ ಅನುಮತಿ ಪಡೆದು ಸ್ಥಳೀಯ ಮಾರುಕಟ್ಟೆ ದರದಲ್ಲಿ ಖರೀಸಬೇಕಿದೆ. ಇದಕ್ಕೆ ಜಿಲ್ಲಾಧಿ ಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕಿದೆ.
ಕುಷ್ಟಗಿ ಹಾಗೂ ಇಳಕಲ್ ಪಟ್ಟಣ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ಕಡಿತ ಹಿನ್ನೆಲೆಯಲ್ಲಿ ಪೂರೈಸಿದ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ತಪ್ಪಿಸಲು ಅಂದಾಜು 10 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಅಗತ್ಯವಿದೆ. ಸಂಪ್ ಪಕ್ಕದ ಒಂದು ಎಕರೆ ಜಮೀನು ಖರೀದಿ ತ್ವರಿತವಾಗಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಧಿಕಾರಿಗಳೊಂದಿಗೆ ಚರ್ಚಿಸುವೆ. –ಅಮರೇಗೌಡ ಪಾಟೀಲ ಬಯ್ನಾಪೂರ, ಶಾಸಕ, ಕುಷ್ಟಗಿ
-ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.