ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!
Team Udayavani, May 14, 2024, 6:11 PM IST
ಉದಯವಾಣಿ ಸಮಾಚಾರ
ಕುಕನೂರು: ಪಟ್ಟಣದ ಗುದ್ನೇಪ್ಪನ ಮಠದಲ್ಲಿರುವ ರುದ್ರಮುನೀಶ್ವರ ಹಮಾಲರ ಕಾಲೋನಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಬೀದಿ ದೀಪಗಳಿಲ್ಲದೇ ಅನಾಥವಾಗಿದೆ. 2004ರಲ್ಲಿ ಸರ್ಕಾರ ಸಹಾಯಧನ ನೀಡಿ ಇಲ್ಲಿನ ಹಮಾಲರಿಗೆ ನೀಡಲಾದ ನಿವೇಶನಗಳ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸದ ಕಾರಣ ನಿವೇಶನಗಳಲ್ಲಿ ಜಾಲಿ ಮರಗಳು ಬೆಳೆದು ನಿಂತಿವೆ. ಹೀಗಾಗಿ ಈ ಕಾಲೋನಿಯು ವಿಷ ಜಂತುಗಳ ವಾಸಸ್ಥಾನವಾಗಿದೆ.
ಹೀಗಾಗಿ ಫಲಾನುಭವಿಗಳು ಈ ಕಾಲೋನಿಗೆ ಹೋಗಲು ಭಯ ಪಡುವಂತಾಗುದೆ. ಸರ್ಕಾರ ಡಾ|ಬಿ.ಆರ್. ಅಂಬೇಡ್ಕರ್, ರಾಜೀವ
ಗಾಂಧಿ ವಸತಿ ಯೋಜನೆ, ಬಸವ ಆವಾಸ್ ಇನ್ನಿತರೆ ಯೋಜನೆಗಳ ಮೂಲಕ ಮನೆಗಳನ್ನು ನೀಡಲಾಗಿದೆ.ನೀರಿನ ಅಭಾವದಿಂದ ಕೆಲವು ಪೂರ್ಣಗೊಂಡರೆ ಇನ್ನೂ ಕೆಲ ಮನೆಗಳನ್ನು ಅರೆಬರೆ ನಿರ್ಮಿಸಿ ಅರ್ಧದಲ್ಲೇ ಬಿಡಲಾಗಿದೆ. ಸರ್ಕಾರ ಈ ಕಾಲೋನಿಗೆ ಮೂಲ ಸೌಕರ್ಯ ನೀಡದಿರುವುದು ಈ ದುರಾವಸ್ಥೆಗೆ ಕಾರಣ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಜನರು ನೀರಿಲ್ಲದೇ ಇರುವುದರಿಂದ ಈ ಕಾಲೋನಿಯ ಮನೆಗಳಲ್ಲಿ ವಾಸವಾಗದೇ ಕಟ್ಟಿದ ಮನೆಗಳ ಬಿಟ್ಟು ಬೇರೆಡೆಗೆ ವಾಸವಾಗುತ್ತಿದ್ದಾರೆ.
ಹೀಗಾಗಿ ಕಟ್ಟಿರುವ ಮನೆಗಳು ಕೂಡ ಅಳಿದು ಹೋಗುತ್ತಿವೆ. ಕೆಲವರು ಬೇರೆ ಕಡೆ ಹೋಗಲಾರದೇ ಅನಿವಾರ್ಯವಾಗಿ ಇಲ್ಲಿಯೇ ವಾಸವಾಗಿದ್ದಾರೆ. ಹಾವು, ಚೇಳು ಇನ್ನಿತರ ವಿಷ ಜಂತುಗಳ ಮಧ್ಯೆಯೇ ಭಯದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಹಲವು
ಬಾರಿ ಪಪಂಗೆ ಮನವಿ ನೀಡಲಾಗಿದೆ. ಆದರೆ ಬೆರಳೆಣಿಕೆಯಷ್ಟು ಮನೆಗಳಿಗೆ ಎನ್ನುವ ನೆಪದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ನಿವೇಶನಗಳ ದಾಖಲಾತಿ ಕೇಳಿದರೆ ಬೀದಿ ದೀಪ, ಸ್ವತ್ಛತೆ, ಗ್ರಂಥಾಲಯ ಇನ್ನಿತರೆ ಎಲ್ಲ ಕರಗಳ ಟ್ಯಾಕ್ಸ್ ಹಾಕುತ್ತಾರೆ. ಆದರೆ ಕಾಲೋನಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರುತ್ತಾರೆ ಎನ್ನುವುದು ನಿವಾಸಿಗಳ ಆರೋಪ.
ಅಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ನೀರಿನ ವ್ಯವಸ್ಥೆ ಕಲ್ಪಿಸಲು ಹಣ ಕಾಯ್ದಿರಿಸಲಾಗಿದೆ ಎನ್ನುವ ಬಗ್ಗೆ ಕೇಳಿದ್ದೇನೆ. ನಾನು ಈಗ ಬಂದಿದ್ದು, ಯಾವ ಯೋಜನೆಯಲ್ಲಿ ಹಣ ಇಟ್ಟಿದ್ದಾರೆ ನೋಡಿ ಸೌಲಭ್ಯ ಕಲ್ಪಿಸುತ್ತೇವೆ.
*ರವೀಂದ್ರ ಬಾಗಲ್ಕೋಟಿ,ಮುಖ್ಯಾಧಿಕಾರಿ,
ಪಟ್ಟಣ ಪಂಚಾಯತಿ, ಕುಕನೂರು
ಸೌಕರ್ಯ ನೀಡುವಂತೆ ಸಂಘದ ವತಿಯಿಂದ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ
ಕೈಗೊಂಡಿಲ್ಲ. ಕುಡಿಯುವ ನೀರು, ರಸ್ತೆ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ.
*ನಿಂಗಪ್ಪ ಗೊರ್ಲೆಕೊಪ್ಪ,
ಹಮಾಲರ ಸಂಘದ ಅಧ್ಯಕ್ಷ
*ಬಸವರಾಜ ಕೋನಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.