ಕುಕನೂರು ತಾಲೂಕಿಗಿಲ್ಲ ಹೊಸ ಕ್ಷೇತ್ರ
Team Udayavani, Mar 30, 2021, 1:19 PM IST
ಯಲಬುರ್ಗಾ(ಕುಕನೂರು): ಗ್ರಾನೈಟ್ ನಗರ ಖ್ಯಾತಿಯ ನೂತನ ಕುಕನೂರು ತಾಲೂಕಿನಲ್ಲಿ ಜಿಪಂ,ತಾಪಂ ಕ್ಷೇತ್ರ ಪುನರ್ ವಿಂಗಡನೆ ನಂತರ ಮೂರು ಜಿಪಂ ಕ್ಷೇತ್ರಗಳು, 11 ತಾಪಂ ಕ್ಷೇತ್ರಗಳು ಲಭಿಸಿವೆ.
ಜಿಲ್ಲೆಯಲ್ಲೇ ದೊಡ್ಡ ಪಟ್ಟಣ ಖ್ಯಾತಿಯ ಜತೆಗೆಗ್ರಾನೈಟ್ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಅಭಿವೃದ್ಧಿಸಾಧಿಸುತ್ತಿರುವ ತಾಲೂಕಿಗೆ 15 ಗ್ರಾಪಂಗಳಿದ್ದು,58 ಗ್ರಾಮಗಳು ಒಳಪಡುತ್ತವೆ. ನೂತನ ತಾಲೂಕುರಚನೆ ಮಾಡಿದ ಬಳಿಕ ಸರಕಾರ ಕ್ಷೇತ್ರ ಪುನರ್‌ವಿಂಗಡನೆ ಮಾಡಲಾಗಿದ್ದು, ಈ ಮೊದಲಿದ್ದ 3 ಜಿಪಂ,11 ತಾಪಂ ಕ್ಷೇತ್ರಗಳಿದ್ದವು. ಇದರಲ್ಲಿ ಯಾವುದೇಬದಲಾವಣೆಯನ್ನು ಮಾಡಿಲ್ಲ. ಅದರ ಬದಲಿಗೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಪಂ ಕ್ಷೇತ್ರ ಹಾಗೂ ಕೆಲಗ್ರಾಮಗಳನ್ನು ಬೇರೆ ಬೇರೆ ಮಾಡಲಾಗಿದೆ.3 ಜಿಪಂ ಕ್ಷೇತ್ರಗಳು: ಕುಕನೂರು ತಾಲೂಕಿನಲ್ಲಿತಳಕಲ್, ಇಟಗಿ, ಮಂಗಳೂರು ಈ ಮೂರು ಜಿಪಂ ಕ್ಷೇತ್ರಗಳಾಗಿವೆ.
11ತಾಪಂ ಕ್ಷೇತ್ರಗಳು: ತಾಲೂಕು ಒಣಬೇಸಾಯಹೊಂದಿದೆ. ಮಳೆಯಾಶ್ರಿತ ಪ್ರದೇಶವಾಗಿದ್ದು, ಕೃಷಿಚಟುವಟಿಕೆ ಮೂಲ ಕಸಬು ಆಗಿದೆ. ಬಹುತೇಕಯರೇ ಪ್ರದೇಶ ಹೊಂದಿದೆ. ತಾಲೂಕಿನಲ್ಲಿ ಬಳಗೇರಿ,ಮಂಗಳೂರು, ಹಿರೇಬಿಡನಾಳ, ಕುದರಿಮೋತಿ,ತಳಕಲ್, ಶಿರೂರು, ಬೆಣಕಲ್, ಬನ್ನಿಕೊಪ್ಪ, ಇಟಗಿ,ರಾಜೂರು, ಯರೇಹಂಚಿನಾಳ ಇವುಗಳು ತಾಪಂ ಕ್ಷೇತ್ರಗಳಾಗಿವೆ.
ಕ್ಷೇತ್ರ ಪುನರ್ ವಿಂಗಡನೆ ಬಳಿಕಕುಕನೂರು ತಾಲೂಕಿಗೆ ಇನ್ನೊಂದುಯರೇಹಂಚಿನಾಳ ಜಿಪಂ ಕ್ಷೇತ್ರಒಲಿಯಲಿದೆ ಎಂಬ ಆಶಾಭಾವ ತಾಲೂಕಿನ ಜನರಲ್ಲಿತ್ತು. ಆದರೆಈ ಭಾಗಕ್ಕೆ ಹೊಸ ಜಿಪಂ ಕ್ಷೇತ್ರಗಳಭಾಗ್ಯ ದೊರೆಯದೇ ಇರುವುದು ನಿರಾಸೆಗೆ ಕಾರಣವಾಗಿದೆ. ಈಮೂಲಕ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ತಾಲೂಕಿಗೆಅನ್ಯಾಯವಾಗಿದೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.
ತಳಕಲ್ ಜಿಪಂ ಕ್ಷೇತ್ರ: ಕುಕನೂರತಾಲೂಕಿನಲ್ಲಿ ಅತಿ ಹೆಚ್ಚು ಅಭಿವೃದ್ಧಿಹೊಂದಿದ ಗ್ರಾಮಗಳ ಪೈಕಿತಳಕಲ್ ಒಂದಾಗಿದೆ. ತಳಕಲ್‌ಇಂಜನಿಯರಿಂಗ್ ಕಾಲೇಜು,ರಾಷ್ಟ್ರೀಯ ಹೆದ್ದಾರಿ ಸೇರಿದಂತೆವಿವಿಧ ಹಲವಾರು ಸೌಲಭ್ಯಗಳನ್ನುಹೊಂದಿದೆ. ಪಟ್ಟಣ ಪ್ರದೇಶಗಳ ರೀತಿಯಲ್ಲಿಅಭಿವೃದ್ಧಿ ಹೊಂದುತ್ತಿದೆ. ಮಾಜಿ ಸಚಿವ ಬಸವರಾಜರಾಯರಡ್ಡಿಯವರ ಸ್ವಗ್ರಾಮವಾಗಿದೆ. ಮೂರು ತಾಪಂಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರಲಿವೆ. ಇಟಗಿ ಜಿಪಂ ಕ್ಷೇತ್ರ: ದೇವಾಲಯಗಳ ಚಕ್ರವರ್ತಿಮಹಾದೇವ ದೇವಾಲಯವನ್ನು ಹೊಂದಿದಗ್ರಾಮವಾಗಿದೆ. ಇಡೀ ರಾಜ್ಯದಲ್ಲಿಯೇ ಪ್ರಸಿದ್ಧಿಹೊಂದಿದ ಗ್ರಾಮವಾಗಿದೆ. ಕ್ಷೇತ್ರದ ಶಾಸಕ ಹಾಲಪ್ಪಆಚಾರ ಗ್ರಾಮ ಮಸಬಹಂಚಿನಾಳ ಗ್ರಾಮ ಇದೇಜಿಪಂ ವ್ಯಾಪ್ತಿಯಲ್ಲಿ ಬರಲಿದ್ದು, ಈ ಕ್ಷೇತ್ರವು ಸಹ ಇಡೀತಾಲೂಕಿನಲ್ಲಿಯೇ ಗಮನ ಸೆಳೆಯಲಿದೆ. ನಾಲ್ಕು ತಾಪಂಕ್ಷೇತ್ರ ಬರಲಿವೆ. ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ ಸಹ ಇದೇ ಗ್ರಾಮದವರು.
ಮಂಗಳೂರು ಜಿಪಂ: ಕುಕನೂರು ತಾಲೂಕಿನಲ್ಲಿಬರುವ ದೊಡ್ಡ ಗ್ರಾಮಗಳ ಪೈಕಿ ಮಂಗಳೂರುಒಂದಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು,ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಈ ಕ್ಷೇತ್ರವ್ಯಾಪ್ತಿಯ ಜನ ಬೀಜೋತ್ಪಾದನೆ ಕಾರ್ಯದಲ್ಲಿಹೆಚ್ಚು ತೊಡಗಿಕೊಂಡಿರುತ್ತಾರೆ. ಈ ಜಿಪಂ ಕ್ಷೇತ್ರವನ್ನುಹೆಚ್ಚು ಬಾರಿ ಹೊರಗಿನವರೇ ಪ್ರತಿನಿ ಧಿಸಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ನಾಲ್ಕು ತಾಪಂ ಬರುತ್ತವೆ.
ಸೇರ್ಪಡೆ: ತಳಕಲ್ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿದ್ದಯರೇಹಂಚಿನಾಳ, ಬನ್ನಿಕೊಪ್ಪ ತಾಪಂ ಕ್ಷೇತ್ರ ಹಾಗೂಅದರ ಗ್ರಾಮಗಳನ್ನು ಇಟಗಿಗೆ ಸೇರಿಸಲಾಗಿದೆ. ಇದಕ್ಕೆಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ. ಇಟಗಿ ಜಪಂ ವ್ಯಾಪ್ತಿಯಲ್ಲಿದ್ದ ಬಳಗೇರಿಯನ್ನು ಮಂಗಳೂರಿಗೆಸೇರಿಸಲಾಗಿದೆ. ಒಟ್ಟಾರೆಯಾಗಿ ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ತಾಲೂಕಿನಲ್ಲಿರುವ ಸಂಖ್ಯೆಹೆಚ್ಚಾಗಿಲ್ಲ. ಇದ್ದ ಕ್ಷೇತ್ರಗಳಲ್ಲಿ ಬದಲಾವಣೆ ಮಾಡಿದ್ದನ್ನು ಕಾಣಬಹುದು.
ಹಾಲಿ-ಮಾಜಿ ಪೈಪೋಟಿ :
ಕುಕನೂರು ತಾಲೂಕಿನ ಜಿಪಂ, ತಾಪಂಕ್ಷೇತ್ರಗಳ ಚುನಾವಣೆಯಲ್ಲಿ ಶಾಸಕ ಹಾಲಪ್ಪಆಚಾರ್ ಹಾಗೂ ಮಾಜಿ ಸಚಿವ ಬಸವರಾಜರಾಯರಡ್ಡಿ ನಡುವಿನ ಪೈಪೋಟಿ ತೀವ್ರವಾಗಿದೆಎಂದು ಹೇಳಬಹುದು. ಕಣದಲ್ಲಿರುವ ಜಿಪಂಕ್ಷೇತ್ರಗಳ ಅಭ್ಯರ್ಥಿಗಳ ಪ್ರತಿಷ್ಠೆಗಿಂತ ಇವರಪ್ರತಿಷ್ಠೆಯೇ ಹೆಚ್ಚಾಗಿರುತ್ತದೆ. ತಾಲೂಕಿನಪೈಕಿ ತಳಕಲ್, ಇಟಗಿ ಬಹಳ ಜಿದ್ದಾಜಿದ್ದಿನಿಂದಕೂಡಿದೆ. ಈಗಿನಿಂದಲೇ ತಯಾರಿ ಜೋರಿದೆಎಂದು ಹೇಳಲಾಗುತ್ತಿದೆ. ತಳಕಲ್ ಮಾಜಿಸಚಿವ ಬಸವರಾಜ ರಾಯರಡ್ಡಿ ಅವರಿಗೆ ಪ್ರತಿಷ್ಠೆಯಾದರೇ, ಇಟಗಿ ಶಾಸಕ ಹಾಲಪ್ಪಆಚಾರ ಅವರಿಗೆ ಪ್ರತಿಷ್ಠೆಯಾಗಿ ಪರಣಮಿಸಿದೆ.ಇಡೀ ತಾಲೂಕಿನಲ್ಲಿಯೇ ಇವು ಹೈವೊಲ್ಟೇಜ್ ಕ್ಷೇತ್ರವಾಗಿವೆ.
-ಮಲ್ಲಪ್ಪ ಮಾಟರಂಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.