ಕುಷ್ಟಗಿ: ಬೆಳ್ಳಂಬೆಳಗ್ಗೆ 16 ಅಂಗಡಿಗಳು ತೆರವು
Team Udayavani, Mar 27, 2022, 12:35 PM IST
ಕುಷ್ಟಗಿ: ಇಲ್ಲಿನ ಪುರಸಭೆ ಅಧೀನದಲ್ಲಿರುವ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಕೆಇಬಿ ಪಕ್ಕದ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆಯಲ್ಲಿರುವ ಅಂಗಡಿಕಾರರನ್ನು ಹೈ ಕೋರ್ಟ್ ಅದೇಶದ ಮೇರೆಗೆ ಸರಕು ಸರಂಜಾಮುಗಳ ಸಮೇತ ಹೊರಗೆ ಹಾಕಿ ತೆರವುಗೊಳಿಸಿದ ಘಟನೆ ಭಾನುವರ ನಡೆಯಿತು.
ಕುಷ್ಟಗಿ ಪುರಸಭೆಯ ಕೆಳಗೆ 10 ಹಾಗೂ ಮೇಲೆ 6 ಮಳಿಗೆಗಳ ಬಾಡಿಗೆ ಒಪ್ಪಂದ ಕಳೆದ 2015-16ರಲ್ಲಿ ಕೊನೆಗೊಂಡಿತ್ತು. ಹೊಸದಾಗಿ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ. ಕಾರಣ ಸದರಿ ಅಂಗಡಿಕಾರರು ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ತಡೆಯಾಜ್ಞೆ ತಂದಿದ್ದರು. ಪುರಸಭೆ ಹಾಗೂ ಅಂಗಡಿಕಾರರ ಒಳ ಒಪ್ಪಂದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡನೆಯಾಗಿರಲಿಲ್ಲ. ಈ ಸಂಬಂಧ 16 ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇತ್ತೀಚಿನ ಅಧಿಕಾರಿಗಳು ನೂತನವಾಗಿ ಆಯ್ಕೆಯಾದ ಸದಸ್ಯರ ಬಿಗಿ ಪಟ್ಟಿನಿಂದ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದೆ.
ಇದನ್ನೂ ಓದಿ:PSI ಮೌನೇಶ್ ವಿಷಯ ಕೈ ಬಿಡಿ : ಪ್ರತಿಭಟನಾಕಾರರಿಗೆ ಶ್ರೀರಾಮುಲು ಸಿಂಹಘರ್ಜನೆ ಸೇನೆಯಿಂದ ಮನವಿ
ಕಳೆದ ಅ.31 ರಂದು ಮಾನ್ಯ ನ್ಯಾಯಾಲಯ ಸದರಿ ಅಂಗಡಿಕಾರರನ್ನು 45 ದಿನಗಳ ಗಡವು ನೀಡಿತ್ತು. ಸದರಿ ಗಡವಿಗೆ ಅಂಗಡಿಕಾರರು ಅಂಗಡಿಯ ಸರಕು ಸರಂಜಾಮು ಸಹಿತ ತೆರವುಗೊಳಿಸದೇ ನ್ಯಾಯಾಲಯದ ಅದೇಶ ಉಲ್ಲಂಘಿಸಿದ್ದರಿಂದ ಪುರಸಭೆ ಪೌರ ಕಾರ್ಮಿಕರು ಭಾನುವಾರ ಬೆಳಗ್ಗೆ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಿದರು.
ಈ ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಹಾಗೂ ಪಿಎಸೈ ತಿಮ್ಮಣ್ಣ ನಾಯಕ್ ನೇತೃತ್ವದಲ್ಲಿ ಪೊಲೀಸ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಕರ್ನಾಟಕ ಸಾರ್ವಜನಿಕ ಆಸ್ತಿ ಕಾಯ್ದೆ (ಕರ್ನಾಟಕ ಪಬ್ಲಿಕ್ ಪ್ರಾಮೈಸಿಸ್) 1974 ರ ಕಾಯ್ದೆ 5ನೇ ಕಲಂ ನಿಯಮಗಳ ಪ್ರಕಾರ ಕುಷ್ಟಗಿ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿರುವ ಬಾಡಿಗೆದಾರರನ್ನು ತೆರವುಗೊಳಿಸಿ, ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ವಹಿಸುವ ನಿಟ್ಟಿನಲ್ಲಿ ಹಾಗೂ ನ್ಯಾಯಾಲಯದಲ್ಲಿ ಸಮರ್ಪಕವಾದ ನಿರ್ವಹಣೆಯಲ್ಲಿ ಅಧಿಕಾರಿಗಳ ವಿಫಲವಾಗಿರುವುದು ಮನಗಂಡಿರುವ ಮಾನ್ಯ ನ್ಯಾಯಾಲಯ ತೆರವಿನ ಈ ಆದೇಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.