ಕುಷ್ಟಗಿ: ಯೋಗ ಹೇಳಿಕೊಡುವ “ರಾಜಸ್ಥಾನ ವ್ಯಾಪಾರಿ’
ತಮ್ಮ ಬಟ್ಟೆ ಅಂಗಡಿ ಗ್ರಾಹಕರಿಗೂ ಯೋಗದ ಬಗ್ಗೆ ಹೇಳುತ್ತಾರೆ.
Team Udayavani, Jun 21, 2023, 5:36 PM IST
ಕುಷ್ಟಗಿ: ರಾಜಸ್ಥಾನದಿಂದ ಜೀವನೋಪಾಯಕ್ಕಾಗಿ ಕುಷ್ಟಗಿಗೆ ಬಂದ ವ್ಯಾಪಾರಿಯೊಬ್ಬರು ಪತಂಜಲಿ ಯೋಗ ಶಿಬಿರದಲ್ಲಿ ಯೋಗ ಕಲಿತು, ಯೋಗ ಸಾಧಕರೆನಿಸಿ ಈಗ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದಾರೆ.
ಮೂಲತಃ ರಾಜಸ್ಥಾನ ರಾಜ್ಯದ ಬಾರಮೇರ್ ಜಿಲ್ಲೆಯ ಬಾಡ್ಗಾ ಗ್ರಾಮದವರು, ಸದ್ಯ ಕುಷ್ಟಗಿಯಲ್ಲಿ ಬಟ್ಟೆ ವ್ಯಾಪಾರಿಯಾಗಿರುವ
ಅಸ್ಲಾರಾಮ್ 2012 ರಲ್ಲಿ ಬುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಪತಂಜಲಿ ಯೋಗ ಸಮಿತಿ ಶಿಬಿರದಲ್ಲಿ
ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು. ಅಂದಿನಿಂದ ಪ್ರತಿದಿನ ಚಾಚೂ ತಪ್ಪದೇ ಯೋಗಾಸನ ಮಾಡುತ್ತಿದ್ದಾರೆ.
2015ರಿಂದ ಯೋಗ ಶಿಕ್ಷಕರಾಗಿರುವ ಇವರು ಹಲವು ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಒಂದು ವೇಳೆ ಶಿಬಿರಾರ್ಥಿಗಳು
ಬಾರದೇ ಇದ್ದರೂ ತಾವೊಬ್ಬರೇ ಯೋಗಾಸನ ಮಾಡುತ್ತಾರೆ. ತಮ್ಮ ಬಟ್ಟೆ ಅಂಗಡಿ ಗ್ರಾಹಕರಿಗೂ ಯೋಗದ ಬಗ್ಗೆ ಹೇಳುತ್ತಾರೆ.
ಬಾಬಾ ರಾಮದೇವ ಅವರ ಯೋಗವಿದ್ಯೆಯಿಂದ ಪ್ರಭಾವಿತರಾಗಿರುವ ಅಸ್ಲಾಂ ರಾಮ್ ಅವರು, ಹರಿದ್ವಾರಕ್ಕೆ ಬಾಬಾ
ರಾಮ್‌ದೇವ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಬಳ್ಳಾರಿ, ಹೊಸಪೇಟೆ, ವಿಜಯಪುರದಲ್ಲಿ ಅವರ ಯೋಗ ಸಾಧನೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರಾಜಸ್ಥಾನಿ ಆಗಿರುವುದರಿಂದ ಆರಂಭದಲ್ಲಿ ಕನ್ನಡ ಭಾಷೆ ಸಮಸ್ಯೆಯಾಗಿತ್ತು. ಯೋಗಾಸನ ಶಿಬಿರದಲ್ಲಿ ಹಾಗೂ ಬಟ್ಟೆ ಅಂಗಡಿಯಲ್ಲಿ ಕನ್ನಡ ಭಾಷೆ ಕಲಿತಿರುವೆ. ಮಕ್ಕಳು ಸಹ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ವೀರೇಶ ಬಂಗಾರಶೆಟ್ಟರ್ ಅವರು ಆಯೋಜಿಸಿದ್ದ ಯೋಗಾಸನ ಶಿಬಿರದಲ್ಲಿ ಅವಕಾಶ ಕಲ್ಪಿಸಿದ್ದರಿಂದ ಈ ಮಟ್ಟದ ಬೆಳವಣಿಗೆ ಸಾಧ್ಯವಾಯಿತು ಎನ್ನುತ್ತಾರೆ ಯೋಗ ಸಾಧಕ ಅಸ್ಲಾರಾಮ್.
*ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.