Kushtagi: ಹತ್ತಿಗೆ ಯೋಗ್ಯ ಬೆಲೆ; ವಿಸ್ತಾರಗೊಳ್ಳುತ್ತಿದೆ ಕ್ಷೇತ್ರ
Team Udayavani, Sep 25, 2023, 6:37 PM IST
ಕುಷ್ಟಗಿ: ಇತ್ತೀಚಿನ ವರ್ಷಗಳಲ್ಲಿ ಹತ್ತಿಗೆ ಯೋಗ್ಯ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹತ್ತಿ ಕ್ಷೇತ್ರ ಕ್ರಮೇಣ ವಿಸ್ತಾರಗೊಳ್ಳುತ್ತಿದೆ. ಕುಷ್ಟಗಿ ಎಪಿಎಂಸಿಯಲ್ಲಿ ಪ್ರತ್ಯೇಕ ಹತ್ತಿ ಖರೀದಿಗೆ ಉಪ ಮಾರುಕಟ್ಟೆ ಅಗತ್ಯವಾಗಿದೆ. ಎಪಿಎಂಸಿ ಯಾರ್ಡ್‌ನಲ್ಲಿ ಹತ್ತಿ, ಹುಣಸೆಹಣ್ಣು ಎಪಿಎಂಸಿಯಿಂದ ಹೊರಗೆ ಇಡಲಾಗಿದೆ. ಹತ್ತಿ, ಹುಣಸೆಹಣ್ಣು ಹೊರತುಪಡಿಸಿ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಸದ್ಯ ಹತ್ತಿ ಆವಕ ಆರಂಭವಾಗಿದ್ದು, ಕುಷ್ಟಗಿ ತಾಲೂಕು ಮಾತ್ರವಲ್ಲ ಬೇರೆ ಜಿಲ್ಲೆಗಳಿಂದಲೂ ಹತ್ತಿ ಬರುತ್ತಿದ್ದು, ಟನ್‌ಗಟ್ಟಲೇ ಹತ್ತಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಹತ್ತಿ ಬೆಳೆದ ರೈತರಿಗೆ ಈ ಬೆಳವಣಿಗೆ ಸಾಕಷ್ಟು ಅನುಕೂಲವಾಗಿದೆ. ಇಲ್ಲವಾದರೆ ಹತ್ತಿ ಬೆಳೆದವರು ಸಾಗಾಣಿಕೆಯ ಹೆಚ್ಚುವರಿ ವೆಚ್ಚದಲ್ಲಿ ಗದಗ, ಸಿಂಧನೂರು, ರಾಯಚೂರು ಸಾಗಿಸುವುದು ಅನಿವಾರ್ಯವಾಗಿತ್ತು. ಕಳೆದ ವರ್ಷ ಹತ್ತಿ ಪ್ರತಿ ಕ್ವಿಂಟಲ್‌ಗೆ 9 ಸಾವಿರದಿಂದ 11 ಸಾವಿರ ರೂ. ವರೆಗೆ ಮಾರಾಟವಾಗಿದ್ದು ಸದ್ಯ ಪ್ರತಿ ಕ್ವಿಂಟಲ್ ಗೆ 6,500 ರಿಂದ 7ಸಾವಿರ ರೂ. ಧಾರಣಿ ಇದೆ.
ಬಹುತೇಕ ಬೀಜೋತ್ಪಾದನೆ ಹತ್ತಿಯಲ್ಲಿ ಬೀಜ ಬೇರ್ಪಡಿಸಿ ಉಳಿಯುವ ಹತ್ತಿ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಕ್ಕಿತ್ತು. ಕಳೆದ ವರ್ಷ ಹತ್ತಿ ಗುಣಮಟ್ಟದ ಉತ್ಪನ್ನ ಹಾಗೂ ಉತ್ತಮ ಬೆಲೆಯಿಂದ ಉತ್ತೇಜಿತರಾಗಿ ರೈತರು ಈ ವರ್ಷದಲ್ಲಿ ಹತ್ತಿ ಕ್ಷೇತ್ರ ವಿಸ್ತರಿಸಿ ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದರು. ಆದರೆ ಬೆಳೆ ಕಾಯಿ ಕಟ್ಟಿದ ಸಂದರ್ಭದಲ್ಲಿ ನಿರಂತರ ಮಳೆಗೆ ಸಿಲುಕಿ, ಉತ್ಪನ್ನ ಹಾಳಾದರೆ
ಕೆಲವೆಡೆ ಬೀಜೋತ್ಪಾದನೆಯ ಗಂಡು ಹತ್ತಿ ಸರಿಯಾದ ಬೆಳವಣಿಗೆ ಇಲ್ಲದೇ ಇಳುವರಿ ಕುಂಠಿತಕ್ಕೆ ಕಾರಣವಾಯಿತು. ಇದರಿಂದ
ಹತ್ತಿ ಇಳುವರಿ ತಕ್ಕಮಟ್ಟಿನ ಗುಣಮಟ್ಟ ಇದ್ದು, ಧಾರಣಿ ಪ್ರತಿ ಕ್ವಿಂಟಲ್‌ಗೆ 6,500 ರೂ. ದಿಂದ 7 ಸಾವಿರ ರೂ. ಇದೆ. ಈಗಿನ
ಪರಿಸ್ಥಿತಿಯಲ್ಲಿ ಈ ಧಾರಣಿ ಉತ್ತಮವಾಗಿದೆ ಎನ್ನುವ ಅಭಿಪ್ರಾಯ.
ಮೂರು ದಶಕದ ಹಿಂದೆ ಹತ್ತಿಬೆಳೆಯುತ್ತಿದ್ದರು. ಇಲ್ಲಿ ಬೀಜ ಹಾಗೂ ಹತ್ತಿ ಬೇರ್ಪಡಿಸುವ ಎರಡು ಮಿಲ್‌ಗಳಿದ್ದವು. ಹತ್ತಿ ಉತ್ಪನ್ನ ಕಡಿಮೆಯಾಗುತ್ತಿದ್ದಂತೆ ಮಿಲ್‌ಗಳು ಸ್ಥಗಿತಗೊಂಡವು. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ರೈತರು ಹತ್ತಿ ಬೆಳೆಯಲಾರಂಭಿಸಿದ್ದು ಪರವಾನಗಿ ಪಡೆದ ಮುದೇನೂರು, ಹುಲಿಯಾಪುರ ಖರೀ ದಾರರು ರೈತರಿಂದ ಖರೀದಿಸಿ ಮಾರಾಟ ಮಾಡುತ್ತಿದ್ದು, ಇದು ರೈತರಿಗೆ ಅನಕೂಲವೇ ಆಗಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲಿಮಠ.
ವರ್ಷದಿಂದ ವರ್ಷಕ್ಕೆ ಹತ್ತಿ ಕ್ಷೇತ್ರ ವಿಸ್ತರಣೆಯಾಗಿದ್ದು, ರೈತರಿಗೆ ಅಗತ್ಯತೆ ಅನುಗುಣವಾಗಿ ಆರಂಭಿಕ ಹಂತದಲ್ಲಿ ಪ್ರತ್ಯೇಕವಾಗಿ ಹತ್ತಿ ಉಪ ಮಾರುಕಟ್ಟೆ ಆರಂಭಿಸಿದರೆ ರೈತರಿಗೆ ಅನಕೂಲವಾಗಲಿದೆ ಎನ್ನುತ್ತಾರೆ ವರ್ತಕ ಸುರೇಶ ಮಂಗಳೂರು.
ಎಪಿಎಂಸಿಯಲ್ಲಿಲ್ಲ ಪೂರಕ ವ್ಯವಸ್ಥೆ
ಸ್ಥಳೀಯ ಎಪಿಎಂಸಿಯಲ್ಲಿ ಹತ್ತಿಗೆ ಮಾರುಕಟ್ಟೆಗೆ ದೊಡ್ಡದಾದ ಗೋದಾಮು ಹಾಗೂ ಬೆಂಕಿಯಿಂದ ರಕ್ಷಣೆಗೆ ಪೂರಕ ವ್ಯವಸ್ಥಿತ ಮಾರುಕಟ್ಟೆ ಆಗತ್ಯವಿದೆ. ಆದರೆ ಇಲ್ಲಿನ ಎಪಿಎಂಸಿ ಹತ್ತಿ ಹೊರತುಪಡಿಸಿ ಇತರೆ ಕೃಷಿ ಉತ್ಪನ್ನಗಳಿಗೆ ಮಾತ್ರ ಅವಕಾಶವಿದೆ.
ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆ ಹತ್ತಿಗೆ ಆದ್ಯತೆ ನೀಡಿದ್ದು, ಈ ವರ್ಷ ಮಳೆ ಕೊರತೆ ಮಧ್ಯೆಯೂ ಅಲ್ಪಸ್ವಲ್ಪ ಮಳೆಯಲ್ಲಿ
ತಕ್ಕಮಟ್ಟಿನ ಇಳುವರಿ ಬಂದಿದೆ. ಮುಂದಿನ ವರ್ಷದಿಂದ ಎಪಿಎಂಸಿ ವ್ಯಾಪ್ತಿಯಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ಆರಂಭಿಸುವ ಚಿಂತನೆ ಇದೆ.
ಮಹಾಂತಯ್ಯ ಅರಳಲಿಮಠ,
ಅಧ್ಯಕ್ಷರು, ಎಪಿಎಂಸಿ ವರ್ತಕರ ಸಂಘ
ಈ ಮೊದಲು ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ವ್ಯವಸ್ಥೆ ಇತ್ತು. ಕಳೆದ 2022ರ ಆಗಸ್ಟ್ ಆದೇಶದನ್ವಯ ರೈತರ ಉತ್ಪನ್ನ ಖರೀದಿಗೆ ಮುಕ್ತಗೊಳಿಸಿದೆ. ಹತ್ತಿ ಖರೀ ದಿ ಹಾಗೂ ಸಂಗ್ರಹಣೆಗೆ ಪೂರಕ ವ್ಯವಸ್ಥೆ ಇಲ್ಲಿಲ್ಲ.
ಟಿ. ನೀಲಪ್ಪ ಶೆಟ್ಟಿ,
ಕಾರ್ಯದರ್ಶಿ ಎಪಿಎಂಸಿ ಕುಷ್ಟಗಿ
*ಮಂಜುನಾಥ ಮಹಾಲಿಂಗಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.