ಕುಷ್ಟಗಿ: ಹಳ್ಳದ ಪ್ರವಾಹ ದಾಟಲು ಜೆಸಿಬಿ ಬಳಸಿದ ಗ್ರಾಮಸ್ಥರು; ವಿಡಿಯೋ ವೈರಲ್
Team Udayavani, Oct 13, 2022, 11:19 AM IST
ಕುಷ್ಟಗಿ: ಹಳ್ಳದ ಪ್ರವಾಹ ದಾಟಲು ಕೆಲ ಗ್ರಾಮಸ್ಥರು ಜೆಸಿಬಿ ಬಳಸಿ ಹುಚ್ಚು ಸಾಹಸ ಪ್ರದರ್ಶಿಸಿದ ಘಟನೆ ಬಂಡ್ರಗಲ್ ಹಳ್ಳದಲ್ಲಿ ನಡೆದಿದೆ.
ಕಾಟಾಪೂರ, ಕಬ್ಬರಗಿ, ಬೀಳಗಿ, ಬಂಡ್ರಗಲ್ ಪ್ರದೇಶದಲ್ಲಿ ಅ.12ರ ಬುಧವಾರ ಮಧ್ಯಾಹ್ನ ಗುಡುಗು ಸಿಡಿಲಬ್ಬರದ ಜೊತೆಗೆ ಭಾರಿ ಮಳೆಯಾಗಿದೆ. ಈ ಮಳೆಗೆ ಕಬ್ಬರಗಿಯ ಜಾತಿಗ್ಯಾನ, ಬಂಡ್ರಗಲ್ ಹಳ್ಳಗಳಲ್ಲಿ ನೀರು ಉಕ್ಕಿ ಹರಿದಿವೆ. ಬಂಡ್ರಗಲ್ ಹಳ್ಳ ಏರಿ ಬಂದ ಹಳ್ಳದ ಪ್ರವಾಹದಲ್ಲಿ ಕೆಲವರು ಜೆಸಿಬಿ ಬಕೇಟ್‌ನಲ್ಲಿ ಹಳ್ಳದ ಪ್ರವಾಹ ಲೆಕ್ಕಿಸದೇ ಹಳ್ಳದಾಟಿದ್ದಾರೆ.
ಜೆಸಿಬಿಯಲ್ಲಿ ಹಳ್ಳ ದಾಟುವುದನ್ನು ಹಳ್ಳದ ದಡದಲ್ಲಿದ್ದವರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪೊಲೀಸರು ಹಾಗೂ ನಾಲ್ವರು ಮಹಿಳೆಯರು ಹಳ್ಳ ದಾಟುವ ಪ್ರಯತ್ನ ಮಾಡಿ ಹಳ್ಳದ ಪ್ರವಾಹಕ್ಕೆ ಸಿಲುಕಿ ದುರಂತ ಸಾವಿಗೆ ಕಾರಣವಾಗಿತ್ತು. ಈ ದುರಂತ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಬಂಡ್ರಗಲ್ ಹಳ್ಳದಲ್ಲಿ ಸ್ಥಳೀಯರು ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಯಾವುದೇ ದುರಂತ ನಡೆಯದೇ ಇರುವುದು ಸಮಧಾನಕರ ವಿಷಯ ಎನ್ನಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.